ದೇವರ ಮೂರ್ತಿಗಾಗಿ ಗ್ರಾಮಸ್ಥರ ಪ್ರಾರ್ಥನೆ

ಕೊಡೇಕಲ್: ಬರದೇವನಾಳ ಗ್ರಾಮದಲ್ಲಿನ ಆಂಜನೇಯ ಸ್ವಾಮಿ ಮೂತರ್ಿ ಕಳ್ಳತನವಾಗಿರುವುದರಿಂದ ಭಾನುವಾರ ರಾತ್ರಿ ಮತ್ತು ಸೋಮವಾರದಂದು ಗ್ರಾಮಸ್ಥರು ದೇವರ ಮೂತರ್ಿ ಮರಳಿ ಸಿಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಭಾನುವಾರ ಬೆಳಗಿನ ಜಾವ ದೇವಸ್ಥಾನದ ಗರ್ಭಗುಡಿಯಲ್ಲಿದ್ದ ಶ್ರೀ ಮುಖ್ಯಪ್ರಾಣದೇವರ ಕಲ್ಲಿನ ಮೂತರ್ಿಯನ್ನು ಅಪಹರಿಸಿಕೊಂಡು ಹೋಗಿರುವ ಆಗುಂತಕರ ಸುಳಿವು ಇಲ್ಲಿಯವರೆಗೂ ಸಿಕ್ಕಿಲ್ಲ. ಇದರಿಂದಾಗಿಯೇ ಗ್ರಾಮದಲ್ಲಿ ಸೂತಕದ ವಾತಾವರಣ ಏರ್ಪಟ್ಟಿದೆ.

ಅಹೋರಾತ್ರಿ ಪ್ರಾರ್ಥನೆ: ಗ್ರಾಮದ ಪುರುಷರು ಮೂರ್ತಿಯ ಕಳ್ಳತನದ ಕುರಿತಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತ ಗಮನ ಹರಿಸಿದರೆ, ಇನ್ನೂ ಕೆಲ ಯುವಕರು ಬೈಕ್ಗಳಲ್ಲಿ ಮೂರ್ತಿಯ ಬಗ್ಗೆ ವಿಚಾರಿಸುತ್ತಾ ಹಲವು ಪಟ್ಟಣಗಳಿಗೆ ತೆರಳಿದರು. ಗ್ರಾಮದ ಮಹಿಳೆಯರು ಭಾನುವಾರ ರಾತ್ರಿಯಿಡಿ ಶ್ರೀ ಆಂಜನೇಯ ದೇವಸ್ಥಾನದ ಆವರಣದಲ್ಲಿ ಕುಳಿತು ದೇವರ ನಾಮಸ್ಮರಣೆ ಮಾಡುತ್ತಾ, ನಮ್ಮೂರ ಒಡೆಯ ಮರಳಿ ದೊರಕಲಿ ಎಂದು ಪ್ರಾರ್ಥಿಸಿದರು.

ಬರದೇವನಾಳ ಗ್ರಾಮ ಸೇರಿ ಸುತ್ತಮುತ್ತಲಿನ ಗ್ರಾಮಗಳ ಜನರ ಪಾಲಿನ ಆರಾಧ್ಯ ದೈವನಾಗಿರುವ ಹನುಮಂತ ದೇವರ ಮೂತರ್ಿ ಮರಳಿ ಸಿಗುವಂತಾಗಲಿ ಎಂಬುದೇ ಎಲ್ಲರ ಆಶಯವಾಗಿದೆ.

ರಾಮನವಮಿಯಂದು ಜಾತ್ರೆ: ಪ್ರತಿವರ್ಷ ಯುಗಾದಿ ಹಬ್ಬದ ನಂತರ ಬರುವ ಚೈತ್ರ ಶುದ್ದ ನವಮಿಯ ರಾಮನವಮಿಯಂದು ಶ್ರೀ ಆಂಜನೇಯಸ್ವಾಮಿಯ ವೈಭವದ ರಥೋತ್ಸವ ನಡೆಯಲಿದೆ. ಆದರೆ ದೇವರ ಅದ್ದೂರಿ ರಥೋತ್ಸವ ಜರುಗುವ ಮುಂಚೆ ದೇವರ ಮೂರ್ತಿಯೇ ಕಳ್ಳತನವಾಗಿರುವುದು ಸಹಜವಾಗಿ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಜಾತ್ರೆಗೆ ಮೊದಲೇ ಮುಖ್ಯ ಪ್ರಾಣ ದೇವರು ಎಲ್ಲೇ ಇದ್ದರೂ ಮರಳಿ ಸಿಗಲಿ ಎಂಬುದೆ ಅಸಂಖ್ಯಾತ ಭಕ್ತರ ಪ್ರಾರ್ಥನೆಯಾಗಿದೆ.

Leave a Reply

Your email address will not be published. Required fields are marked *