ಸಿಇಒ ವರ್ಗಾವಣೆಗೆ ಒಕ್ಕೊರಲ ನಿರ್ಣಯ

ಕಲಬುರಗಿ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ವಿರುದ್ಧ ಸದಸ್ಯರು ಮತ್ತೊಮ್ಮೆ ಮುಗಿಬಿದ್ದಿದ್ದಾರೆ. ಕೂಡಲೇ ಅವರನ್ನು ಇಲ್ಲಿಂದ ವರ್ಗಾಯಿಸಬೇಕೆಂದು ಆಗ್ರಹಿಸಿ ಮತ್ತೊಮ್ಮೆ ನಿರ್ಣಯ ಸ್ವೀಕರಿಸಿದ್ದಾರೆ.
ಅಧ್ಯಕ್ಷೆ ಸುವರ್ಣ ಮಲಾಜಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಜಿಪಂ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಎಲ್ಲ ಸದಸ್ಯರು ಪಕ್ಷಬೇಧ ಮರೆತು ಸಿಇಓ ವಿರುದ್ಧ ಕೆರಳಿ ನಿಂತರು. ಇಂದಿನ ಸಭೆಯಲ್ಲಿ ಪಾಲ್ಗೊಳ್ಳಬೇಕಾಗಿದ್ದ ಕೊರ್ಲಪಾಟಿ ಅಧ್ಯಕ್ಷರಿಗೂ ಮಾಹಿತಿ ನೀಡದೆ ವಿದೇಶಕ್ಕೆ ತೆರಳಿದ್ದಾರೆ. ಇದೂ ಸಹ ಚಚರ್ೆಗೆ ಕಾರಣವಾಯಿತು.
ಹೆಪ್ಸಿಬಾರಾಣಿ ಕೊರ್ಲಪಾಟಿ ಸದಸ್ಯರಿಗೆ ಗೌರವ ನೀಡುತ್ತಿಲ್ಲ, ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಗದರಿಸುತ್ತಾರೆ, ಸಭೆಗಳಲ್ಲಿ ಕೈಗೊಂಡ ನಿರ್ಣಯ ಅನುಷ್ಠಾನಗೊಳಿಸುತ್ತಿಲ್ಲ. ಕೆಳಹಂತದ ಅಧಿಕಾರಿಗಳ ಜತೆಗೂಡಿ ಜಿಪಂ ಆಡಳಿತ ಕೆಡಿಸಿದ್ದಾರೆ. ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು, ಅವರನ್ನು ವಗರ್ಾವಣೆ ಮಾಡುವಂತೆ ಎಲ್ಲ ಸದಸ್ಯರು ಒತ್ತಾಯಿಸಿದಾಗ ಇದನ್ನೇ ಗೊತ್ತುವಳಿಯನ್ನಾಗಿ ಸ್ವೀಕರಿಸಲಾಯಿತು.
ಪ್ರತಿಪಕ್ಷದ ನಾಯಕ ಶಿವಾನಂದ ಪಾಟೀಲ್ ವಿಷಯ ಪ್ರಸ್ತಾಪಿಸಿ ಸಿಇಓ ಈವರೆಗೆ ನಡೆದ ಸಾಮಾನ್ಯ ಸಭೆಯ ನಿರ್ಣಯಗಳನ್ನು ಅನುಷ್ಠಾನಗೊಳಿಸಿಲ್ಲ. ಸದಸ್ಯರು ದೂರು ನೀಡಿರುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಕೊಂಡಿಲ್ಲ ಇದನ್ನು ನೋಡಿದಾಗ ಸ್ವತ: ಸಿಇಓ ಅವರೇ ಅಕ್ರಮಗಳನ್ನು ನಡೆಸಿದ್ದಾರೆ ಎಂಬ ಅನುಮಾನ ಬರುತ್ತದೆ ಎಂದು ಹೇಳಿ ಇಂಥ ಸಿಇಓ ನಮಗೆ ಬೇಡ ಎಂದರು.
ಈ ಅಧಿಕಾರಿ ಜಿಪಂ ಅಧ್ಯಕ್ಷರಿಗೆ ಮಾಹಿತಿ ನೀಡದೆ ವಿದೇಶಕ್ಕೆ ಹೋಗಿದ್ದಾರೆ. ಈಶಾನ್ಯ ಸಾರಿಗೆ ಸಂಸ್ಥೆಯ ಪ್ರಭಾರಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಸಾಮಾನ್ಯ ಸಭೆಯ ನೋಟೀಸ್ ಹೊರಡಿಸಿ ವಿದೇಶಕ್ಕೆ ಹೋಗುವ ಔಚಿತ್ಯವೇನಿತ್ತು ಎಂದು ಪ್ರಶ್ನಿಸಿದರು.
ಸಭೆಯ ನಿರ್ಧಾರ ಅನುಷ್ಠಾನಗೊಳಿಸುವ ಹೊಣೆ ಹೊಂದಿರುವ ಸಿಇಒ ಇಲ್ಲದೆ ಸಾಮಾನ್ಯ ಸಭೆ ನಡೆಸುವುದು ವ್ಯರ್ಥ. ಹೀಗಾಗಿ ಸಭೆ ಮುಂದೂಡಿ. ಸಭೆ ಹಾಗೂ ಸದಸ್ಯರಿಗೆ ಗೌರವ ನೀಡದ ಅವರ ಸೇವೆ ನಮಗೆ ಬೇಡ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವಿಸದೆ ಸವರ್ಾಧಿಕಾರಿಯಂತಿರುವ ಸಿಇಒ ಕೊರ್ಲಪಾಟಿ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಲು ನಿರ್ಣಯ ಕೈಗೊಳ್ಳಿ ಎಂದು ಆಡಳಿತ ಪಕ್ಷದ ಸದಸ್ಯ ಹಷರ್ಾನಂದ ಗುತ್ತೇದಾರ ಮತ್ತು ಶಿವರಾಜ ಪಾಟೀಲ್ ರದ್ದೇವಾಡಗಿ ಆಗ್ರಹಿಸಿದರು.
ಸದಸ್ಯರಾದ ಶಾಂತಪ್ಪ ಕೂಡಲಗಿ, ಸಂಜೀವನ್ ಯಾಕಾಪುರ, ಶರಣಗೌಡ ಪಾಟೀಲ್, ಸಿದ್ದರಾಮ ಪ್ಯಾಟಿ, ರೇವಣಸಿದ್ದಪ್ಪ ಸಂಕಾಲಿ, ವಿಜಯಲಕ್ಷ್ಮೀ ಹಾಗರಗಿ, ಅರವಿಂದ ಚವ್ಹಾಣ, ರಾಜೇಶ ಗುತ್ತೇದಾರ, ದಂಡಪ್ಪ ಸಾಹು ಕುಳಗೇರಿ ಇತರರು ಮಾತನಾಡಿ, ಅವರ ಸೇವೆ ಬೇಡವೇ ಬೇಡ. ತಕ್ಷಣವೇ ಅವರನ್ನು ಇಲ್ಲಿಂದ ವರ್ಗಾವಣೆ ಮಾಡುವಂತೆ ಒತ್ತಾಯಿಸಿದರು.
ಕೊರ್ಲಪಾಟಿ ವರ್ಗಾವಣೆ ಮಾಡಲು ಕೈಗೊಂಡಿರುವ ನಿರ್ಣಯ ಕಡತಕ್ಕೆ ಕೂಡಲೇ ಅಧ್ಯಕ್ಷರು ಹಾಗೂ ಪ್ರಭಾರಿ ಸಿಇಒ ಆಗಿರುವ ಸಿಪಿಒ ಪ್ರವೀಣಪ್ರಿಯಾ ಡೇವಿಡ್ ಅವರು ರುಜು ಹಾಕಿ ಸರ್ಕಾರಕ್ಕೆ ಕಳುಹಿಸಿಕೊಡಬೇಕು. ವಿಳಂಬ ಮಾಡಬಾರದು ಎಂದು ಆಗ್ರಹಿಸಿದರು.
ಅಧ್ಯಕ್ಷೆ ಸುವರ್ಣ ಮಾತನಾಡಿ, ತಕ್ಷಣ ಸರ್ಕಾರಕ್ಕೆ ಜಿಪಂ ನಿರ್ಣಯ ಕಳುಹಿಸಿಕೊಡಲಾಗುವುದು ಎಂದು ಸಭೆಗೆ ತಿಳಿಸಿದರು. ಉಪಾಧ್ಯಕ್ಷ ಶೋಭಾ ಸಿರಸಗಿ ಸೇರಿದಂತೆ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸರ್ಕಾರ ಬಳಿ ನಿಯೋಗ: ಸಿಇಒ ಹೆಪ್ಸಿಬಾರಾಣಿ ಅವರನ್ನು ತಕ್ಷಣವೇ ವಗರ್ಾವಣೆ ಮಾಡುವಂತೆ ಸಕರ್ಾರದ ಮೇಲೆ ಒತ್ತಡ ಹೇರಲು ಮುಖ್ಯಮಂತ್ರಿ, ಗ್ರಾಮೀಣಾಭಿವೃದ್ಧಿ ಸಚಿವರ ಬಳಿಯ ಜಿಪಂ ಸರ್ವ ಸದಸ್ಯರ ನಿಯೋಗವೊಂದನ್ನು ತೆಗೆದುಕೊಂಡು ಹೋಗಲು ಸಾಮಾನ್ಯ ಸಭೆಯಲ್ಲಿ
ನಿರ್ಧರಿಸಲಾಯಿತು. ಒಂದೆರಡು ದಿನಗಳಲ್ಲಿಯೇ ದಿನಾಂಕ ನಿಗದಿಪಡಿಸಿ ಬೆಂಗಳೂರಿಗೆ ತೆರಳಲಾಗುತ್ತದೆ. ಸಿಇಒ ಹಠಾವೋ ಹೋರಾಟಕ್ಕೆ ಆಡಳಿತ, ಪ್ರತಿಪಕ್ಷಗಳ ಸದಸ್ಯರು ಸೇರಿದಂತೆ ಎಲ್ಲ ಸದಸ್ಯರು ಪಕ್ಷದ ಬೇಧ ಮರೆತು ಬೆಂಬಲಿಸಿದರು. ಮೂರು ತಿಂಗಳ ಹಿಂದೆ ನಡೆದ ಸಾಮಾನ್ಯ ಸಭೆಯಲ್ಲಿಯೂ ಇಂತಹ ನಿರ್ಧಾರ ಕೈಗೊಳ್ಳಲಾಗಿತ್ತಾದರೂ, ಅದು ಜಾರಿಗೆ ಬಂದಿರಲಿಲ್ಲ. ಕಡತಗಳನ್ನು ಸರ್ಕಾರಕ್ಕೆ ಕಳುಹಿಸಿಕೊಟ್ಟಿರಲಿಲ್ಲ.
ಇಲ್ಲಿ ಅವಮಾನ ವಿದೇಶದಲ್ಲಿ ಸನ್ಮಾನ: ಸಿಇಒ ಹೆಪ್ಸಿಬಾರಾಣಿ ಕೊರ್ಲಪಾಟಿ ಈಶಾನ್ಯ ಸಾರಿಗೆ ಸಂಸ್ಥೆಗೆ ಲಭಿಸಿರುವ ಪ್ರಶಸ್ತಿ ಸ್ವೀಕರಿಸಲು ಮಲೇಷಿಯಾಕ್ಕೆ ತೆರಳಿದ್ದಾರೆ. ಸದ್ಯಕ್ಕೆ ಅವರು ಎನ್ಇಕೆಆರ್ಟಿಸಿ ಪ್ರಭಾರಿ ಎಂಡಿ ಸಹ ಆಗಿರುವುದರಿಂದ ವಿದೇಶಕ್ಕೆ ತೆರಳಿದ್ದಾರೆ. ಜಿಪಂ ಸಭೆ ದಿನಾಂಕ ನಿಗದಿ ಮಾಡಿ ವಿದೇಶಕ್ಕೆ ಹಾರಿರುವ ಅವರ ಕ್ರಮ ಸದಸ್ಯರನ್ನು ಕೆರಳಿಸಿತು. ಸಿಇಒ ಅವರಿಗೆ ವಿದೇಶದಲ್ಲಿ ಸನ್ಮಾನ ನಡೆಯುತ್ತಿದ್ದರೆ, ಇಲ್ಲಿ ಅವರ ವರ್ತನೆ ಖಂಡಿಸಿ ಅವಮಾನ ಮಾಡಲಾಗುತ್ತಿದೆ. ಅವರಿಗೆ ಇಲ್ಲಿನ ಅವಮಾನಕ್ಕಿಂತಲೂ ವಿದೇಶದಲ್ಲಿನ ಸನ್ಮಾನ ಮುಖ್ಯವಾಗಿರುವಂತಿದೆ ಎಂದು ಕೃಷಿಕ ಸಮಾಜದ ಅಧ್ಯಕ್ಷ ಸಿದ್ದರಾಮಪ್ಪ ಪಾಟೀಲ್ ಧಂಗಾಪುರ ಅಸಮಾಧಾನ ವ್ಯಕ್ತಪಡಿಸಿದರು.