More

    ಕಾಫಿ ಕ್ರಿಕೆಟರ್ಸ್‌, ಟೀಂ ಭಗವತಿ ಪ್ಲೇ ಆಫ್‌ಗೆ

    ಮಡಿಕೇರಿ: ಕೊಡಗು ಗೌಡ ಯುವ ವೇದಿಕೆ ಆಶ್ರಯದಲ್ಲಿ ಮೊಟ್ಟಮೊದಲ ಬಾರಿಗೆ ಅರೆಭಾಷಿಕ ಗೌಡ ಜನಾಂಗದವರಿಗೆ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಾಫಿ ಕ್ರಿಕೆಟರ್ಸ್‌, ಟೀಂ ಭಗವತಿ ತಂಡಗಳು ಪ್ಲೇ ಆಫ್ ಹಂತಕ್ಕೆ ಪ್ರವೇಶ ಪಡೆಯಿತು.


    ಮೊದಲ ಪಂದ್ಯ ಕಾಫಿ ಕ್ರಿಕೆಟರ್ಸ್‌ ಮತ್ತು ಜಿ.ಕಿಂಗ್ಸ್ ಸಿದ್ದಲಿಂಗಪುರ ನಡುವೆ ನಡೆಯಿತು. ಟಾಸ್ ಸೋತ ಕಾಫಿ ಕ್ರಿಕೆಟರ್ಸ್‌ ನಿಗದಿತ ೧೦ ಓವರ್‌ನಲ್ಲಿ ೭ ವಿಕೆಟ್ ಕಳೆದುಕೊಂಡು ೧೧೬ ರನ್ ಕಲೆ ಹಾಕಿತ್ತು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಮಾಡಿದ ಅನಿಲ್ ಕುಡೆಕಲ್ಲು ಮತ್ತು ಸಿ.ವಿ.ವಿವನ್ ಶತಕದ ಜತೆಯಾಟ ಆಡಿದರು. ಈ ಆಟಕ್ಕೆ ಜಿ.ಕಿಂಗ್ಸ್ ಸಿದ್ದಲಿಂಗಪುರ ತಂಡದ ಹರ್ಷ ಬ್ರೇಕ್ ಹಾಕಿದರು. ಅನಿಲ್ ಕುಡೆಕಲ್ಲು ೭೬, ವಿವನ್ ೨೨ ರನ್ ದಾಖಲಿಸಿದರೆ, ನಂತರದ ಓವರ್‌ನಲ್ಲಿ ೧೧೬ ರನ್ ದಾಖಲಿಸುವಷ್ಟರಲ್ಲಿ ೭ ವಿಕೆಟ್ ಕಳೆದುಕೊಂಡಿತು. ಸಿದ್ದಲಿಂಗಪುರ ಪರ ಹರ್ಷ ೩ ವಿಕೆಟ್ ಪಡೆದರೆ, ಯತೀನ್ ೧ ವಿಕೆಟ್ ಪಡೆದರು. ಉಳಿದ ೩ ವಿಕೆಟನ್ನು ರನೌಟ್ ಮುಖಂತಾರ ಪಡೆದುಕೊಂಡರು.


    ಗುರಿಬೆನ್ನಟ್ಟಿದ ಜಿ.ಕಿಂಗ್ಸ್ ಸಿದ್ದಲಿಂಗಪುರ ತಂಡ ೬ ವಿಕೆಟ್ ಕಳೆದುಕೊಂಡು ೯೯ರನ್ ದಾಖಲಿಸಿ ೧೭ರನ್‌ಗಳ ಅಂತರದಲ್ಲಿ ಸೋಲುಂಡಿತ್ತು. ಮೊದಲ ಓವರ್‌ನಲ್ಲೇ ಬಿರುಸಿನ ಆಟಕ್ಕೆ ಮುಂದಾಗಿದ್ದ ಯತೀನ್ ೧೬ ರನ್ ದಾಖಲಿಸಿ ಅನಿಲ್‌ಗೆ ವಿಕೆಟ್ ಒಪ್ಪಿಸಿದರು. ನಂತರ ರಾಕೇಶ್ ೨೬, ಅನ್ವಿತ್ ಕುದುಪಜೆ ೨೨, ನಿತಿನ್ ಚೊಕ್ಕಾಡಿ ೧೫ ರನ್‌ಗಳ ಕಾಣಿಕೆ ನೀಡಿದರು. ಕಾಫಿ ಕ್ರಿಕೆಟರ್ಸ್‌ ಪರ ಜೆಪಿ ಮಾವಾಜಿ ೩ ವಿಕೆಟ್ ಕಬಳಿಸಿದರೆ, ಅನಿಲ್ ಕುಡೆಕಲ್ಲು, ಪಾರ್ಥ, ಸಿ.ವಿ.ವಿವನ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು. ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಕಾಫಿ ಕ್ರಿಕೆಟರ್ಸ್‌ ತಂಡದ ಅನಿಲ್ ಕುಡೆಕಲ್ಲು ಪಡೆದುಕೊಂಡರು.


    ಟೀಂ ಭಗವತಿ ಮತ್ತು ಕಾಫಿ ಕ್ರಿಕೆಟರ್ಸ್‌ ಕ್ರೀಡಾಕೂಟದ ಕೊನೆಯ ಲೀಗ್ ಪಂದ್ಯವನ್ನಾಡಿತು. ಟಾಸ್ ಗೆದ್ದ ಟೀಂ ಭಗವತಿ ನಿಗದಿತ ೧೦ ಓವರ್‌ನಲ್ಲಿ ೫ ವಿಕೆಟ್ ಕಳೆದುಕೊಂಡು ೮೯ರನ್ ಕಲೆ ಹಾಕಿದರು. ತಂಡದ ಪರ ಬಿ.ಡಿ.ವರುಣ್ ರಾಜ್ ೨೦ ಎಸೆತದಲ್ಲಿ ೨೮ರನ್, ರಂಜು ೧೯ ಎಸೆತದಲ್ಲಿ ೩೪ ರನ್ ಕಲೆ ಹಾಕಿದರು. ಕಾಫಿ ಕ್ರಿಕೆಟರ್ಸ್‌ ಪರ ಪಾರ್ಥ, ಸಿ.ವಿ.ವಿವಾನ್, ಜೆಪಿ ಮಾವಾಜಿ ತಲಾ ಒಂದೊಂದು ವಿಕೆಟ್ ಪಡೆದರು.


    ಗುರಿಬೆನ್ನಟ್ಟಿದ ಕಾಫಿ ಕ್ರಿಕೆಟರ್ಸ್‌ ತಂಡ ೮.೪ ಓವರ್‌ನಲ್ಲಿ ೨ ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ತಂಡದ ಪರ ಅನಿಲ್ ಕುಡೆಕಲ್ಲು ೧೯ ಎಸೆತದಲ್ಲಿ ೩೩ರನ್ ಕಲೆ ಹಾಕಿದರೆ, ಸಿ.ವಿ.ವಿವಾನ್ ೧೦ ಎಸೆತದಲ್ಲಿ ೫೩ರನ್ ಹಾಗೂ ಮಿಥುನ್ ೧೧ ಎಸೆತದಲ್ಲಿ ೧೭ರನ್ ಕಲೆ ಹಾಕಿದರು. ಟೀಂ ಭಗವತಿ ಪರ ಕೆ.ಟಿ.ಪ್ರಶಾಂತ್, ಬಿ.ಡಿ.ವರುಣ್ ರಾಜ್ ತಲಾ ಒಂದೊಂದು ವಿಕೆಟ್ ಕಬಳಿಸಿದರು. ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಕಾಫಿ ಕ್ರಿಕೆಟರ್ಸ್‌ ತಂಡದ ಸಿ.ವಿ.ವಿವಾನ್ ಪಡೆದುಕೊಂಡರು. ಟೀಂ ಭಗವತಿಯ ಪ್ರಮುಖ ಆಟಗಾರ ಸುಳ್ಯಕೋಡಿ ರಿಷಿ ಬೋಪಣ್ಣ ಅನುಪಸ್ಥಿತಿ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts