ಪತ್ರಕರ್ತ ಸಂತೋಷ್ ತಮ್ಮಯ್ಯ ಸೆರೆ, ಬಿಡುಗಡೆ

ಮಧುಗಿರಿ/ಗೋಣಿಕೊಪ್ಪಲು: ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಆರೋಪದಲ್ಲಿ ಪತ್ರಕರ್ತ ಸಂತೋಷ್ ತಮ್ಮಯ್ಯ ಅವರನ್ನು ಕೊಡಗಿನ ಗೋಣಿಕೊಪ್ಪಲು ಪೊಲೀಸರು ಮಧುಗಿರಿ ತಾಲೂಕು ದೊಡ್ಡೇರಿ ಹೋಬಳಿಯ ಜವನಯ್ಯನಪಾಳ್ಯದಲ್ಲಿ ಸೋಮವಾರ ವಶಕ್ಕೆ ಪಡೆದರು. ಮಂಗಳವಾರ ಪೊನ್ನಂಪೇಟೆ ಜೆಎಂಎಫ್​ಸಿ ಹಾಗೂ ಸಿವಿಲ್ ನ್ಯಾಯಾಲಯ ಜಾಮೀನು ನೀಡಿದೆ.

ಕೊಡಗಿನ ಪ್ರಜ್ಞಾ ಕಾವೇರಿ ಸಂಸ್ಥೆ ನ. 5ರಂದು ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪಲಿನಲ್ಲಿ ಆಯೋಜಿಸಿದ್ದ ಟಿಪ್ಪು ಕರಾಳ ಮುಖಗಳ ಅನಾವರಣ ಕುರಿತ ವಿಚಾರಸಂಕಿರಣದಲ್ಲಿ ಅಸೀಮಾ ಪತ್ರಿಕೆ ಸಂಪಾದಕ ಸಂತೋಷ್ ತಮ್ಮಯ್ಯ ವಿಷಯ ಮಂಡಿಸಿದ್ದರು. ಆಗ ಪ್ರವಾದಿಗಳು ಹಾಗೂ ಇಸ್ಲಾಂ ಧರ್ಮದ ಬಗ್ಗೆ ಸಂತೋಷ್ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಕೊಡಗಿನ ಸಿದ್ದಾಪುರದ ಆಸೀಫ್ ಎಂಬವರು ಸ್ಥಳೀಯ ಠಾಣೆಯಲ್ಲಿ ಧರ್ಮನಿಂದನೆ 295 (ಎ) ದೂರು ನೀಡಿದ್ದರು. ಹೀಗಾಗಿ ಸಂತೋಷ್ ತನ್ನ ಪತ್ನಿ ಶಾಂತಾ ತವರು ಮಧುಗಿರಿ ತಾಲೂಕಿನ ಜವನಯ್ಯನಪಾಳ್ಯದಲ್ಲಿ 2 ದಿನಗಳಿಂದ ತಲೆಮರೆಸಿಕೊಂಡಿದ್ದರು. ಸೋಮವಾರ ತಡರಾತ್ರಿ ಮೊಬೈಲ್ ಟವರ್ ಲೊಕೇಷನ್ ಆಧರಿಸಿ ಪತ್ತೆ ಹಚ್ಚಿದ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಸಂತೋಷ್ ಬಂಧನ ಖಂಡಿಸಿ ಹಿಂದುಪರ ಸಂಘಟನೆಗಳ ಸದಸ್ಯರು ಗೋಣಿಕೊಪ್ಪಲಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿರá-ದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಕೊಡಗು ಬಂದ್​ಗೆ ಕರೆ: ಸಂತೋಷ್ ತಮ್ಮಯ್ಯ ಬಂಧನ ಹಿಂದುಪರ ಸಂಘಟನೆಗಳ ವಿರುದ್ಧ ನಡೆಯುತ್ತಿರುವ ಪಿತೂರಿಯಾಗಿದ್ದು, ಅವರಿಗೆ ನ್ಯಾಯ ಒದಗಿಸಬೇಕು ಹಾಗೂ ಜನಾಂಗೀಯ ನಿಂದನೆ ಮಾಡಿರುವ ಆಸೀಫ್ ವಿರá-ದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬುಧವಾರ ಮಧ್ಯಾಹ್ನ 12ರಿಂದ 1 ಗಂಟೆವರೆಗೆ ಕೊಡಗು ಬಂದ್​ಗೆ ಹಿಂದು ಸುರಕ್ಷಾ ವೇದಿಕೆ ಕರೆ ನೀಡಿದೆ.