ಮರದ ಕೊಂಬೆ ಬಿದ್ದು ಬೈಕ್ ಸವಾರರಿಗೆ ಗಾಯ

ಶನಿವಾರಸಂತೆ: ಭಾರಿ ಮಳೆ ಗಾಳಿಗೆ ಒಣ ಮರದ ರೆಂಬೆ ಬೈಕ್ ಸವಾರಿಬ್ಬರ ಮೇಲೆ ಬಿದ್ದು ಗಂಭೀರ ಗಾಯಗೊಂಡು ಹಾಸನ ಜಿಲ್ಲಾಸ್ಪತ್ರೆ ದಾಖಲಾಗಿದ್ದಾರೆ.

ಹಿತ್ತಲಕೇರಿ ಗ್ರಾಮದ ಗುಂಡಪ್ಪ ಹಾಗೂ ಗೊಪಾಲಪುರದ ಬಾಲು ಗಾಯಗೊಂಡವರು. ಶನಿವಾರಸಂತೆಯಿಂದ ತಮ್ಮ ಗ್ರಾಮ ಹಿತ್ತಲಕೇರಿಗೆ ಹಿಂದಿರುಗುವಾಗ ಶನಿವಾರಸಂತೆ-ಸೋಮವಾರಪೇಟೆ ಮುಖ್ಯ ರಸ್ತೆಯ ಗುಡುಗಳಲೆಯ ಬಳಿ ಒಣಗಿ ನಿಂತಿರುವ ಮರದ ಕೊಂಬೆ ಬೈಕ್ ಸವಾರರ ಮೇಲೆ ಬಿದ್ದಿದೆ. ಈ ವೇಳೆ ಗುಂಡಪ್ಪ ಹಾಗೂ ಹಿಂಬದಿಯಲ್ಲಿ ಕುಳಿತಿದ್ದ ಬಾಲು ಗಾಯಗೊಂಡಿದ್ದಾರೆ. ಇಬ್ಬರಿಗೂ ಶನಿವಾರಸಂತೆ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆದೊಯ್ಯಲಾಗಿದೆ.

ಶನಿವಾರಸಂತೆಯಿಂದ ಸೋಮವಾರಪೇಟೆ ಹಾಗೂ ಕುಶಾಲನಗರ ಮುಖ್ಯ ರಸ್ತೆಯಲ್ಲಿ ಒಣಗಿ ನಿಂತಿರುವ ಮರಗಳನ್ನು ತೆರವುಗೊಳಿಸುವಂತೆ ಅನೇಕ ಬಾರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಇಂತಹ ಅವಘಡಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.

Leave a Reply

Your email address will not be published. Required fields are marked *