Credit Cards: ಇಂದಿನ ಡಿಜಿಟಲ್ ಯುಗದಲ್ಲಿ ಬಹುತೇಕರು ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತಾರೆ. ಪಡೆಯುವ ಉದ್ದೇಶ ಇಲ್ಲದೆ ಹೋದರೂ, ನಗದು ಹಣ ಸಿಗುವ ಆಸೆಯಿಂದ ಆಯಾ ಬ್ಯಾಂಕ್ಗಳಲ್ಲಿ ವಿತರಿಸುವ ಕ್ರೆಡಿಟ್ ಕಾರ್ಡ್‌ಗಳನ್ನು ಪಡೆಯುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ, ಅನೇಕ ಜನರು ಕ್ರೆಡಿಟ್ ಕಾರ್ಡ್‌ಗಳ ಮೊರೆ ಹೋಗುತ್ತಿದ್ದು, ಇದರ ಬಳಕೆಯತ್ತ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಅಸಲಿಗೆ ಕ್ರೆಡಿಟ್ ಕಾರ್ಡ್‌ಗಳ ಮುಖೇನ ಪಾವತಿಗಳನ್ನು ಮಾಡುವುದರಿಂದ ಹಲವು ಪ್ರಯೋಜನಗಳಿವೆ.
ಇದನ್ನೂ ಓದಿ: ಸ್ಟಾರ್ ನಟರ ಸಿನಿಮಾ, ವಿಭಿನ್ನ ಪಾತ್ರಗಳ ಆಯ್ಕೆ; ಸರಣಿ ಅವಕಾಶಗಳ ಬಗ್ಗೆ ‘ಲಕ್ಕಿ ಹೀರೋಯಿನ್’ ಮನದಾಳ | Lucky Heroine
ಪ್ರಯೋಜನಗಳೇನು?
ಕ್ರೆಡಿಟ್ ಕಾರ್ಡ್ ಮೂಲಕ ಮಾಡುವ ಪಾವತಿಗಳಿಂದ ರಿಯಾಯಿತಿ ಕೊಡುಗೆ, ರಿವಾರ್ಡ್ ಪಾಯಿಂಟ್ಸ್ ಸೇರಿದಂತೆ ಹಲವು ಪ್ರಯೋಜನಗಳನ್ನು ನೀವು ಪಡೆಯಬಹುದಾಗಿದೆ. ಆದರೆ, ನೀವು ಕ್ರೆಡಿಟ್ ಕಾರ್ಡ್‌ನೊಂದಿಗೆ ಎಟಿಎಂಗಳಿಂದ ಎಂದಿಗೂ ಹಣವನ್ನು ಡ್ರಾ ಮಾಡಬೇಡಿ. ಕೇವಲ ತುರ್ತು ಸಂದರ್ಭದಲ್ಲಿ ಮಾತ್ರ ಈ ಆಯ್ಕೆ ಬಳಸುವುದು ಉತ್ತಮ. ಇದಲ್ಲದೆ, ನಿಮ್ಮ ಡೆಬಿಟ್ ಕಾರ್ಡ್ ಅನ್ನು ಸ್ವೈಪ್ ಮಾಡಿದಂತೆ ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಸ್ವೈಪ್ ಮಾಡಿದರೆ, ಭಾರೀ ಮೊತ್ತದ ಬಿಲ್ ಬರುವುದು ಖಚಿತ. ಈ ವಿಷಯ ನಿಮಗೆ ಗೊತ್ತಿರಲಿ.
ವಾಸ್ತವವಾಗಿ, ಅನೇಕರು ಕ್ರೆಡಿಟ್ ಕಾರ್ಡ್ ಬಳಸಿದರೂ ಸಹ ನಂತರದಲ್ಲಿ ಅದರಿಂದ ಪಡೆದ ಹಣವನ್ನು ಪಾವತಿಸಲು ಮರೆತೇ ಹೋಗುತ್ತಾರೆ. ತಾವು ಪಡೆದಿರುವ ಹಣ ಸಾಲದ ರೂಪದಲ್ಲಿ ಎಂಬುದನ್ನೇ ಮರೆತಿರುತ್ತಾರೆ. ಕ್ರೆಡಿಟ್ ಕಾರ್ಡ್ ಬಳಸುವುದರಿಂದ ಅನುಕೂಲಗಳು ಹೇಗಿದೆಯೋ, ಹಾಗೆಯೇ ಅನಾನುಕೂಲಗಳೂ ಇವೆ. ಈ ಕಾರ್ಡ್‌ಗಳನ್ನು ಬಳಸಿ ಹಣವನ್ನು ಡ್ರಾ ಮಾಡಿಕೊಳ್ಳವವರ ಸಂಖ್ಯೆ ಹೆಚ್ಚಿದೆ. ಆದಾಗ್ಯೂ, ಕ್ರೆಡಿಟ್ ಕಾರ್ಡ್ ಮೂಲಕ ಹಣವನ್ನು ಪಡೆಯುವುದು ಅಪಾಯಕಾರಿ. ಹೀಗೆ ಮಾಡುವುದರಿಂದ ಅನಾವಶ್ಯಕವಾಗಿ ಹೆಚ್ಚಿನ ಹಣವನ್ನು ನೀವು ಕಟ್ಟುತ್ತೀರಿ.
ಇದನ್ನೂ ಓದಿ: ಐ ಲವ್ ಮೈ ಜಾಬ್.. ಹೆಮ್ಮೆಯಿಂದಲೆ ಬಿಕಿನಿ ಹಾಕಿಕೊಳ್ಳುವೆ; ಮುಮೈತ್ ಖಾನ್ ಹೀಗೇಳಿದ್ದೇಕೆ? | Mumaith Khan
ಕ್ರೆಡಿಟ್ ಕಾರ್ಡ್ ಶುಲ್ಕಗಳು
ಕ್ರೆಡಿಟ್ ಕಾರ್ಡ್ ಬಳಸುವಾಗ, ನೀವು ವಿವಿಧ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ಕ್ರೆಡಿಟ್ ಕಾರ್ಡ್ ಮೊತ್ತದ ಮೇಲೆ ವಿಧಿಸಲಾಗುವ ಬಡ್ಡಿದರಗಳು ನಿರೀಕ್ಷೆಗಿಂತ ಹೆಚ್ಚಿರುತ್ತವೆ. ಇದಲ್ಲದೆ, ನೀವು ಹಣವನ್ನು ಡ್ರಾ ಮಾಡಿಕೊಂಡ ನಂತರ ಪಾವತಿಯನ್ನು ವಿಳಂಬ ಮಾಡಿದರೆ, ವಿಶೇಷ ದಂಡವನ್ನೇ ಕಟ್ಟಬೇಕಾಗುತ್ತದೆ.
ಕ್ರೆಡಿಟ್ ಕಾರ್ಡ್‌ನಲ್ಲಿ ನಗದು ಮುಂಗಡ ಶುಲ್ಕ
ನಿಮ್ಮ ಕ್ರೆಡಿಟ್ ಕಾರ್ಡ್‌ನಿಂದ ಹಣವನ್ನು ಡ್ರಾ ಮಾಡಿಕೊಂಡಾಗ ನೀವು ನಗದು ಮುಂಗಡ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಶುಲ್ಕವು ಡ್ರಾ ಮಾಡಿದ ಮೊತ್ತದ ಸುಮಾರು 2.5ರಿಂದ 3 ಪ್ರತಿಶತದಷ್ಟಿದೆ. ಇದರ ಹೊರತಾಗಿ, ಕ್ರೆಡಿಟ್ ಕಾರ್ಡ್ ಮೂಲಕ ಮಾಡಿದ ಇತರ ಪಾವತಿಗಳ ಮೇಲೆ ವಿವಿಧ ಶುಲ್ಕಗಳು ಸಹ ಬೀಳುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ನೀವು ಖರ್ಚು ಮಾಡಿದ ಮೊತ್ತಕ್ಕಿಂತ ಹೆಚ್ಚಿನದ್ದೇ ಆಗಿರಬಹುದು ಎಂಬುದು ಗಮನಾರ್ಹ,(ಏಜೆನ್ಸೀಸ್).