ರಾಣೆಬೆನ್ನೂರ: ಸ್ಥಳೀಯ ಕೆಎಲ್‌ಇ ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಶನಿವಾರ ವಿಶ್ವ ಜನಸಂಖ್ಯಾ ದಿನ ಆಚರಿಸಲಾಯಿತು.
ಉಪನ್ಯಾಸಕ ಪ್ರೇಮಕುಮಾರ ಬಿದರಕಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ಜನಸಂಖ್ಯೆ ಬೆಳವಣಿಗೆಗೆ ಕಾರಣಗಳೇನು ಮತ್ತು ಅದಕ್ಕೆ ಪರಿಹಾರ ಕ್ರಮಗಳೇನು ಎಂಬ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ನಾರಾಯಣ ನಾಯಕ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾಸಕರಾದ ಸಾಯಿಲತಾ ಮಡಿವಾಳರ, ಸುಜಾತ ಹುಲ್ಲೂರ, ಶ್ರೀಕಾಂತ ಕುಂಚೂರÀ, ಅನುರಾಧ ಎಸ್., ಕವಿತಾ ಗಡ್ಡದಗೂಳಿ, ಸಂಗೀತಾ ಕಾಯಕದ, ಭಾಗ್ಯವತಿ ದೇಶಪಾಂಡೆ, ವೀರೇಶ ಕುರಹಟ್ಟಿ ಮತ್ತಿತರರು ಉಪಸ್ಥಿತರಿದ್ದರು.