ನಗರದ ಪ್ರತಿಷ್ಠಿತಕೆ ಕೆ. ಎಲ್ ಇ ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ೧೩೩ ನೇ ಜನ್ಮದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಆರ್ ಎಂ ಬಡಿಗೇರ್ ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆಯ ಕುರಿತು ಮಾತನಾಡಿದರು. ಮತ್ತೂರ್ವ ಉಪನ್ಯಾಸಕರಾಗಿ ಆಗಮಿಸಿದ ಪ್ರೊ.ಜಗನ್ನಾಥ್ ಮಲಗೊಂಡ. ಅಂಬೇಡ್ಕರ್ ಅವರು ಸಂವಿಧಾನ ರಚಯನೆಯ ಸಂದರ್ಭದಲ್ಲಿ ಹಾಗೂ ಅದರ ಮಹತ್ವದ ಕುರಿತು ವಿವರಿಸಿದ್ದರು. ಮತ್ತೋರ್ವ ಉಪನ್ಯಾಸಕಿಯಾಗಿ ಆಗಮಿಸಿದ ಪ್ರೊ. ಶ್ರೀಮತಿ ಕಲ್ಯಾಣಿ ಹುಲಕುಂದ್ ಅಂಬೇಡ್ಕರ್ ಅವರ ಸ್ತ್ರೀ ಸಮಾನತೆಯ ಕುರಿತು ಹಾಗೂ ಎಲ್ಲರ ಶ್ರೇಯಾ ಅಭಿವೃದ್ಧಿ ಸಮಾನತೆಗಾಗಿ ಸತತವಾಗಿ ಪರಿಶ್ರಮಿಸಿದರು. ಎಂದು ಉಪನ್ಯಾಸ ನೀಡಿದರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರೊ ವಿಶ್ವನಾಥ್ ಜಿ ಅಧ್ಯಕ್ಷೀಯ ನುಡಿಗಳ್ನಾಡಿದರು. ಪಿಯು ಪ್ರಚಾರ್ಯಾರದ ಶ್ರೀ ಎಸ್ ಬಿ ಹಾವೇರಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಡಾ. ನಾಗರಾಜ್ ಬಳಿಗೇರ ಕಾರ್ಯಕ್ರಮವನ್ನು ನಿರೂಪಿಸಿದರು. IQSC ಕೋ ಆರ್ಡಿನೇಟರ್ ಆದ ಪ್ರೊ.ಪ್ರದೀಪ್ ಸಂಗಪ್ಪಗೊಳ ಉಪಸ್ಥಿತರಿದ್ದರು. ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು