ಮಂಗಳೂರು ಜೈಲ್​ನಲ್ಲಿ ಗಲಾಟೆ: ವಿಚಾರಣಾಧೀನ ಕೈದಿಗೆ ಸಹಚರರಿಂದ ಚಾಕು ಇರಿತ

ಮಂಗಳೂರು: ನಗರದ ಸಬ್ ಜೈಲ್ ನಲ್ಲಿ ಗುರುವಾರ ವಿಚಾರಣಾಧೀನ ಸಹ ಕೈದಿಯೊಬ್ಬನ ಮೇಲೆ ನಾಲ್ವರ ತಂಡ ಚೂರಿಯಿಂದ ಇರಿದು ಹಲ್ಲೆ ನಡೆಸಿದೆ.

ಅತ್ಯಾಚಾರ ಪ್ರಕರಣದಲ್ಲಿ ಬುಧವಾರ  ಕಾರಾಗೃಹಕ್ಕೆ ಬಂದಿದ್ದ ಆರೋಪಿ ಅಕ್ಬರುದ್ದೀನ್ ಮೇಲೆ ನಾಲ್ವರು ಕೈದಿಗಳು ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಅಕ್ಬರುದ್ದೀನ್​ ವೆನ್ಲಾಕ್​ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಳೆದ ವಾರವಷ್ಟೇ ಪೊಲೀಸರು ಕಾರ್ಯಾಚರಣೆ ನಡೆಸಿ ಚೂರಿ, ಮೊಬೈಲ್ ವಶಪಡಿಸಿಕೊಂಡಿದ್ದರು. ಆದರೂ ಮತ್ತೆ ಚೂರಿ ಕೈದಿಗಳ ಬಳಿ ಸೇರಿದೆ.

ಕೈದಿಗಳ ಹೊಡೆದಾಟ ಬಿಡಿಸಲು ಹೋದ ಜೈಲು ಅಧೀಕ್ಷಕ ಹಾಗೂ ಸಿಬ್ಬಂದಿ ಮೇಲೂ ವಿಚಾರಣಾಧೀನ ಕೈದಿಗಳು ಹಲ್ಲೆಗೆ ಮುಂದಾಗಿದ್ದಾರೆ. ಈ ಬಗ್ಗೆ ಬರ್ಕೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.