ಸತತ ಸೋಲಿನ ಸುಳಿಯಿಂದ ತಂಡವನ್ನು ಪಾರು ಮಾಡಿದ ಕೊಹ್ಲಿಗೆ 12 ಲಕ್ಷ ರೂ. ದಂಡ

ಮೊಹಾಲಿ: ಸತತ 6 ಸೋಲುಗಳಿಂದ ಕಂಗೆಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್-12ರಲ್ಲಿ ಗೆಲುವಿನ ಖಾತೆ ತೆರೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ ನಾಯಕ ವಿರಾಟ್​ ಕೊಹ್ಲಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.

ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡವನ್ನು ಆರ್​ಸಿಬಿ ತಂಡ 8 ವಿಕೆಟ್​ಗಳಿಂದ ಮಣಿಸಿ ಈ ಐಪಿಎಲ್​ ಋತುವಿನಲ್ಲಿ ಗೆಲುವಿನ ಖಾತೆ ತೆರೆದಿತ್ತು. ಆದರೆ ನಿಧಾನಗತಿಯಲ್ಲಿ ಓವರ್​ ಪೂರ್ಣಗೊಳಿಸಿ ಐಪಿಎಲ್​ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕೊಹ್ಲಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಐಪಿಎಲ್​ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಋತುವಿನಲ್ಲಿ ಅಜಿಂಕ್ಯ ರಹಾನೆ ಮತ್ತು ರೋಹತ್​ ಶರ್ಮಾ ಅವರಿಗೂ ಸಹ ನಿಧಾನಗತಿಯ ಓವರ್​ ಮಾಡಿದ್ದಕ್ಕಾಗಿ ತಲಾ 12 ಲಕ್ಷ ರೂ. ದಂಡ ವಿಧಿಸಲಾಗಿತ್ತು. (ಏಜೆನ್ಸೀಸ್​)