More

    ಸಹಕಾರ ಸಂಘದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ

    ಕೆ.ಎಂ.ದೊಡ್ಡಿ: ಷೇರುದಾರರಿಗೆ ಮತದಾನ ಹಕ್ಕನ್ನು ನೀಡದಿರುವ ಆಡಳಿತ ಮಂಡಳಿಯ ಕ್ರಮ ಖಂಡಿಸಿ ದೊಡ್ಡರಸಿನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

    ಷೇರುದಾರರನ್ನು ಮತದಾನ ಪಟ್ಟಿಯಲ್ಲಿ ಕೈಬಿಟ್ಟಿರುವ ಬಗ್ಗೆ ಆಕ್ರೋಶದ ಹಿನ್ನೆಲೆಯಲ್ಲಿ ಶನಿವಾರ ಅಧ್ಯಕ್ಷ ಮಧುಕುಮಾರ್ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಯುತಿತ್ತು.

    ಈ ವೇಳೆ ಕಚೇರಿಗೆ ತೆರಳಿದ ಗ್ರಾಮಸ್ಥರು, ಮತದಾನ ಪಟ್ಟಿಯನ್ನು ಸಂಪೂರ್ಣವಾಗಿ ಪರಿಸ್ಕರಣೆ ಮಾಡದೆ ಉದ್ದೇಶಪೂರ್ವಕವಾಗಿ ಕೆಲವು ಷೇರುದಾರರನ್ನು ಕಿತ್ತು ಹಾಕಿದ್ದಾರೆ. ಮೂರು ವಾರ್ಷಿಕ ಸಭೆಗೆ ಹಾಜರಾಗಿಲ್ಲ ಎಂಬ ನೇಪ ಹೇಳಿ ಮತದಾನ ಪಟ್ಟಿಯಿಂದ ಕೈಬಿಟ್ಟಿದ್ದಾರೆ ಎಂದು ಆಕ್ರೊಶ ವ್ಯಕ್ತಪಡಿಸಿದರು.

    ಚುನಾವಣೆ ನಡೆಸಲು ದಿನಾಂಕ ನಿಗದಿಸಿಪಡಿಸಿದ್ದು, ಚುನಾವಣಾಧಿಕಾರಿ ಪೂರ್ಣಿಮಾ ಅವರು ತಮಗೆ ಇಷ್ಟಬಂದಂತೆ ಏಕ ಪಕ್ಷೀಯ ನಿರ್ಧಾರ ತೆಗೆದುಕೊಂಡು ಸಾರ್ವಜನಿಕ ಸ್ವತ್ತಾಗಿರುವ ಸೊಸೈಟಿಯ ಷೇರುದಾರರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

    ಬಳಿಕ ಮಧ್ಯ ಪ್ರವೇಶಿಸಿದ ಡಿಸಿಸಿ ಬ್ಯಾಂಕ್ ನಿರ್ದೇಶಕ ಹೊನ್ನೇಗೌಡ, ಷೇರುದಾರರಿಗೆ ಅನ್ಯಾಯವಾಗಿದ್ದರೆ ಅದನ್ನು ಸರಿಪಡಿಸಲಾಗುವುದು, ಸುಮ್ಮನೆ ಗೊಂದಲ ಸೃಷ್ಟಿಸುವುದು ಬೇಡ. ಈ ಬಗ್ಗೆ ಆಡಳಿತ ಮಂಡಳಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಭರವಸೆ ನೀಡಿದರು.
    ನಂತರ ನಿರ್ದೇಶಕ ಡಿ.ಕೆ.ಕೃಷ್ಣ ಮಾತನಾಡಿ, ಷೇರುದಾರರಿಗೆ ಮತದಾನ ಹಕ್ಕು ನೀಡುವ ಸಂಬಂಧ ಆಡಳಿತ ಮಂಡಳಿಯ ಐದು ಮಂದಿ ಸದಸ್ಯರ ಕಮೀಟಿ ಮಾಡಿದ್ದು ಕಾನೂನು ಪರಿಣಿತರ ಸಲಹೆ ಪಡೆದು ತೀರ್ಮಾನ ಮಾಡಲಾಗುವುದು ಎಂದು ಆಶ್ವಾಸನೆ ನೀಡಿದರು.

    ಬಳಿಕ ಗ್ರಾಪಂ ಸದಸ್ಯ ಚಿಕ್ಕಹುಚ್ಚೇಗೌಡ ಮಾತನಾಡಿ, ಷೇರುದಾರರನ್ನು ಮತದಾನ ಪಟ್ಟಿಯಿಂದ ಕೈಬಿಟ್ಟಿರುವ ಕ್ರಮ ಖಂಡನೀಯವಾಗಿದ್ದು, ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ಚುನಾವಣೆ ನಡೆಯಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಆಗ್ರಹಿಸಿದರು.
    ಮಂಡ್ಯ ಜಿಲ್ಲಾ ಸಹಕಾರ ಯೂನಿಯನ್ ಮಾಜಿ ನಿರ್ದೇಶಕ ಮಂಚೇಗೌಡ, ಚಿಕ್ಕಹುಚ್ಚೇಗೌಡ, ಪ್ರಸನ್ನ, ಉಮೇಶ್, ಶಂಕರ್, ಕರೀಗೌಡ, ಶಿವಲಿಂಗ, ಚಿಕ್ಕಣ್ಣ ಮತ್ತಿತರರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts