ಜೂಜಾಡುತ್ತಿದ್ದವರ ಬಂಧನ

ವಿರಾಜಪೇಟೆ ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಎರಡು ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ ನಗರ ಠಾಣೆ ಪೊಲೀಸರು ಜೂಜಾಡುತ್ತಿದ್ದ ಐವರನ್ನು ಬಂಧಿಸಿ, ಒಟ್ಟು 79,400 ರೂ. ನಗದು ವಶಕ್ಕೆ ಪಡೆದಿದ್ದಾರೆ.

ಖಾಸಗಿ ಬಸ್ ನಿಲ್ದಾಣದ ಹಿಂಭಾಗ ಖಾಲಿ ಜಾಗದಲ್ಲಿ ಜೂಜಾಡುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿ ವ್ಯಕ್ತಿಯನ್ನು ಬಂಧಿಸಿದ್ದು, ಮೂವರು ಪರಾರಿಯಾಗಿದ್ದಾರೆ. ಶಿವಕೇರಿಯ ಆಟೋ ಚಾಲಕ ಎಚ್.ವಿ.ವಿಶ್ವನಾಥ್ ಬಂಧಿತ ಆರೋಪಿ. ಈತನಿಂದ 4 ಸಾವಿರ ರೂ. ನಗದನ್ನು ವಶ ಪಡಿಸಿಕೊಂಡಿದ್ದಾರೆ.

ಮಗ್ಗುಲ ಗ್ರಾಮದ ಬಳಿ ವಿನಾಯಕ ನಗರದ ಗದ್ದೆಯಲ್ಲಿ ಜೂಜಾಡುತ್ತಿದ್ದ ನಾಲ್ವರನ್ನು ನಗರ ಪೊಲೀಸರು ಬಂಧಿಸಿ ಜೂಜಾಟದ ಪಣಕ್ಕಿಟ್ಟಿದ್ದ ರೂ 75,440 ನಗದನ್ನು ವಶಪಡಿಸಿಕೊಂಡಿದ್ದಾರೆ. ಕೆ.ಪಿ.ದೀಪಕ್, ಟಿ.ಜೇಜೆಶ್, ಎಚ್.ಎಂ.ರಾಜೇಶ್, ಎಚ್.ಎಸ್.ಗೋಪಾಲ್ ಬಂಧಿತರು. ದಾಳಿ ಸಮಯದಲ್ಲಿ ನಾಲ್ವರು ತಲೆಮರೆಸಿಕೊಂಡಿದ್ದಾರೆ. ನಗರ ಪೊಲೀಸ್ ಠಾಣೆ ಎಸ್‌ಐ ಸಂತೋಷ್ ಕಶ್ಯಪ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಮುನೀರ್, ಸುನಿಲ್, ಸುಬ್ರಹ್ಮಣಿ, ಆನಂದ, ಗಿರೀಶ್, ಸತೀಶ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *