ವರ್ಮಾ ಪರ ಸುಪ್ರಿಂಗೆ ಮೊರೆ; ಪ್ರಿಯಾಂಕ್-ಅಜಯಸಿಂಗ್ ಬೆಂಬಲ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಸಿಬಿಐ ನಿರ್ದೇಶಕರಾಗಿದ್ದ ಅಲೋಕ ವರ್ಮಾರನ್ನು ಧೀರ್ಘ ರಜೆಯ ಮೇಲೆ ಕಳುಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಕ್ರಮವನ್ನು ಪ್ರಶ್ನಿಸಿ ಸುಪ್ರಿಂಕೋರ್ಟ್​ ಮೊರೆ ಹೋಗಿರುವ ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕ್ರಮ ಮತ್ತು ನಿಲುವು ಸರಿಯಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಶಾಸಕ ಅಜಯಸಿಂಗ್ ಹೇಳಿದ್ದಾರೆ.

ಈ ಹಿಂದೆ ಪ್ರಧಾನಿಗಳು ವರ್ಮಾ ಅವರನ್ನು ನೇಮಕ ಮಾಡಿದ್ದ ಪ್ರಕ್ರಿಯೆಯನ್ನು ವಿರೋಧಿಸಿದ್ದರೆ ಹೊರತು ಬೇರೆಯನ್ನು ಅಲ್ಲ. ಆದರೆ, ಈಗಲೂ ಸಹ ಅಷ್ಟೇ ಸರಿಯಾಗಿ ಕೆಲಸ ಮಾಡಿಕೊಂಡು ಹೋಗುವಾಗ ರಜೆಯ ಮೇಲೆ ಕಳುಹಿಸಿದ್ದನ್ನು ವಿರೋಧಿಸಿದ್ದೇವೆ, ಅದನ್ನು ಪ್ರಶ್ನಿಸಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ  ಮಾಡಿರುವ ಟ್ವಿಟ್ನಲ್ಲಿ ಹಾಗೂ ಡಾ.ಅಜಯಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿರೋಧ ಪಕ್ಷದವರ ಅಭಿಪ್ರಾಯ ಪಡೆದುಕೊಳ್ಳದೆ ನೇಮಕ ಮಾಡಿದ್ದಕ್ಕೆ ಖರ್ಗೆ ಆಕ್ಷೇಪಿಸಿದ್ದರು, ಈಗ ತಮ್ಮ ಸ್ವಾರ್ಥಕ್ಕಾಗಿ ಕಡ್ಡಾಯ ರಜೆಯ ಮೇಲೆ ಕಳುಹಿಸಿದ್ದಾರೆ. ಹೀಗಾಗಿ ಆ ವೇಳೆಯಲ್ಲಿ ಖರ್ಗೆ ಅವರು ಆಕ್ಷೇಪಿಸಿದ್ದು ಸರಿಯಿದೆ, ಈಗ ಪ್ರಶ್ನೆ ಮಾಡಿದ್ದು ಸರಿ ಇದೆ. ಎರಡು ಹೊತ್ತಿನಲ್ಲಿ ಪ್ರಧಾನಿ ನಿಲುವು ತಪ್ಪಾಗಿದೆ ಎಂಬುದು ಅರಿತುಕೊಳ್ಳಬೇಕು ಎಂದು ಶೇಖರ ಗುಪ್ತಾ ಟ್ವಿಟ್ಗೆ ಟ್ಯಾಗ್ ಮಾಡಿ ಪ್ರಿಯಾಂಕ್ ಖರ್ಗೆ ಟ್ವಿಟ್ ಮಾಡಿ ತಿರುಗೇಟು ನೀಡಿದ್ದಾರೆ. ಅಲ್ಲದೆ ಗುಪ್ತಾ ತಮ್ಮ ನಿಲುವಿನಿಂತಲೂ ಸ್ಮಾರ್ಟ ಆಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು, ಸಿಬಿಐ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರಿಂದಲೇ ದೇಶದ ಉನ್ನತ ತನಿಖಾ ಸಂಸ್ಥೆಯಲ್ಲಿ ಇಂತಹ ಬೆಳವಣಿಗೆಗಳು ನಡೆಯಲು ಕಾರಣವಾಗಿದೆ. ಇದನ್ನು ಮುಂದಿನ ದಿನಗಳಲ್ಲಿ ಸುಧಾರಿಸಿಕೊಳ್ಳಬೇಕು, ಸಿಬಿಐ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಪ್ರಿಯಾಂಕ್ ಖರ್ಗೆ ಮತ್ತು ಅಜಯಸಿಂಗ್ ಧರ್ಮಸಿಂಗ್ ಹೇಳಿದ್ದಾರೆ.