ಸಮ್ಮಿಶ್ರ ಸರ್ಕಾರದ ಆಯಸ್ಸು ಇನ್ನೆರಡು ತಿಂಗಳು ಮಾತ್ರ: ಕೋಡಿ ಮಠದ ಶ್ರೀ ಭವಿಷ್ಯ

ಹಾಸನ: ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಸಚಿವರಾಗಿದ್ದ ಎನ್‌ ಮಹೇಶ್‌ ರಾಜೀನಾಮೆ ಬೆನ್ನಲ್ಲೇ ಕೋಡಿಮಠದ ಶ್ರೀ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದು, ಮೈತ್ರಿ ಸರ್ಕಾರದ ಭವಿಷ್ಯ ಇನ್ನೆರಡು ತಿಂಗಳು ಮಾತ್ರ ಎಂದಿದ್ದಾರೆ.

ಅರಸೀಕೆರೆಯ ಕೋಡಿಮಠದಲ್ಲಿ ಮಾತನಾಡಿದ ಅವರು, ಮಾರ್ಮಿಕವಾಗಿ ಸ್ಫೋಟಕ ಭವಿಷ್ಯ ನುಡಿದ ಕೋಡಿಶ್ರೀ, ವರ್ಷಾಂತ್ಯದವರೆಗೂ ಮಳೆಯಾಗಲಿದೆ. ದ್ವೇಷ – ಅಸೂಯೆ ಹೆಚ್ಚಳವಾಗುತ್ತದೆ. 2 ತಿಂಗಳು ಕಾದು ನೋಡಿ ಎಂದು ಶ್ರೀಗಳು ತಿಳಿಸಿದ್ದಾರೆ.

ಸಮ್ಮಿಶ್ರ ಸರ್ಕಾರದ ಮೊದಲ ವಿಕೆಟ್‌ ಪತನವಾಗಿರುವ ಬೆನ್ನಲ್ಲೇ ಕೋಡಿ ಮಠದ ಶ್ರೀಗಳ ಭವಿಷ್ಯ ಕುತೂಹಲಕ್ಕೆ ಕಾರಣವಾಗಿದೆ. ಇನ್ನು ಬೆಳಗ್ಗೆಯಷ್ಟೇ ಬಿಜೆಪಿ ಶಾಸಕ ಆರ್‌ ಅಶೋಕ್‌ ಕೂಡ ಒಂದೆರಡು ತಿಂಗಳಲ್ಲಿ ಸರ್ಕಾರ ರಚನೆ ಮಾಡುತ್ತೇವೆ ಎಂದು ಹೇಳಿದ್ದರು. (ದಿಗ್ವಿಜಯ ನ್ಯೂಸ್)

2 Replies to “ಸಮ್ಮಿಶ್ರ ಸರ್ಕಾರದ ಆಯಸ್ಸು ಇನ್ನೆರಡು ತಿಂಗಳು ಮಾತ್ರ: ಕೋಡಿ ಮಠದ ಶ್ರೀ ಭವಿಷ್ಯ”

  1. ಯಾವ ಸ್ವಾಮೀಜಿ ಭವಿಷ್ಯ ಕರೆ ಇರುವುದಿಲ್ಲ ತಮ್ಮ ಭವಿಷ್ಯ ತಮಗೆ ಗೊತ್ತು ಇರುವುದಿಲ್ಲ ಯಾವ ಸರ್ಕಾರ ಬಿಳುವುದಿಲ್ಲಾ ಸುಮ್ಮನೆ ಜನರ ಮನಸ್ಸು ಕೆಡುಸುತ್ತೀರಿ ನಿಮಗೆ ಏನು ಲಾಭ ಸ್ವಾಮೀಜಿ ಸುಳ್ಳು ಯಾಕೆ ಹೇಳತ್ತಿರಿ

  2. ಇಂತಹ ಭವಿಷ್ಯಗಳೆಂದಿಗೂ ನಿಜವಾಗುವುದಿಲ್ಲ.

Comments are closed.