ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಕೆಎಲ್ಇ ಐಟಿ) ತಂಡವು ವಿಟಿಯು ಬೆಳಗಾವಿ ವಿಭಾಗ ಅಂತರ್ ಮಹಾವಿದ್ಯಾಲಯ ಪುರುಷರ ಕೋಕೋ ಟೂರ್ನಾಮೆಂಟ್ನಲ್ಲಿ ಸತತ ಮೂರನೇ ಬಾರಿ ವಿಜೇತರಾಗಿ ದಾಖಲೆ ನಿರ್ವಿುಸಿದೆ.
ಗದಗ ಜಿಲ್ಲೆ ಲಕ್ಷೇ ಶ್ವರದ ಎಸ್ಕೆವಿ ಎಂಎಸಿಇಟಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಟೂರ್ನಿಯಲ್ಲಿ ಈ ತಂಡವು ಈ ಸಾಧನೆ ಮಾಡಿದೆ.
ಜಿಮಖಾನಾ ಚೇರ್ಮನ್ ಶಿವಪ್ರಕಾಶ, ಪ್ರಾಚಾರ್ಯ ಡಾ. ಮನು ಟಿ.ಎಂ., ದೈಹಿಕ ಶಿಕ್ಷಣ ನಿರ್ದೇಶಕ ಕಿರಣ ದೊಡ್ಡಮನಿ, ತರಬೇತಿದಾರ ತಿರುಪತಿ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳಾದ ಮನೋಜ, ಸುರೇಶ, ಚೇತನ, ಅಭಯ, ನವೀನ, ದರ್ಶನ, ಪ್ರದೀಪ, ಉಮರ, ನವೀತ್, ಆಕಾಶ, ಸಾಗರ, ನೂತನ, ಪ್ರಜ್ವಲಕುಮಾರ, ನಿತೀಶಕುಮಾರ ಇದ್ದರು.