ಬಾಲ ಹೊಂದಿದ ವಿಚಿತ್ರ ಮಗು ಜನನ; ಕೆಲ ಹೊತ್ತಲ್ಲೆ ಮರಣ

ಕೊಡಗು: ಇಲ್ಲಿನ ಶನಿವಾರಸಂತೆಯಲ್ಲಿ ವಿಚಿತ್ರ ಮಗು ಜನನವಾಗಿದ್ದು, 1 ಕಾಲು, ಬಾಲದ ರೀತಿಯ ಅಂಗವುಳ್ಳ ಮಗು ಜನಿಸಿ ಅಚ್ಚರಿಗೆ ಕಾರಣವಾಗಿದೆ.

ಭುವನಳ್ಳಿಯ ಚಿನ್ನಮ್ಮ, ಮೂರ್ತಿ ದಂಪತಿಯ ಮಗು ಜನಿಸಿದ ಕೆಲ ಹೊತ್ತಿನಲ್ಲೇ ಮೃತಪಟ್ಟಿದೆ.

ಶನಿವಾರಸಂತೆ ಆರೋಗ್ಯ ಕೇಂದ್ರದಲ್ಲಿ ನಿನ್ನೆ ರಾತ್ರಿ ಚಿನ್ನಮ್ಮಗೆ ಹೆರಿಗೆಯಾಗಿತ್ತು. ಆದರೆ ಜನನಾಂಗವಿಲ್ಲದ ಕಾರಣ ಗಂಡೋ, ಹೆಣ್ಣೋ ಎಂದು ಗುರುತಿಸಲು ಕೂಡ ಸಾಧ್ಯವಾಗಿರಲಿಲ್ಲ. ಕೊನೆಗೂ ವಿಚಿತ್ರವಾಗಿ ಜನನವಾಗಿದ್ದ ಮಗು ಕೆಲವೇ ಹೊತ್ತಿನಲ್ಲಿ ಕೊನೆಯುಸಿರೆಳೆದಿದೆ. (ದಿಗ್ವಿಜಯ ನ್ಯೂಸ್)