ಕೊಡಗು ಪ್ರವಾಹ: ಮೃತರ ಕುಟುಂಬಗಳಿಗೆ ಪುನೀತ್​ ಸಹಾಯಹಸ್ತ

ಮಡಿಕೇರಿ: ರಣಮಳೆಯ ಪ್ರವಾಹಕ್ಕೆ ತತ್ತರಿಸಿ ಹೋಗಿರುವ ಕರ್ನಾಟಕ ಕಾಶ್ಮೀರ ಕೊಡಗಿಗೆ ಸಹಾಯಹಸ್ತ ಚಾಚಲು ಸ್ಯಾಂಡಲ್​ವುಡ್​ ನಟ ಪುನೀತ್​ ರಾಜಕುಮಾರ್​ ಅವರು ಮುಂದೆ ಬಂದಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರ ಸಂಕಷ್ಟವನ್ನು ಆಲಿಸಿರುವ ಪುನೀತ್​,​ ಪ್ರವಾಹಕ್ಕೆ ಸಿಲುಕಿ ಸಾವಿಗೀಡಾದವರ ಕುಟುಂಬಕ್ಕೆ ತಲಾ ಒಂದು ಲಕ್ಷ ರೂ. ಪರಿಹಾರ ಘೋಷಿಸಿ ಮಾನವೀಯತೆ ಮೆರೆದಿದ್ದಾರೆ.

ಈಗಾಗಲೇ ಸ್ಯಾಂಡಲ್​ವುಡ್​ ಸ್ಟಾರ್​ಗಳು ಪ್ರವಾಹ ಪೀಡಿತ ಸಂತ್ರಸ್ತರ ನೆರವಿಗೆ ಧಾವಿಸುವಂತೆ ತಮ್ಮ ಅಭಿಮಾನಿಗಳಿಗೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಸಾಕಷ್ಟು ನೆರವು ಕೂಡ ಹರಿದುಬರುತ್ತಿದೆ. (ದಿಗ್ವಿಜಯ ನ್ಯೂಸ್​)