ಕೊಡಗು ನೆರೆ ಸಂತ್ರಸ್ತರ ನೆರವಿಗೆ ಸೆರಗೊಡ್ಡಿದ ಕನ್ನಡ ವಿವಿ ಕುಲಪತಿ

ಬಳ್ಳಾರಿ: ಮಹಾಮಳೆಗೆ ತತ್ತರಿಸಿ ಹೋಗಿರುವ ಕೊಡಗಿನ ನೆರೆ ಸಂತ್ರಸ್ತರ ನೆರವಿಗಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮಲ್ಲಿಕಾ ಎಸ್. ಘಂಟಿ ಅವರು ಸೆರಗೊಡ್ಡಿ ನಿಧಿ ಸಂಗ್ರಹ ಮಾಡಿದರು.

ಮಂಗಳವಾರ ಹೊಸಪೇಟೆಯಲ್ಲಿ ನಿಧಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ ಅವರು ವಿಶ್ವವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳೊಂದಿಗೆ ಸೇರಿ ನಿಧಿ ಸಂಗ್ರಹ ಮಾಡಿದರು.

ಕನ್ನಡ ವಿವಿ ಪ್ರಾಧ್ಯಾಪಕರು ಸೇರಿ ಸಿಬ್ಬಂದಿಯಿಂದ ಕೊಡಗು ಪರಿಹಾರ ನಿಧಿಗೆ ಒಂದು ದಿನದ ವೇತನದ ಜತೆ ಒಟ್ಟು 10 ಲಕ್ಷ ರೂ. ದೇಣಿಗೆ ಸಂಗ್ರಹಿಸಿದ್ದು, ನಗರದ ಪ್ರಮುಖ ವೃತ್ತಗಳಲ್ಲಿ ಸಂಚಾರ ಜಾಥ ನೆರವೇರಿಸಿದರು.

Leave a Reply

Your email address will not be published. Required fields are marked *