ಅದೋನಿ ತಂಡಕ್ಕೆ 2 ಲಕ್ಷ ರೂ. ಬಹುಮಾನ ವಿತರಣೆ

ವಿಜಯವಾಣಿ ಸುದ್ದಿಜಾಲ ಕೊಡೇಕಲ್
ಅತ್ಯಂತ ಕುತೂಹಲ ಮೂಡಿಸಿದ್ದ ಆರ್ಟಿಜೆ ಚಾಲೇಂಜರ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ತವರಿನ ತಂಡದವಾದ ರವಿದಾದಾ ನಾರಾಯಣಪುರ ವಿರುದ್ಧ ದೋನಿ ತಂಡ 60 ರನಗಳಿಂದ ಗೆಲುವು ಸಾಧಿಸಿ ಆರ್ಟಿಜೆ ಚಾಲೆಂಜರ್ಸ್ ಟ್ರೋಫಿ ಮುಡಿಗೇರಿಸಿಕೊಂಡಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಆದೋನಿ ತಂಡ ನಿಗದಿತ 16 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ತಂಡದ ಆಟಗಾರ ನರಸಿಂಹ(31) ರನ್ ಗಳಿಸಿದರು. ರವಿದಾದಾ ತಂಡದ ಅತುಲ್ 3 ವಿಕೆಟ್ ಪಡೆದು ಮಿಂಚಿದರು.

ಆದೋನಿ ತಂಡ ನೀಡಿದ ಗುರಿಯನ್ನು ಬೆನ್ನಟ್ಟದ ಲೋಕಲ್ ಬಾಯ್ಸ್ ರವಿದಾದಾ ನಾರಾಯಣಪುರ ತಂಡವು ಕಳೆಪೆ ಆರಂಭ ಪಡೆಯಿತು. ಆದೋನಿ ತಂಡದ ಬೌಲರ್ಗಳ ಕರಾರುವಕ್ಕಾದ ಬೌಲಿಂಗ್ ಮತ್ತು ಚುರುಕಿನ ಕ್ಷೇತ್ರ ರಕ್ಷಣೆ ಎದುರು ರನ್ ಗಳಿಸಲು ಪರದಾಡಿದ ರವಿದಾದಾ ತಂಡದ ಬ್ಯಾಟ್ಸ್ಮನ್ಗಳು, ಪೆವಿಲಿಯನ್ ಪರೇಡ್ ನಡೆಸಿದರು.

ಆದೋನಿ ತಂಡದ ನರಸಿಂಹ ಉತ್ತಮ ದಾಳಿ ನಡೆಸುವ ಮೂಲಕ ರವಿದಾದಾ ತಂಡದ ಟ್ರೋಫಿ ಗೆಲ್ಲುವ ಆಸೆಗೆ ಮಣ್ಣೆರಚಿದರು. ಅಂತಿಮವಾಗಿ ನಿಗದಿತ ಓವರ್ಗಳಲ್ಲಿ ನಾರಾಯಣಪುರ ರವಿದಾದಾ ತಂಡ 101 ರನ್ಗಳಿಸಷ್ಟೆ ಶಕ್ತವಾಗಿ 60 ರನಗಳಿಂದ ಪರಾಭವಗೊಂಡು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು. ತೃತೀಯ ಸ್ಥಾನವನ್ನು ಸಿಂಧನೂರ ತಂಡ, ನಾಲ್ಕನೇಯ ಸ್ಥಾನ ಲಿಂಗಸೂಗುರ ತಂಡ ಪಡೆಯಿತು.

ಪ್ರಶಸ್ತಿ ವಿತರಣಾ ಸಮಾರಂಭ: ಗ್ರಾಮೀಣ ಭಾಗದಲ್ಲಿಯೂ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುತ್ತಾ ಅನೇಕ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಿರುವ ಆರ್ಟಿಜೆ ಚಾಲೇಂಜರ್ಸ್ ಟ್ರೋಫಿ ಪಂದ್ಯಾವಳಿ ಕಳೆದ 14 ವರ್ಷಗಳಿಂದ ಆಯೋಜಿಸುತ್ತಾ ಬಂದಿರುವುದು ಇದೊಂದು ಉತ್ತಮ ಕಾರ್ಯವಾಗಿದೆ ಎಂದು ಶಾಸಕ ನರಸಿಂಹನಾಯಕ ಮೆಚ್ಚುಗೆ ವ್ಯಕ್ತಪಡಿಸಿದರು.

ನಾರಾಯಣಪುರದ ಎಎನ್ಸಿಸಿ ಮೈದಾನದಲ್ಲಿ ಶಾಸಕ ರಾಜುಗೌಡ ಹಾಗೂ ಅವರ ಸಹೊದರ ಬಬಲುಗೌಡ ಅವರ ಜನ್ಮದಿನದ ನಿಮಿತ್ತ ಕಳೆದೊಂದು ತಿಂಗಳಿಂದ ನಡೆದ ಆರ್ಟಿಜೆ ಚಾಲೇಂಜರ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಬುಧವಾರ ನಡೆದ ಫೈನಲ್ ಪಂದ್ಯದಲ್ಲಿ ವಿಜೇತ ಆದೋನಿ ತಂಡಕ್ಕೆ ಪ್ರಶಸ್ತಿ ವಿತರಿಸಿ ಮಾತನಾಡಿದರು.

ಯಾವುದೇ ಪಂದ್ಯಾವಳಿ ಆಯೋಜನೆ ಮಾಡಿ ಎಂದು ಹೇಳುವುದು ಸುಲಭ. ಆದರೆ ತಿಂಗಳ ಪರ್ಯಂತ ನಡೆಸಿಕೊಂಡು ಹೋಗುವುದು ಸುಲಭದ ಮಾತಲ್ಲ ಎಂದ ಅವರು, ಕಳೆದ 14 ವರ್ಷಗಳಿಂದ ನನ್ನ ಮತ್ತು ಸಹೋದರನ ಜನ್ಮದಿನದ ನಿಮಿತ್ತ ಪಂದ್ಯಾವಳಿ ಆಯೋಜಿಸುತ್ತಾ ಬರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ರಾಜ್ಯ ಸೇರಿ ನೆರೆರಾಜ್ಯದ ತಂಡಗಳು ಭಾಗವಹಿಸುತ್ತಿರುವುದು ಸಂತೋಷ ನೀಡಿದೆ. ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕ ಭಾಗದ ಕ್ರೀಡಾ ಪ್ರತಿಭೆಗಳಿಗೆ ಉತ್ತಮ ಸ್ಥಾನ ದೊರಕಿಸಿಕೊಡುವ ನಿಟ್ಟಿನಲ್ಲಿ ಬಿಜೆಪಿ ಶ್ರಮಿಸಲಿದೆ ಎಂದು ಹೇಳಿದ ಅವರು, ಕಳೆದ 14 ವರ್ಷಗಳಿಂದ ಟೂನರ್ಿಯನ್ನು ಯಶಸ್ವಿಯಾಗಿ ಆಯೋಜಿಸುತ್ತಾ ಬಂದಿರುವದು ಈ ಭಾಗದ ಕ್ರೀಡಾಭಿಮಾನಿಗಳಿಗೆ ಇದೊಂದು ಉತ್ತಮ ವೇದಿಕೆಯಾಗಿದೆ ಎಂದರು.

ಹನುಮಂತನಾಯಕ, ಜಿಪಂ ಸದಸ್ಯ ನಾರಾಯಣ ನಾಯ್ಕ, ಯಲ್ಲಪ್ಪ ಕುರಕುಂದಿ, ಎಚ್.ಸಿ.ಪಾಟೀಲ್, ಡಾ.ಬಸನಗೌಡ ಅಳ್ಳಿಕೋಟಿ, ಶರಣುನಾಯಕ ಬೈರಿಮಡ್ಡಿ, ಬಲಭೀಮನಾಯಕ ಬೈರಿಮಡ್ಡಿ, ಬಿ.ಎನ್.ಪೊಲೀಸ್ಪಾಟೀಲ್, ಗವಿಸಂಗಯ್ಯ ಪಂಜಗಲ್, ಗೌಡಪ್ಪಗೌಡ ಪೊಲೀಸ್ಪಾಟೀಲ್, ಬಾಲಯ್ಯ ಗುತ್ತೇದಾರ್, ಸಂಗಣ್ಣ ತಾಳಿಕೋಟಿ, ಶಿವು ಬಿರಾದಾರ, ಮಲ್ಲಿಕಾರ್ಜುನ ಶೃಂಗೇರಿ, ಮಲ್ಲಿಕಾಜರ್ುನ ಬಬಲೇಶ್ವರ, ಆಂಜನೇಯ ದೋರಿ, ಸಂಗನಬಸ್ಸು ಚಟ್ಟೇರ್, ತಿಪ್ಪಣ್ಣ ರೋಡಲಬಂಡಿ, ಅಶೋಕ ನಾಯ್ಡು, ರಮೇಶಗೌಡ ಇತರರಿದ್ದರು. ಅಮರಸಿಂಗ್ ನಿರೂಪಣೆ ಮಾಡಿದರು. ರಮೇಶ ಸ್ವಾಗತಿಸಿ ವಂದಿಸಿದರು.