ಕೊಕಟನೂರ: ಸಾರಾಯಿ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ

ಕೊಕಟನೂರ: ಅಥಣಿ ತಾಲೂಕಿನ ಯಲಿಹಡಲಗಿ ಗ್ರಾಮದಲ್ಲಿ ಶನಿವಾರ ರಾತ್ರಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, ಸಾರಾಯಿ ವಶಪಡಿಸಿಕೊಂಡಿದ್ದಾರೆ.

ಯಲಿಹಡಲಗಿ ಗ್ರಾಮದ ಸಿದರಾಯ ಅಣ್ಣಪ್ಪ ನಾಯಿಕ ಬಂಧಿತ ಆರೋಪಿ.ಕೈ ಚೀಲದಲ್ಲಿ ಮದ್ಯದ ಬಾಟಲ್ ಇಟ್ಟುಕೊಂಡು ಗ್ರಾಮದ ಬಸ್ ನಿಲ್ದಾಣದ ಬಳಿ ಮಾರಾಟ ಮಾಡುತ್ತಿರುವ ವೇಳೆ ಸ್ಥಳೀಯರಿಂದ ಖಚಿತ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿದ ಪೊಲೀಸರು ವಿವಿಧ ಕಂಪನಿಯ 180 ಎಂ.ಎಲ್‌ನ 29 ಟೆಟ್ರಾ ಪ್ಯಾಕ್ ಹಾಗೂ 90 ಎಂ.ಎಲ್‌ನ 39 ಟೆಟ್ರಾ ಪ್ಯಾಕ್ ವಶಪಡಿಸಿಕೊಂಡಿದ್ದಾರೆ. ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್‌ಐ ರಮೇಶ ಅವಜಿ, ಸಿಬ್ಬಂದಿ ಮಹಾಂತೇಶ ಖೋತ ಹಾಗೂ ಮಾರುತಿ ಆಲಗೂರ ದಾಳಿಯಲ್ಲಿ ಪಾಲ್ಗೊಂಡಿದ್ದರು.