More

    ವೇಳಾಪಟ್ಟಿ ಬಗ್ಗೆ ಕೊಹ್ಲಿ ಕಿಡಿ

    ಆಕ್ಲೆಂಡ್: ಆಸ್ಟ್ರೇಲಿಯಾ ವಿರುದ್ಧದ ತವರಿನ ಏಕದಿನ ಸರಣಿ ಮುಕ್ತಾಯಗೊಂಡ ಐದು ದಿನಗಳಲ್ಲಿಯೇ ನ್ಯೂಜಿಲೆಂಡ್ ಪ್ರವಾಸದಲ್ಲಿ ಮೊದಲ ಟಿ20 ಆಡುತ್ತಿರುವ ಬಗ್ಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ನ್ಯೂಜಿಲೆಂಡ್ ಪ್ರವಾಸದ ವೇಳಾಪಟ್ಟಿ ಬಗ್ಗೆ ಕೊಹ್ಲಿ ಬೇಸರ ತೋಡಿಕೊಂಡ ಬೆನ್ನಲ್ಲಿಯೇ ಬಿಸಿಸಿಐ ವೇಳಾಪಟ್ಟಿಯನ್ನು ಸಮರ್ಥಿಸಿಕೊಂಡಿದೆ.

    ಗುರುವಾರ ಪಂದ್ಯಪೂರ್ವ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ, ‘ಮುಂದೊಂದು ದಿನ ವಿಮಾನದಿಂದ ಸೀದಾ ಸ್ಟೇಡಿಯಂ ಬಳಿಯೇ ಇಳಿದು, ನೇರವಾಗಿ ಪಂದ್ಯವಾಡುವ ದಿನಗಳು ಬರಬಹುದು’ ಎಂದು ಆತಂಕ ವ್ಯಕ್ತಪಡಿಸಿದರು. ಭಾರತದ ಕಾಲಮಾನಕ್ಕಿಂತ ನ್ಯೂಜಿಲೆಂಡ್ ಸಮಯ ಏಳು ಗಂಟೆ ಮುಂದಿದೆ. ಇಂಥ ಸರಣಿಗಳಿದ್ದ ಸಮಯದಲ್ಲಿ ಹೊಸ ವಾತಾವರಣಕ್ಕೆ ಶೀಘ್ರವಾಗಿ ಹೊಂದಿಕೊಳ್ಳುವುದು ಕಷ್ಟವಾಗಲಿದೆ ಎಂದರು. ಈ ಸಂಗತಿಗಳ ಬಗ್ಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಗಮನಹರಿಸುತ್ತಾರೆ ಎಂದು ನಂಬಿದ್ದೇನೆ. ಇಂದಿನ ದಿನಗಳಲ್ಲಿ ಬೆನ್ನುಬೆನ್ನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಡೆಯುತ್ತಿದೆ ಎಂದು ಹೇಳಿದರು. ಆಸ್ಟ್ರೇಲಿಯಾ ವಿರುದ್ಧದ ಕಳೆದ ಸರಣಿ ಏಕದಿನ ಮಾದರಿಯದ್ದಾಗಿತ್ತು. ಸಾಕಷ್ಟು ಸಮಯವನ್ನು ನಾವು ಮೈದಾನದಲ್ಲಿ ಕಳೆದಿದ್ದೇವೆ. ಹಾಗಾಗಿ ಕಡಿಮೆ ಸಮಯದಲ್ಲೂ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಸಿದ್ಧತೆ ನಡೆಸುವುದು ನಮಗೆ ಕಷ್ಟವಾಗಲಾರದು ಎಂದರು.-ಪಿಟಿಐ

    ಬಿಸಿಸಿಐ ಬೇಸರ

    ನಿಬಿಡ ವೇಳಾಪಟ್ಟಿಯ ಬಗ್ಗೆ ಕೊಹ್ಲಿ ಬಿಸಿಸಿಐ ಜತೆ ರ್ಚಚಿಸದೆ ಮಾಧ್ಯಮದ ನಡುವೆ ಬೇಸರ ವ್ಯಕ್ತಪಡಿಸಿದ ಕುರಿತಾಗಿ ಬಿಸಿಸಿಐ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ‘ಇದು ಕೊಹ್ಲಿಯ ಅಭಿಪ್ರಾಯ ಇರಬಹುದು. ಸಾಧ್ಯವಾದ ಮಟ್ಟಿಗೆ ಸರಳವಾದ ವೇಳಾಪಟ್ಟಿಯನ್ನು ಬಿಸಿಸಿಐ ಸಿದ್ಧ ಮಾಡುತ್ತದೆ. ವಿಶ್ವಕಪ್ ವೇಳೆ ಆಟಗಾರರಿಗೆ ಸಾಕಷ್ಟು ಸಮಯದ ವಿಶ್ರಾಂತಿ ನೀಡಿದ್ದೇವೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts