“ಅರಸನ ಆಯಸ್ಸು ಉಸಿರಲ್ಲಿ ನಿಂತೀತು….” ಕೋಡಿ ಮಠದ ಶ್ರೀ ಭವಿಷ್ಯ 

ಹಾಸನ: ಅರಸನ ಆಯುಷ್ಯ ಉಸಿರಲ್ಲಿ ನಿಂತೀತು..ಭ್ರಾತೃ ಬಲ ಹೆಚ್ಚಾದೀತು” ಎಂದು ಅರಸೀಕೆರೆ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ.

ಚಂದ್ರಗ್ರಹಣ ಹಿನ್ನೆಲೆಯಲ್ಲಿ ಭವಿಷ್ಯ ನುಡಿದಿರುವ ಶ್ರೀಗಳು, “ಅರಸನ ಆಯಸ್ಸು ಉಸಿರಲ್ಲಿ ನಿಂತೀತು, ಪರಸಕ್ಕೆ ಭಂಗ, ಪ್ರಸಂಗಕ್ಕೆ ಹಾನಿ, ಭ್ರಾತೃ ಬೆಂಕಿ ಹಿಡಿದಾನು ಎಂದು ಹೇಳಿದ್ದು ಈಗ ವಿವಿಧ ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ.

ರಾಜಕೀಯ ವಿಪ್ಲವ ಹೆಚ್ಚಾದೀತು, ಗ್ರಹಣಗಳು ಪಾಕೃತಿಕ ವಿಪತ್ತು ತರುತ್ತವೆ. ಮಳೆ ಹೆಚ್ಚಾಗುತ್ತದೆ, ಭೂಮಿ ನಡುಗುತ್ತದೆ. ಈ ಬಾರಿ ವಿಶೇಷವಾಗಿ ಸೂರ್ಯ ಮತ್ತು ಚಂದ್ರ ಗ್ರಹಣಗಳು ಒಟ್ಟಿಗೇ ಬಂದಿವೆ. ವಿಶೇಷವಾಗಿ ಬರುವ ದಿನಗಳು ಕಷ್ಟ ತರಲಿವೆ ಎಂದು ನಿಗೂಢವಾಗಿ ಭವಿಷ್ಯ ನುಡಿದಿದ್ದಾರೆ.

ಭ್ರಾತೃಬೆಂಕಿ ಹಿಡಿಯುತ್ತಾನೆ ಎಂಬುದನ್ನು ಎಚ್​.ಡಿ.ಕುಮಾರಸ್ವಾಮಿಯವರ ಸಹೋದರ ರೇವಣ್ಣ ಬಂಡಾಯ ಏಳುತ್ತಾರೆ ಎಂದೂ ಕೆಲವರು ವಿಶ್ಲೇಷಿಸಿದ್ದಾರೆ.