ಮಳೆ ಆರ್ಭಟಕ್ಕೆ ಮುರಿದ ವಿದ್ಯುತ್ ಕಂಬಗಳು

ಗೋಣಿಕೊಪ್ಪಲು : ವರುಣನ ಆರ್ಭಟದಿಂದಾಗಿ ದಕ್ಷಿಣ ಕೊಡಗಿನ ಬಾಳೆಲೆ, ಗೋಣಿಕೊಪ್ಪ, ಶ್ರೀಮಂಗಲ ವಿದ್ಯುತ್ ಉಪಕೇಂದ್ರ ವ್ಯಾಪ್ತಿಯಲ್ಲಿ 303 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, 8 ಟ್ರಾನ್ಸ್‌ಫಾರಂಗಳು ಕೆಟ್ಟು ಹೋಗಿವೆ. ತಂತಿಗಳು ನೆಲಕಚ್ಚಿವೆ.

ಮಳೆ ಗಾಳಿಗೆ, ದಕ್ಷಿಣ ಕೊಡಗಿನ ಬಾಳೆಲೆ, ಗೋಣಿಕೊಪ್ಪ, ಶ್ರೀಮಂಗಲ ವಿದ್ಯುತ್ ಉಪಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬ ಮುರಿದು, 8 ಟ್ರಾನ್ಸ್‌ಫಾರಂ ಕೆಟ್ಟು ಹೋಗಿವೆ. ತಂತಿಗಳು ನೆಲಕಚ್ಚಿವೆ. ಬದಲಿ ವ್ಯವಸ್ಥೆ ನಡೆಯುತ್ತಿದೆ.
ಈಗಾಗಲೇ ಪಟ್ಟಣ ಹಾಗೂ ಮುಖ್ಯರಸ್ತೆಯ ಒತ್ತಿನಲ್ಲಿ ಬರುವ 150 ಕಂಬಗಳನ್ನು ಬದಲಿ ಕಂಬವಾಗಿ ನೆಡಲಾಗಿದೆ. ಉಳಿದಂತೆ ಗ್ರಾಮೀಣ ಪ್ರದೇಶದಲ್ಲಿ ಸಂಪೂರ್ಣವಾಗಿ ಕಂಬ ನಿಲ್ಲಿಸಲು ಇನ್ನೆರಡು ದಿನ ಬೇಕಾಗಲಿದೆ. ಇದೇ ರೀತಿ ಮಳೆ ಗಾಳಿ ಮುಂದುವರಿದರೆ ಇನ್ನಷ್ಟು ವಿಳಂಬವಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಂ. ಅಂಕಯ್ಯ ಮಾಹಿತಿ ನೀಡಿದ್ದಾರೆ.

ಕಳೆದ ಮೂರು ದಿನಗಳಿಂದ ದಕ್ಷಿಣ ಕೊಡಗಿನ ಗ್ರಾಮಗಳು ವಿದ್ಯುತ್ ಇಲ್ಲದೆ ಕತ್ತಲಲ್ಲಿವೆ. ಗಾಳಿ ಮಳೆಯ ಕಾರಣ ವಿದ್ಯುತ್ ಸಂಚಾರದಲ್ಲಿ ತೊಡಕುಂಟಾಗಿದೆ. ಮಳೆಯಿಂದಾಗಿ ತುರ್ತಾಗಿ ಸೇವೆ ನೀಡಲು ಸೆಸ್ಕ್ ಸಿಬ್ಬಂದಿ ಹರಸಾಹಸಪಡುವಂತಾಗಿದೆ. ಗೋಣಿಕೊಪ್ಪ ಹಾಗೂ ಪೊನ್ನಂಪೇಟೆ ಪಟ್ಟಣದಲ್ಲಿ ಕೂಡ ವಿದ್ಯುತ್ ನಿಲ್ಲದೆ ತೊಂದರೆಯಾಗಿದೆ.

ನದಿಗಳಲ್ಲಿ ನೀರು: ಲಕ್ಷ್ಮಣತೀರ್ಥ, ಕೀರೆಹೊಳೆ, ಕಲ್ಲುಗುಂಡಿ ನದಿಗಳಲ್ಲಿ ನೀರು ಹರಿಯುವಂತಾಗಿದೆ. ಕುರ್ಚಿ ಗ್ರಾಮದಿಂದ ಹರಿದು ಬರುವ ಲಕ್ಷ್ಮಣತೀರ್ಥ ನದಿ ಮೊದಲ ಬಾರಿಗೆ ಹರಿಯುವಂತಾಗಿದೆ. ಇದೇ ರೀತಿ ವಿ. ಬಾಡಗದಿಂದ ಕುಂದ ಗ್ರಾಮದ ಮೂಲಕ ಹರಿಯುವ ಕಲ್ಲುಗುಂಡಿ ನದಿ ಹಾಗೂ ಅಮ್ಮತ್ತಿಯಿಂದ ಗೋಣಿಕೊಪ್ಪ ಮೂಲಕ ಹರಿಯುವ ಕೀರೆ ಹೊಳೆಯಲ್ಲಿ ಕೂಡ ನೀರು ಕಾಣಿಸಿಕೊಂಡಿದೆ. ಹೊದವಾಡ ಗ್ರಾಮದ ಗದ್ದೆಯಲ್ಲಿ ನೀರು ನಿಂತು ಕೃಷಿಕನ ಮೊಗದಲ್ಲಿ ಮಂದಹಾಸ ಮೂಡುವಂತಾಗಿದೆ.

Leave a Reply

Your email address will not be published. Required fields are marked *