ಕ್ರೀಡಾ ಚೈತನ್ಯ ಸಾಧನೆಗೆ ಸ್ಫೂರ್ತಿ

ಕಲಬುರಗಿ: ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆ ಮಾಡುವವರು ಸದಾ ಚೈತನ್ಯದ ಚಿಲುಮೆ ಆಗಿರಬೇಕು ಎಂದು ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಹೇಳಿದರು.

ನಗರದ ಶೆಟ್ಟಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಆಯೋಜಿಸಿದ್ದ ಪುರುಷ ಮತ್ತು ಮಹಿಳೆಯರ ಅಂತರ್ ಕಾಲೇಜು ಟೇಬಲ್ ಟೆನಿಸ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ವ್ಯಕ್ತಿಯ ಯಶಸ್ಸು ಅವರ ಕನಸುಗಳನ್ನು ಸಾಕಾರಗೊಳಿಸುವ ದೃಢ ನಿರ್ಧಾರದ ಮೇಲೆ ಅವಲಂಬಿಸಿದೆ. ಕನಸುಗಳನ್ನು ನನಸು ಮಾಡಲು ಕಠಿಣ ಪರಿಶ್ರಮ ಪಡಬೇಕು ಎಂದು ಸಲಹೆ ನೀಡಿದರು.

ಸಂಸ್ಥೆ ಅಧ್ಯಕ್ಷ ಉದಯಶಂಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಹ ಪ್ರಾಚಾರ್ಯ ಡಾ.ರವಿ ಸೊಂತ, ತಾಂತ್ರಿಕ ಸಲಹೆಗಾರರಾದ ಪ್ರೊ.ಪುರುಷೋತ್ತಮ ಐನಾಪುರ, ಶೆಟ್ಟಿ ಪಾಲಿಟೆಕ್ನಿಕ್ ಪ್ರಾಚಾರ್ಯ ಶಿವಶಂಕರ ಮಂಗಲಗಿ ಉಪಸ್ಥಿತರಿದ್ದರು. ಪ್ರಾಚರ್ಯ ಡಾ.ಅಶೋಕ ವಣಗೇರಿ ಸ್ವಾಗತಿಸಿದರು. ಪ್ರೊ.ಸೌಮ್ಯ ಪಾಟೀಲ್ ನಿರೂಪಣೆ ಮಾಡಿದರು. ಪ್ರೊ.ನೇಹಾ ಪಾಟೀಲ್ ಪರಿಚಯಿಸಿದರು.

ಪ್ರೊ.ಅನಿಲಕುಮಾರ, ಪ್ರೊ.ಅರುಣಕುಮಾರ, ಪ್ರೊ.ವೈಭವ್ ಮತ್ತು ದ್ಯೆಹಿಕ ಶಿಕ್ಷಕ ದತ್ತನ್ ಮಂತಗಿ ಪಂದ್ಯಾವಳಿಯಲ್ಲಿ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದರು. ಬೀದರ್ನಿಂದ ಬಾಗಲಕೋಟೆವರೆಗಿನ ಅನೇಕ ತಾಂತ್ರಿಕ ವಿದ್ಯಾಲಯಗಳು ಭಾಗವಹಿಸಿದ್ದವು.

ಪಂದ್ಯಾವಳಿ ಫಲಿತಾಂಶ
ಪುರುಷ ವಿಭಾಗದಲ್ಲಿ ವಿಜಯಪುರದ ಬಿಎಲ್ಡಿ ಕಾಲೇಜು ಪ್ರಥಮ ಮತ್ತು ಕಲಬುರಗಿ ಪಿಡಿಎ ಇಂಜಿನಿಯರಿಂಗ್ ಕಾಲೇಜು ದ್ವಿತೀಯ ಹಾಗೂ ಮಹಿಳೆಯರ ವಿಭಾಗದಲ್ಲಿ ಬಿಐಟಿಎಂ ಬಳ್ಳಾರಿ ಪ್ರಥಮ ಮತ್ತು ಆರ್ವೈಎಂಇಸಿ ಕಾಲೇಜು ಬಳ್ಳಾರಿ ದ್ವಿತೀಯ ಸ್ಥಾನ ಪಡೆದುಕೊಂಡಿತು. ಸಮಾರೋಪದಲ್ಲಿ ಕಲಬುರಗಿ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿದರ್ೇಶಕ ಡಾ.ಉಮೇಶ ಎಸ್.ಆರ್. ವಿಜೇತರಿಗೆ ಬಹುಮಾನ ವಿತರಿಸಿದರು.