More

    ಕೆರೆ ಒತ್ತುವರಿ ತೆರವುಗೊಳಿಸುವಂತೆ ಕುರಿ, ಜಾನುವಾರುಗಳೊಂದಿಗೆ ಪ್ರತಿಭಟನೆ

    ಕೋಲಾರ: ಕೆರೆಯನ್ನು ಒತ್ತುವರಿದಾರರಿಂದ ರಕ್ಷಿಸಿ ಗ್ರಾಮದ ಕುರಿಗಳ ಮಾರಣ ಹೋಮ ತಡೆಯುವಂತೆ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಮುಖಂಡರು ಹಾಗೂ ರೈತರು ಜಾನುವಾರು, ಕುರಿಗಳೊಂದಿಗೆ ಜಿಲ್ಲಾಡಳಿತ ಭವನದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

    ತಾಲೂಕಿನ ಹರಟಿ ಗ್ರಾಪಂ ವ್ಯಾಪ್ತಿಯ ಶಿಳ್ಳಂಗೆರೆ ಗ್ರಾಮದಲ್ಲಿನ ಕೆರೆ ಅಂಗಳವನ್ನು ಬಲಾಢ್ಯರು ಹಾಗೂ ರಾಜಕೀಯ ನಾಯಕರ ಆಪ್ತರು ಒತ್ತುವರಿ ಮಾಡಿಕೊಂಡಿದ್ದಾರೆ. ಜಾನುವಾರುಗಳು ಮೇಯಲು ಕೆರೆಗೆ ಹೋಗುತ್ತಿದ್ದು, ಒತ್ತುವರಿ ಜಾಗದಲ್ಲಿ ಬೆಳೆಗಳಿಗೆ ಔಷಧ ಸಿಂಪಡಿಸಿದ್ದರಿಂದ ಇದನ್ನು ತಿಂದಿರುವ ಜಾನುವಾರು ಹಾಗೂ ಸುಮಾರು 25 ಕುರಿಗಳು ಸಾವನ್ನಪ್ಪಿವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

    ನೊಂದ ಕುರಿ ಮತ್ತು ದನಗಳ ಮಾಲೀಕರು ಕೆರೆಗಳ ಒತ್ತುವರಿದಾರರನ್ನು ಪ್ರಶ್ನಿಸಿದಾಗ ದಬಾಯಿಸಿದ್ದಾರೆ. ಒಂದರಿಂದ ಇನ್ನೊಂದು ಕೆರೆಗೆ ಹೋಗಲು ಇದ್ದ ರಸ್ತೆಗಳಲ್ಲಿ ಕೂಡ ಔಷಧ ಸಿಂಪಡಿಸಿ ಭಯದ ವಾತಾವರಣ ಸೃಷ್ಠಿಸುತ್ತಿದ್ದಾರೆ. ಈ ಕೂಡಲೆ ಒತ್ತುವರಿದಾರರ ವಿರುದ್ಧ ಕಾನೂನು ಕ್ರಮ ಕೈಗೊಂಡು ಒತ್ತುವರಿ ತೆರವುಗೊಳಿಸಿ ಜಾನುವಾರುಗಳಿಗೆ ಮೇಯಲು ಅನುಕೂಲ ಮಾಡಿಕೊಡಬೇಕು. ಈಗಾಗಲೆ ಸತ್ತಿರುವ ಸಾಕು ಪ್ರಾಣಿಗಳ ಮಾಲೀಕರಿಗೆ ಪರಿಹಾರ ಕೊಡಬೇಕೆಂದು ಜಿಲ್ಲಾ ಘಟಕದ ಅಧ್ಯಕ್ಷ ಕಲ್ವಮಂಜಲಿ ರಾಮು ಶಿವಣ್ಣ ಒತ್ತಾಯಿಸಿ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ಗೆ ಮನವಿ ಸಲ್ಲಿಸಿದರು.

    ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ನಾರಾಯಣಸ್ವಾಮಿ, ಉಪಾಧ್ಯಕ್ಷ ನಂದಕುಮಾರ್, ಕಾರ್ಯಾಧ್ಯಕ್ಷ ಗಣೇಶ್, ಪದಾಧಿಕಾರಿಗಳಾದ ಶಿಳ್ಳಂಗೆರೆ ವೇಣು, ಜಬೀವುಲ್ಲಾ, ಆಬೀದ್, ಫಿರ್ದೋಸ್, ಗ್ರಾಮಸ್ಥರಾದ ಚಿನ್ನಯ್ಯಪ್ಪ, ನಾಗೇಶ್, ತಿರಿಪಳ್ಳಿಯಪ್ಪ, ಮುನಿಯಪ್ಪ, ವೆಂಕಟೇಶ್‌ಗೌಡ, ಚಲಪತಿ, ಶ್ರೀನಿವಾಸ್, ಸರಸ್ಪತಮ್ಮ, ಶಾಂತಮ್ಮ, ಮಂಜುಳ, ಭಾರತಿ, ಸಂತೋಷ್ ಗೌಡ, ನಂಜೇಗೌಡ, ಶ್ರೀನಿವಾಸ್, ನಾರಾಯಣಸ್ವಾಮಿ, ಮಂಜುನಾಥ್‌ಸಿಂಗ್, ನಾಗರಾಜ್, ಲಕ್ಷ್ಮಣ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts