Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಅಧಿಕಾರಕ್ಕಾಗಿ ಮತ್ತೊಬ್ಬ ಅಣ್ಣ ಹುಟ್ಟಿಕೊಳ್ಳಲಿದ್ದಾನೆ: ಕೋಡಿಮಠದ ಶ್ರೀ ಭವಿಷ್ಯ

Wednesday, 12.09.2018, 7:12 PM       No Comments

ಹಾಸನ: ಕಾಂಗ್ರೆಸ್ ಪಕ್ಷದೊಳಗಿನ ಕಲಹದಿಂದಾಗಿ ರಾಜ್ಯ ಸಮ್ಮಿಶ್ರ ಸರಕಾರ ಶೀಘ್ರ ಪತನವಾಗಲಿದೆ ಎಂಬ ವದಂತಿ ಜೋರಾಗಿರುವಾಗಲೇ ರಾಜ್ಯದಲ್ಲಿ ರಾಜಕೀಯ ವಿಪ್ಲವ ಇನ್ನೂ ಮುಂದುವರಿಯಲಿದ್ದು, ಅಧಿಕಾರಕ್ಕಾಗಿ ಮತ್ತೊಬ್ಬ ಅಣ್ಣ ಹುಟ್ಟಿಕೊಳ್ಳಲಿದ್ದಾನೆ ಎಂದು ಹಾಸನ ಜಿಲ್ಲೆ ಕೋಡಿಮಠದ ಶ್ರೀ ಶಿವಯೋಗಿ ಶಿವಾನಂದ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಅರಸೀಕೆರೆ ತಾಲೂಕು ಮಾಡಾಳು ಗ್ರಾಮದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಭವಿಷ್ಯ ಏನಾಗಲಿದೆ ಎಂಬುದನ್ನು ಮುಂದಿನ ನವೆಂಬರ್​ವರೆಗೆ ಕಾದು ನೋಡಿ. ರಾಜ್ಯದಲ್ಲಿ ಇನ್ನೂ ಮಳೆಯಾಗುವ ಲಕ್ಷಣಗಳು ಹೆಚ್ಚಾಗಿವೆ. ದೊಡ್ಡ ದೊಡ್ಡ ನಗರಗಳಲ್ಲಿ ಭೂಮಿ ಕಂಪಿಸಿ ಸಾವು ನೋವು-ರೋಗ ರುಜಿನ ಹೆಚ್ಚಾಗಲಿವೆ. ಜನಗಳಲ್ಲಿ ಭಯಭೀತಿ ಹೆಚ್ಚಾಗಲಿದೆ ಎಂದು ಭವಿಷ್ಯ ನುಡಿದರು.

ಅಟಲ್ ಬಿಹಾರಿ ವಾಜಪೇಯಿ ರೀತಿಯಲ್ಲಿ ಮತ್ತೊಬ್ಬ ಗಣ್ಯನಾಯಕರು ನವೆಂಬರ್ ಒಳಗೆ ವಿಧಿವಶರಾಗಲಿದ್ದಾರೆ. ಆ ರೀತಿಯ ಸೂತಕ ಮುಂದುವರಿಯಲಿದೆ ಎಂದ ಸ್ವಾಮೀಜಿ, ಭ್ರಾತೃ ಬಲ ಹೆಚ್ಚೀತು ಎಂದು ಈ ಹಿಂದೆಯೇ ಹೇಳಿದ್ದೆ. ಅದರಂತೆ ಬೆಳಗಾವಿಯಲ್ಲೀಗ ಯಾರಿಂದ ಕಲಹ ನಡೆಯುತ್ತಿದೆ ಎಂದು ಮರುಪ್ರಶ್ನೆ ಹಾಕಿದರು. ಇನ್ನೂ ಅಂಥದೇ ಸಮಸ್ಯೆ ಭವಿಷ್ಯದಲ್ಲಿ ಸೃಷ್ಟಿಯಾಗಲಿದೆ. ನಾನು ಹೇಳಿದ್ದು ಯಾವುದೂ ಸುಳ್ಳಾಗಲ್ಲ, ಎಲ್ಲದಕ್ಕೂ ನವೆಂಬರ್ ವರೆಗೂ ಕಾದು ನೋಡಿ ಎಂದಷ್ಟೇ ಹೇಳಿದರು.

ದಂಡ ಬೀಸಲಿದೆ ಎಂಬುದು ನಿಜವಾಯ್ತು

ದಂಡ ಬೀಸಲಿದೆ ಎಂದು ಭವಿಷ್ಯ ಹೇಳಿದ್ದೆ. ಅಂತೆಯೇ ತಮಿಳುನಾಡಿನಲ್ಲಿ ಕರುಣಾನಿಧಿ ಸತ್ತ ಕೂಡಲೇ ಎಐಡಿಎಂಕೆ ಬಣ ಬಲವಾಯಿತು. ಅಂತ್ಯಸಂಸ್ಕಾರ ಜಾಗದ ವಿವಾದ ಶುರುವಾಯಿತು. ಹೈಕೋರ್ಟ್ ದಂಡ ಬೀಸಿದ ನಂತರ ಕೊನೆಗೂ ಅಂತ್ಯಸಂಸ್ಕಾರ ನೆರವೇರಿತು ಎಂದು ತಾವೇ ನುಡಿದಿದ್ದ ಭವಿಷ್ಯ ನೆನಪು ಮಾಡಿದರು.

ರಾಜ್ಯದಲ್ಲೂ ದಂಡ ಬೀಸಲಿದೆ

ರಾಜ್ಯದಲ್ಲೂ ಅದೇ ರೀತಿಯ ದಂಡ ಬೀಸಲಿದೆ ಎಂದು ಎಚ್ಚರಿಸಿದ ಸ್ವಾಮೀಜಿ, ರಾಜ್ಯದಲ್ಲಿ ಅಧಿಕಾರಕ್ಕಾಗಿ ಇನ್ನೂ ಒಬ್ಬ ಅಣ್ಣ ಹುಟ್ಟಿಕೊಳ್ಳಲಿದ್ದಾನೆ. ಸ್ವಲ್ಪ ನಿಧಾನದಿಂದ ಕಾಯಿರಿ ಎಂದು ಹೇಳುವ ಮೂಲಕ ರಾಜ್ಯ ರಾಜಕೀಯದ ಭವಿಷ್ಯ ಹೇಗೆ ಬೇಕಾದರೂ ಬದಲಾಗಬಹುದು ಎಂದರು.

Leave a Reply

Your email address will not be published. Required fields are marked *

Back To Top