ಸಂಬಳ ಸಾಲ್ತಿಲ್ಲ! ಸಾಲ ತೀರಿಸಲು ಚಿನ್ನದ ಸಾಲ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳನ್ನು ಮಾತ್ರ ಮಾಡಬೇಡಿ | Gold Loan

blank

Gold Loan: ಸಂಸ್ಥೆ ಕೊಡುತ್ತಿರುವ ಸಂಬಳ ನಮಗೆ ಮಾತ್ರವಲ್ಲ, ನಮ್ಮ ಸಾಲ ತೀರಿಸಲು ಸಹ ಸಾಲುತ್ತಿಲ್ಲ ಎಂದು ಯೋಚಿಸುವ ಅನೇಕ ಮಧ್ಯಮ ವರ್ಗದ ಜನರು, ಮೊಬೈಲ್​ ಆ್ಯಪ್​ ಲೋನ್​, ಪರ್ಸನಲ್​ ಲೋನ್​ ಸೇರಿದಂತೆ ಚಿನ್ನದ ಸಾಲದ ಮೊರೆ ಹೋಗುವುದು ತೀರ ಸಾಮಾನ್ಯ ಸಂಗತಿ. ಆದರೆ, ಇತ್ತೀಚಿನ ದಿನಗಳಲ್ಲಿ ಚಿನ್ನದ ಸಾಲ ತೆಗೆದುಕೊಳ್ಳುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಇದಕ್ಕಾಗಿ ಚಿನ್ನದಂಗಡಿಗೇ ಹೋಗಬೇಕಿಲ್ಲ. ಬದಲಿಗೆ ತಮ್ಮ ಬಳಿಯಿರುವ ಸ್ಮಾರ್ಟ್​ಫೋನ್​ ಆ್ಯಪ್​ಗಳಲ್ಲಿಯೇ ಪಡೆಯಬಹುದಾಗಿದೆ.

ಇದನ್ನೂ ಓದಿ: Y Combinator ಮೂಲಕ ಹೊಸ ಮೈಲಿಗಲ್ಲು ಸಾಧಿಸಿದ ಓಪನ್​ ಫೆನಲ್​ ಸಹ ಸಂಸ್ಥಾಪಕ ಫೆನಿಲ್ ಸುಚಕ್

ಯಾವ ಕಾರಣಕ್ಕೆ?

ನೀವು ಯಾವ ಕಾರಣಕ್ಕಾಗಿ ಚಿನ್ನದ ಸಾಲ ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದೀರಾ? ಎಂಬುದು ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ನಿಂತಿದೆ. ಸಾಲ ಪಡೆಯುವುದು ಸುಲಭ. ಆದರೆ, ತೆಗೆದುಕೊಳ್ಳುವ ಮುನ್ನ ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದು ಒಳಿತು. ಆತುರದಲ್ಲಿ ಚಿನ್ನದ ಸಾಲ ತೆಗೆದುಕೊಳ್ಳುವುದರಿಂದ ಮುಂದೆ ಹಲವು ರೀತಿಯಲ್ಲಿ ಸಮಸ್ಯೆಗಳು ಉಂಟಾಗಬಹುದು ಎಂಬುದು ನೆನಪಿರಲಿ. ಈಗ ಚಿನ್ನದ ಸಾಲ ತೆಗೆದುಕೊಳ್ಳುವಾಗ ಯಾವ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ಇಲ್ಲಿ ತಿಳಿಯೋಣ.

ಸಂಬಳ ಸಾಲ್ತಿಲ್ಲ! ಸಾಲ ತೀರಿಸಲು ಚಿನ್ನದ ಸಾಲ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳನ್ನು ಮಾತ್ರ ಮಾಡಬೇಡಿ | Gold Loan

ಚಿನ್ನವು ಕೇವಲ ಆಭರಣವಲ್ಲ. ಅದು ಜನರ ಮೂಲ ಆಸ್ತಿಯೂ ಆಗಿದೆ. ಕಷ್ಟದ ಸಮಯದಲ್ಲಿ ಚಿನ್ನವನ್ನು ಬಳಸಬಹುದು. ಅನೇಕ ಜನರು ತಮ್ಮ ಆರ್ಥಿಕ ಬಿಕ್ಕಟ್ಟನ್ನು ಪೂರೈಸಲು ಒಡವೆಗಳನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಾರೆ. ಇದನ್ನೇ ಚಿನ್ನದ ಸಾಲ ಎಂದು ಕರೆಯಲಾಗಿದೆ. ಚಿನ್ನದ ಸಾಲದಲ್ಲಿ, ಒಬ್ಬ ವ್ಯಕ್ತಿಯು ತನ್ನ ಚಿನ್ನವನ್ನು ಅಡವಿಡುವ ಮೂಲಕ ಹಣವನ್ನು ಪಡೆಯಬಹುದು. ಆದರೆ, ಆತುರದಲ್ಲಿ ಚಿನ್ನದ ಸಾಲ ತೆಗೆದುಕೊಳ್ಳುವುದರಿಂದ ನಿಮಗೆ ಎದುರಾಗುವ ಸಮಸ್ಯೆಗಳು ನಿಮ್ಮನ್ನು ಭಾರೀ ಸಂಕಷ್ಟಕ್ಕೆ ಸಿಲುಕಿಸಬಹುದು. ಹೀಗಾಗಿ ಜಾಣ್ಮೆಯಿಂದ ಪಡೆಯುವುದು ಬುದ್ಧಿವಂತರ ಲಕ್ಷಣ. ಚಿನ್ನದ ಸಾಲ ತೆಗೆದುಕೊಳ್ಳುವಾಗ ಯಾವ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು ಎಂಬುದರ ವಿವರ ಹೀಗಿದೆ ಗಮನಿಸಿ.

ಇದನ್ನೂ ಓದಿ: 80 ವರ್ಷದ ತಂದೆಯ ಒಂಟಿತನವನ್ನು ನೋಡಲಾರದೆ 32 ವರ್ಷದ ಮಹಿಳೆಯೊಂದಿಗೆ ಮರುಮದ್ವೆ ಮಾಡಿದ 80 ಜನ ಮಕ್ಕಳು! Children arrange marriage for 80 years old father

ನಿಮ್ಮ ಅಗತ್ಯಗಳನ್ನು ತಿಳಿದುಕೊಳ್ಳಿ

ಚಿನ್ನದ ಸಾಲ ತೆಗೆದುಕೊಳ್ಳುವ ಮೊದಲು ನಿಮ್ಮ ಅಗತ್ಯಗಳ ಬಗ್ಗೆ ಪಟ್ಟಿ ಮಾಡಿಕೊಳ್ಳಿ. ಅಗತ್ಯವಿರುವ ಸಮಯದಲ್ಲಿ ಮಾತ್ರ ಚಿನ್ನದ ಸಾಲ ತೆಗೆದುಕೊಳ್ಳಿ. ಬಟ್ಟೆ ಖರೀದಿಸುವುದು, ಕಾರು ಖರೀದಿಸುವುದು ಅಥವಾ ದೂರ ಪ್ರಯಾಣದಂತಹ ಸಣ್ಣ ಸಣ್ಣ ಅಗತ್ಯಗಳನ್ನು ಪೂರೈಸಲು ಎಂದಿಗೂ ಚಿನ್ನದ ಸಾಲ ಮೊರೆ ಹೋಗಲೇಬೇಡಿ.

ವಿವಿಧ ಬ್ಯಾಂಕ್​ಗಳ ಚಿನ್ನದ ಸಾಲದ ಬಡ್ಡಿ ದರ ತಿಳಿಯಿರಿ

ಬ್ಯಾಂಕ್‌ಗಳು ಮತ್ತು ಎನ್​ಬಿಎಫ್​ಸಿಗಳು (NBFC) ಎರಡೂ ಚಿನ್ನದ ಸಾಲಗಳನ್ನು ನೀಡುತ್ತವೆ. ಸಾಮಾನ್ಯವಾಗಿ, ಬ್ಯಾಂಕಿನಿಂದ ಚಿನ್ನದ ಸಾಲವು ಕಡಿಮೆ ಬಡ್ಡಿದರದಲ್ಲಿ ಲಭ್ಯವಿದೆ. ಆದಾಗ್ಯೂ, ಎನ್​ಬಿಎಫ್​ಸಿಗಳಿಂದ ಸಾಲಗಳನ್ನು ಹೆಚ್ಚಿನ ಬಡ್ಡಿದರದಲ್ಲಿ ನೀಡಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸಾಲ ತೆಗೆದುಕೊಳ್ಳುವ ಮೊದಲು, ಒಂದಷ್ಟು ಕಡೆಗಳಲ್ಲಿ ಬಡ್ಡಿದರಗಳು ಎಷ್ಟಿದೆ ಎಂದು ಚೆಕ್ ಮಾಡಿಕೊಳ್ಳಿ ಮತ್ತು ಬ್ಯಾಂಕ್ ಅಥವಾ ಎನ್​ಬಿಎಫ್​ಸಿಯನ್ನು ಬುದ್ಧಿವಂತಿಕೆಯಿಂದ ಆರಿಸಿ.

ಇದು ಬಹಳ ಮುಖ್ಯ

ನೀವು ಚಿನ್ನದ ಸಾಲವನ್ನು ತೆಗೆದುಕೊಳ್ಳುವ ಮೊದಲು, ಸಾಲವನ್ನು ಮರುಪಾವತಿಸಲು ಸಾಧ್ಯವಾಗದಿದ್ದರೆ ನಿಮ್ಮ ಚಿನ್ನಕ್ಕೆ ಏನಾಗುತ್ತದೆ ಎಂಬುದನ್ನು ತಿಳಿಯಿರಿ. ಸಾಮಾನ್ಯವಾಗಿ, ಚಿನ್ನದ ಸಾಲದ ಮರುಪಾವತಿ ಅವಧಿ 3 ತಿಂಗಳಿಂದ 3 ವರ್ಷಗಳವರೆಗೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಚಿನ್ನವನ್ನು ಕಳೆದುಕೊಳ್ಳುವುದನ್ನು ತಡೆಯಲು ನಿಮ್ಮ ಹಣಕಾಸಿನ ಪರಿಸ್ಥಿತಿಗೆ ಅನುಗುಣವಾಗಿ ಸಮಯದ ಚೌಕಟ್ಟನ್ನು ಆರಿಸಿಕೊಳ್ಳುವುದು ಉತ್ತಮ,(ಏಜೆನ್ಸೀಸ್).

2007ರಲ್ಲಿ 10 ಐಟಂಗೆ ಬಾರ್​ ಬಿಲ್​ ಎಷ್ಟಿತ್ತು ಗೊತ್ತೇ? 18 ವರ್ಷಗಳ ಹಿಂದಿನ ಬಾರ್​ ಬಿಲ್ ನೋಡಿದ್ರೆ ಹುಬ್ಬೇರೋದು ಖಚಿತ | Viral Bill

Share This Article

ಬೆಣ್ಣೆಯಂತೆ ಕೊಬ್ಬು ಕರಗಬೇಕೆ; ಉತ್ತಮ ಫಲಿತಾಂಶಕ್ಕಾಗಿ ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ | Health Tips

ಕೆಲವರು ಹೊರಗೆ ಊಟ ಮಾಡಿದ ನಂತರವೂ ತೆಳ್ಳಗಿರುತ್ತಾರೆ. ಯಾವುದೇ ಜಿಮ್ ಅಥವಾ ವ್ಯಾಯಾಮವನ್ನೂ ಮಾಡುವುದಿಲ್ಲ. ಏಕೆಂದರೆ…

ಶೀತ & ಜ್ವರವಿದ್ದಾಗ ಹುಳಿ ಮೊಸರು ಸೇವಿಸಬಹುದೇ?; ಇಲ್ಲಿದೆ ಉಪಯುಕ್ತ ಮಾಹಿತಿ | Health Tips

ಶೀತ ಮತ್ತು ಜ್ವರದ ಚಿಕಿತ್ಸೆಯ ಜತೆಗೆ ಹಲವು ರೀತಿಯ ಮುನ್ನೆಚ್ಚರಿಕೆಗಳನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ. ಮೊಸರು ಸೇವಿಸದಿರುವುದು…

ವೇಜ್​, ನಾನ್​ವೆಜ್ ಖಾದ್ಯ​ ‘ಟೊಮ್ಯಾಟೋ’ ಇಲ್ಲದೆ ಆಗೋದೆ ಇಲ್ವಾ? ಹೆಚ್ಚು Tomato ತಿನ್ನುವ ನಿಮಗಾಗಿ ಈ ಸುದ್ದಿ!

Tomato :  ನಾವು ನಮ್ಮ ದೈನಂದಿನ ಅಡುಗೆಗಳಲ್ಲಿ ಟೊಮ್ಯಾಟೋವನ್ನು ಬಳಸುತ್ತೇವೆ. ಟೊಮ್ಯಾಟೋಗಳನ್ನು  ಕರಿ, ಗ್ರೇವಿ, ಸೂಪ್…