50:50 ಲಸಿಕೆ ಹಂಚಿಕೆ; ಸರ್ಕಾರಿ ಕೇಂದ್ರಗಳಲ್ಲಿ ಯಥಾಸ್ಥಿತಿ, ಖಾಸಗಿ ಕೇಂದ್ರಗಳಲ್ಲಿ 18 ಮೇಲ್ಪಟ್ಟವರಿಗೆ ಲಸಿಕೆ ಲಭ್ಯ!

blank

ನವದೆಹಲಿ : ಮೇ 1 ರಿಂದ 18 ವರ್ಷದ ಮೇಲ್ಪಟ್ಟ ಸಾರ್ವಜನಿಕರಿಗೆ ಕರೊನಾ ಲಸಿಕೆ ನೀಡಲು ಖಾಸಗಿ ವಲಯದಲ್ಲಿ ಅವಕಾಶ ಕಲ್ಪಿಸುವ ಮಹತ್ವದ ನಿರ್ಣಯವನ್ನು ಇಂದು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ತ್ವರಿತವಾಗಿ ಹೆಚ್ಚು ಜನರಿಗೆ ಕರೊನಾ ಲಸಿಕೆಯನ್ನು ತಲುಪಿಸುವ ಉದ್ದೇಶದಿಂದ ಲಸಿಕೆಯ ಬೆಲೆ ನಿಗದಿ, ಖರೀದಿ ಮತ್ತು ಹಂಚಿಕೆಯ ನಿಯಮಗಳನ್ನು ಸಡಿಲೀಕರಿಸಲಾಗಿದೆ.

ಈ ಮೂಲಕ ಬೃಹತ್ ಪ್ರಮಾಣದ ಮೂರನೇ ಹಂತದ ಲಸಿಕಾ ಅಭಿಯಾನವು ದೇಶಾದ್ಯಂತ ಆರಂಭವಾಗಲಿದೆ. ಆದರೆ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಈಗಿನಂತೆಯೇ ಆದ್ಯತೆಯ ಗುಂಪುಗಳಾದ 45 ವರ್ಷ ಮೇಲ್ಪಟ್ಟವರಿಗೆ, ಮುಂಚೂಣಿ ಕಾರ್ಯಕರ್ತರಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಉಚಿತ ಲಸಿಕಾ ಅಭಿಯಾನ ಮುಂದುವರಿಯಲಿದೆ ಎನ್ನಲಾಗಿದೆ.

ಲಸಿಕೆ ಹಂಚಿಕೆ : ಲಸಿಕೆ ಉತ್ಪಾದನೆ ಮತ್ತು ಪೂರೈಕೆಗೆ ಹಲವು ಇನ್​​ಸೆಂಟೀವ್​ಗಳನ್ನು ನೀಡಿರುವ ಸರ್ಕಾರ, ಲಸಿಕೆ ಉತ್ಪಾದಕರು ತಮ್ಮ ಪ್ರತಿ ತಿಂಗಳ ಉತ್ಪಾದಿತ ಲಸಿಕೆಗಳಲ್ಲಿ ಶೇ. 50 ರಷ್ಟನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕು. ಉಳಿದ ಶೇ. 50 ರಷ್ಟು ಲಸಿಕೆಗಳನ್ನು ರಾಜ್ಯ ಸರ್ಕಾರಕ್ಕೂ, ತೆರೆದ ಮಾರುಕಟ್ಟೆಗೂ ನೇರವಾಗಿ ವಿತರಿಸಬಹುದು ಎಂದು ಹೇಳಿದೆ. ಈ ನಿಯಮ ಭಾರತದಲ್ಲಿ ಉತ್ಪಾದನೆಯಾಗುವ ಎಲ್ಲಾ ಲಸಿಕೆ ಕಂಪೆನಿಗಳಿಗೂ ಅನ್ವಯಿಸುತ್ತದೆ. ಆದರೆ, ಪೂರ್ಣವಾಗಿ ಬಳಕೆಗೆ ಸಿದ್ಧವಾಗಿ ಆಮದು ಮಾಡಿಕೊಳ್ಳಲ್ಪಡುವ ಲಸಿಕೆಗಳನ್ನು ಸರ್ಕಾರೇತರ ಚಾನೆಲ್​ನಲ್ಲಿಯೇ ಬಳಸಲು ಅವಕಾಶ ನೀಡಲಾಗುವುದು.

ಇದನ್ನೂ ಓದಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್​​ಗೆ ಕರೊನಾ; ಏಮ್ಸ್​ ಆಸ್ಪತ್ರೆಗೆ ದಾಖಲು

ಕೇಂದ್ರ ಸರ್ಕಾರವು ತನ್ನ ಪಾಲಿನಲ್ಲಿ ರಾಜ್ಯಗಳಿಗೆ ಅಥವಾ ಕೇಂದ್ರಾಡಳಿತ ಪ್ರದೇಶಗಳಿಗೆ ಅಗತ್ಯ ಮತ್ತು ಉಪಯೋಗಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ವಿತರಿಸಲಿದೆ. ಅಂದರೆ ಯಾವುದೇ ರಾಜ್ಯದಲ್ಲಿನ ಕರೊನಾ ಸೋಂಕಿನ ಪ್ರಮಾಣ(ಆ್ಯಕ್ಟೀವ್ ಪ್ರಕರಣಗಳ ಸಂಖ್ಯೆ)ವನ್ನು ಮತ್ತು ಕಾರ್ಯಕ್ಷಮತೆ(ಲಸಿಕೆ ನೀಡುವ ವೇಗ)ಯನ್ನು ಆಧರಿಸಿ ಅದಕ್ಕೆ ನೀಡಲಾಗುವ ಲಸಿಕೆಯ ಪ್ರಮಾಣವನ್ನು ಸರ್ಕಾರ ನಿರ್ಧರಿಸಲಿದೆ. ಈ ನಿರ್ಧಾರ ಕೈಗೊಳ್ಳುವಾಗ ಎಷ್ಟು ಲಸಿಕೆಗಳನ್ನು ವ್ಯರ್ಥ ಮಾಡಲಾಗಿದೆ ಎಂಬುದನ್ನೂ ಪರಿಗಣಿಸಲಾಗುವುದು ಎನ್ನಲಾಗಿದೆ.

ರಾಜ್ಯ ಸರ್ಕಾರಗಳಿಗೆ ಮತ್ತು ತೆರೆದ ಮಾರುಕಟ್ಟೆಗೆ ವಿತರಿಸಲು ಅವಕಾಶ ನೀಡಿರುವ ಉಳಿದ ಶೇ. 50 ರಷ್ಟು ಲಸಿಕೆಗಳಿಗೆ ಉತ್ಪಾದಕರು ಮೇ 1 ರ ಮುಂಚೆ ಬೆಲೆ ನಿಗದಿ ಮಾಡಿ ಘೋಷಿಸಬೇಕಾಗಿದೆ. ಈ ಪಾಲಿನಲ್ಲೇ ಖಾಸಗಿ ಆಸ್ಪತ್ರೆಗಳು, ಲಸಿಕೆಯ ಸೇವೆ ನೀಡಲಿಚ್ಛಿಸುವ ಕೈಗಾರಿಕಾ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳು ಲಸಿಕೆಗಳನ್ನು ಪಡೆದುಕೊಳ್ಳಬಹುದು. ಖಾಸಗಿ ಲಸಿಕೆ ಸೇವಾ ಕೇಂದ್ರಗಳು ಎಲ್ಲಾ ವಯಸ್ಕರಿಗೆ ಅಂದರೆ 18 ವರ್ಷ ಮೇಲ್ಪಟ್ಟ ನಾಗರೀಕರಿಗೆ ಲಸಿಕೆ ನೀಡಲು ಅವಕಾಶವಿರುತ್ತದೆ. ಖಾಸಗಿ ಕೇಂದ್ರಗಳು ಪಾರದರ್ಶಕವಾಗಿ ಲಸಿಕೆಯ ಬೆಲೆಯನ್ನು ಪೂರ್ವನಿಗದಿ ಮಾಡಿ ಘೋಷಿಸಬೇಕು ಎಂದು ಸರ್ಕಾರ ಹೇಳಿದೆ.

ಎಲ್ಲಾ ಸರ್ಕಾರಿ ಮತ್ತು ಖಾಸಗಿ ಲಸಿಕಾ ಕೇಂದ್ರಗಳು ಕೋ-ವಿನ್ ಮೂಲಕ ರೂಪಿಸಲಾಗಿರುವ ಲಸಿಕೆ ಪ್ರೋಟೋಕಾಲ್​ಅನ್ನು ಪಾಲಿಸಬೇಕಾಗಿರುತ್ತದೆ. ತಮ್ಮ ಬಳಿ ಇರುವ ಸ್ಟಾಕ್​ಗಳು ಮತ್ತು ಪಡೆಯುತ್ತಿರುವ ಬೆಲೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ಇನ್ನು, ಈಗಾಗಲೇ ಮೊದಲನೇ ಡೋಸ್ ಪಡೆದಿರುವ ಫಲಾನುಭವಿಗಳಿಗೆ ಆದ್ಯತೆಯ ಮೇರೆಗೆ ಎರಡನೇ ಡೋಸ್​ಅನ್ನು ಎಲ್ಲಾ ಕಡೆ ನೀಡುವಂತೆ ಸ್ಪಷ್ಟ ಮಾರ್ಗಸೂಚಿಗಳನ್ನು ಸದ್ಯದಲ್ಲೇ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. (ಏಜೆನ್ಸೀಸ್)

ರಾಜಧಾನಿಯಲ್ಲಿ ಒಂದು ವಾರ ಲಾಕ್​ಡೌನ್ ; ‘ಇಷ್ಟು ಕೇಸ್ ಬಂದರೆ ಆರೋಗ್ಯ ವ್ಯವಸ್ಥೆ ಕುಸಿದೀತು’ ಎಂದ ಸಿಎಂ

“ಕರೊನಾ ಲಸಿಕೆ ಬಗ್ಗೆ ಹಿಂಜರಿಕೆ ಹುಟ್ಟಿಸಿದ್ದೇ ಕಾಂಗ್ರೆಸ್! ಜನರ ಜೀವದೊಂದಿಗೆ ಆಟಾಡಿತು” ಎಂದ ಆರೋಗ್ಯ ಸಚಿವ

Share This Article

ಚಳಿಗಾಲದಲ್ಲಿ ಅಲೋವೆರಾ ಜೆಲ್ ಅನ್ನು ತಲೆಗೆ ಹಚ್ಚಿಕೊಳ್ಳಬಹುದೇ? aloe vera gel benefits

aloe vera gel benefits : ಚಳಿಗಾಲದಲ್ಲಿ ತಲೆಹೊಟ್ಟು ಸಾಮಾನ್ಯ. ಚಳಿಗಾಲದಲ್ಲಿ ಶುಷ್ಕ ಗಾಳಿಯು ನಮ್ಮ…

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತೆಂಗಿನೆಣ್ಣೆ ಕುಡಿದರೆ ಏನಾಗುತ್ತೆ ಗೊತ್ತಾ? Coconut Oil Benefits

Coconut Oil Benefits:  ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವ ಆಹಾರವೇ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ.…

ಕಣ್ಣಿಗೊಂದು ಸವಾಲ್…ಈ ಫೋಟೋದಲ್ಲಿರುವ ಹಾವನ್ನು ಗುರುತಿಸಬಲ್ಲಿರಾ? Optical Illusion..

Optical Illusion: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ…