ಆಶಾ ಕಡಪಟ್ಟಿ ನಮ್ಮೆಲ್ಲರಿಗೂ ಆದರ್ಶಪ್ರಾಯರು: ಸುಮಾ ಕಿತ್ತೂರ

blank

ಬೆಳಗಾವಿ: ಇಂದಿನ ಕಾಲಘಟ್ಟದಲ್ಲಿ ಪ್ರಶಸ್ತಿಗಾಗಿ ಬೇಡಿಕೆ, ಪದಕಗಳ ಚಿಂತೆಸುವವರ ಮಧ್ಯೆ ಯಾವುದಕ್ಕೂ ಆಸೆ ಇಟ್ಟುಕೊಳ್ಳದೆ ತನ್ನ ಆತ್ಮ ಸಂತೃಪ್ತಿಗಾಗಿ ಸಾಹಿತ್ಯ ಕೆಲಸ ಮಾಡಿದವರು ಆಶಾ ಕಡಪಟ್ಟಿ ನಮ್ಮೆಲ್ಲರಿಗೂ ಆದರ್ಶಪ್ರಾಯರು ಎಂದು ಲೇಖಕಿಯರ ಸಂಘದ ಅಧ್ಯಕ್ಷ ಸುಮಾ ಕಿತ್ತೂರ ಹೇಳಿದರು.

ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ಆಯೋಜಿಸಿಲಾದ ದತ್ತಿ ದಾನಿಗಳ ಕಾರ್ಯಕ್ರಮದ ನಿಮಿತ್ಯ ದಿ.ಆಶಾ ಕಡಪಟ್ಟಿ ಅವರ ಸಮಗ್ರ ಸಾಹಿತ್ಯ ಅವಲೋಕನ ಕುರಿತು ಮಾತನಾಡಿದ ಅವರು,

ಸಾಹಿತ್ಯ, ಸಂಗೀತವನ್ನು ಆರಾಧಿಸುವ ಕುಟುಂಬದಲ್ಲಿ ನೆಮ್ಮದಿ, ವಿನಯ, ಸಮೃದ್ಧಿ ಸದಾ ತುಂಬಿರುತ್ತದೆ. ಹಿರಿಯರಾದ ದಿ. ಆಶಾ ಕಡಪಟ್ಟಿ ಅವರ ಬರವಣಿಗೆ ಆಚಾರ ವಿಚಾರಗಳು ನಮ್ಮೆಲ್ಲರಿಗೂ ಸ್ಪೂರ್ತಿದಾಯಕ ಎಂದರು.

ನಮ್ಮವರ ಸಾಹಿತ್ಯವನ್ನು ನಾವು ಮೆಲುಕು ಹಾಕುವುದು ಸಾಹಿತಿಗಳಿಗೆ ನೀಡುವ ಗೌರವ, ಆಶಾ ಕಡಪಟ್ಟಿ ಅವರ ಸಾಹಿತ್ಯದ ಅವಲೋಕನ ಮಾಡುವ ಇಚ್ಛೆ ಬಹುದಿನದಿಂದ ಇತ್ತು ಅದು ಇಂದು ಸಾಕಾರವಾಗಿದೆ ಎಂದು ಹೃದಯದ ಮಾತು ಬಿಚ್ಚಿಟ್ಟರು. ಭಾವನೆಗಳನ್ನೇ ತುಂಬಿಕೊಂಡ ಆಶಾ ನಮ್ಮೆಲ್ಲರಿಗೂ ಆದರ್ಶಪ್ರಾಯರು ಎಂದು ಹೇಳಿದರು.

ಡಾ. ವಿಜಯಲಕ್ಷ್ಮಿ ಪುಟ್ಟಿ ಮಾತನಾಡಿ, ಆಶಾ ಕಡಪಟ್ಟಿ ಅವರ ಜತೆಗಿನ ಒಡನಾಟ ಇಂದು ನಿನ್ನೆಯದಲ್ಲ ಅವರೊಬ್ಬ ಒಳ್ಳೆಯ ಸಾಹಿತಿ. ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಅವರನ್ನು ನೆನೆದರು.

ಈ ಸಂದರ್ಭದಲ್ಲಿ ದತ್ತಿದಾನಿಗಳಾದ ಸುನಂದಾ ಎಮ್ಮಿ , ಸಂತೋಷ ದೇಶಪಾಂಡೆ .ಜಯಶೀಲಾ ಬ್ಯಾಕೋಡ್ , ಹೇಮಾ ಸೋನೋಳ್ಳಿ , ಜ್ಯೋತಿ ಬದಾಮಿ ನೀಲಗಂಗಾ ಚರಂತಿಮಠ, ಗುರುದೇವಿ ಹುಲೆಪ್ಪನವರಮಠ , ಕಾರ್ಯದರ್ಶಿ ಆಶಾ ಯಮಕನಮರಡಿ ಪ್ರಾಸ್ತಾವಿಕ ಮಾತನಾಡಿದರು. ಲೇಖಕಿಯರ ಸಂಘದ ಉಪಾಧ್ಯಕ್ಷ ವಾಸಂತಿ ಮೇಳೇದ ಸ್ವಾಗತಿಸಿದರು. ಜಿಲ್ಲಾ ಲೇಖಕಿಯರ ಸಂಘದ ಜ್ಯೋತಿ ಬದಾಮಿ, ಹೇಮಾ ಸೋನೋಳ್ಳಿ , ದೀಪಿಕಾ ಚಾಟೆ, ಶೈಲಜಾ ಬಿಂಗೆ ಡಾ.ಅನ್ನಪೂರ್ಣ ಹಿರೇಮಠ ನಿರೂಪಿಸಿದರು . ರಾಜೇಶ್ವರಿ ಹಿರೇಮಠ ಎಲ್ಲರನ್ನೂ ವಂದಿಸಿದರು.

Share This Article

ಕೇವಲ 10 ನಿಮಿಷದಲ್ಲಿ ಮನೆಯಲ್ಲೇ ಮಾಡಿ ಬ್ರೆಡ್ ಪಿಜ್ಜಾ; ಇಲ್ಲಿದೆ ಸಿಂಪಲ್​ ವಿಧಾನ | Recipe

ಮನೆಯಲ್ಲಿದ್ದಾಗ ಕೆಲವೊಮ್ಮೆ ಬಹಳ ಹಸಿವಾಗುತ್ತಿರುತ್ತದೆ ಆದರೆ ಆ ಸಮಯದಲ್ಲಿ ಏನು ತಿನ್ನಬೇಕು ಎಂಬುದೆ ನಮಗೆ ತಿಳಿಯುವುದಿಲ್ಲ.…

ಊಟದ ಬಳಿಕ ಬೆಲ್ಲದ ಸೇವನೆಯಿಂದಾಗುವ ಪ್ರಯೋಜನ ಗೊತ್ತಾ?; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ | Health Tips

ಭಾರತದಲ್ಲಿ ಬೆಲ್ಲವನ್ನು ಸಾಮಾನ್ಯವಾಗಿ ಊಟದ ನಂತರ ತಿನ್ನಲಾಗುತ್ತದೆ. ನಿಮ್ಮ ಹಸಿವನ್ನು ನೀಗಿಸಲು ಇದನ್ನು ಸಿಹಿಯಾಗಿ ಸೇವಿಸಬಹುದು.…

ಟೊಮೆಟೊ ಸೇವನೆ ಕ್ಯಾನ್ಸರ್​ ಅಪಾಯವನ್ನು ಕಡಿಮೆ ಮಾಡುತ್ತದೆಯೇ; ಈ ಬಗ್ಗೆ ತಜ್ಞರು ಹೇಳೋದೇನು? | Health Tips

ಕ್ಯಾನ್ಸರ್ ಚಿಕಿತ್ಸೆಯು ಇನ್ನೂ ಅತ್ಯಂತ ದುಬಾರಿ ಮತ್ತು ಅಸಾಧ್ಯವಾಗಿದೆ. ಇತ್ತೀಚೆಗೆ ಯುವಕರನ್ನೂ ಕಾಡುತ್ತಿರುವ ರೋಗ ಕ್ಯಾನ್ಸರ್​​.…