ಅಭಿಮಾನಿಗಳೊಂದಿಗೆ ಪ್ರಿಯಾಂಕ್ ಬರ್ತ್​ಡೇ

ವಿಜಯವಾಣಿ ಸುದ್ದಿಜಾಲ ಚಿತ್ತಾಪುರ
ತಳಿರು ತೋರಣಗಳಿಂದ ಅಲಂಕಾರಗೊಂಡ ಹೊಸ ಬಂಗಲೆ. ಜಮಾಯಿಸಿದ ಅಸಂಖ್ಯಾತ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಕೈಗಳಲ್ಲಿ ವಿಧ-ವಿಧದ ಕೇಕ್ ಹಾಗೂ ಹೂಗುಚ್ಛ. ಈ ಸನ್ನಿವೇಶ ಕಂಡಿದ್ದು ಗುರುವಾರ ಸಚಿವ ಪ್ರಿಯಾಂಕ್ ಖರ್ಗೆ ಅವರ ಬೆಂಗಳೂರಿನಲ್ಲಿರುವ ನೂತನ ನಿವಾಸದಲ್ಲಿ.

ಸಮಾಜ ಕಲ್ಯಾಣ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಚಿತ್ತಾಪುರ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಗುರುವಾರ 40ನೇ ವರ್ಷಕ್ಕೆ ಪದರ್ಪಣೆ ಮಾಡಿದ್ದು, ಬೆಂಗಳೂರಿನ ಸ್ಯಾಂಕಿ ರಸ್ತೆಯಲ್ಲಿರುವ ನಿವಾಸದಲ್ಲಿ ಜನ್ಮದಿನ ಸಂಭ್ರಮ ಮನೆ ಮಾಡಿತ್ತು. ಸಹಸ್ರಾರು ಕಾರ್ಯಕರ್ತರು ಕೇಕ್ ಹಾಗೂ ಹೂಗುಚ್ಛದೊಂದಿಗೆ ಆಗಮಿಸಿ ಸಚಿವರಿಗೆ ಬರ್ತ್​ಡೇ ವಿಶ್ ಹೇಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಸರ್ಕಾರದಿಂದ ನೀಡಿದ ಹೊಸ ಬಂಗಲೆಯನ್ನು ಸಚಿವರು ತಮ್ಮ ಜನ್ಮದಿನದಂದೇ ಪ್ರವೇಶಿಸಿರುವುದು ವಿಶೇಷ. ಇನ್ನು ನೂತನ ನಿವಾಸಕ್ಕೆ ವಿವಿಧ ಬಗೆಯ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಮುಖ್ಯ ಗೇಟ್ಗೆ ಪ್ರಿಯಾಂಕ್ ಖರ್ಗೆ ಎಂಬ ಅಕ್ಷರಗಳನ್ನು ಹೂಗಳಲ್ಲಿ ಜೋಡಿಸಿದ್ದು ಗಮನಸೆಳೆಯಿತು.

ಸಾಕಷ್ಟು ಕೇಕ್ಗಳಲ್ಲಿ ವಿಧಾನಸೌಧ ಮಾದರಿಯಲ್ಲಿ ವಿನ್ಯಾಸಗೊಳಿಸಿದ ಕೇಕ್ ನೆರೆದಿದ್ದ ಅಸಂಖ್ಯಾತ ಜನರ ಕಣ್ಮನ ಸೆಳೆಯಿತು. 40ನೇ ಜನ್ಮದಿನ ಹಿನ್ನೆಲೆಯಲ್ಲಿ ಬಹುತೇಕ್ ಕೇಕ್ಗಳು ಸಹ 40 ಕೆಜಿ ತೂಕದ್ದಾಗಿದ್ದವು. ಇನ್ನು ಕೆಲ ಅಭಿಮಾನಿಗಳು ವಿವಿಧ ವಾದ್ಯಗಳೊಂದಿಗೆ ನೃತ್ಯ ಮಾಡುತ್ತ ಸಚಿವರ ನಿವಾಸಕ್ಕೆ ಆಗಮಿಸಿ ವಿನೂತನ ರೀತಿಯಲ್ಲಿ ಸಚಿವರಿಗೆ ಜನ್ಮದಿನದ ಶುಭ ಕೋರಿದ್ದು ವಿಶೇಷವೆನಿಸಿತು.

ಸಚಿವರಾದ ರಾಜಶೇಖರ ಪಾಟೀಲ್ ಹುಮನಾಬಾದ್, ಎಂ.ಸಿ. ಮನಗೂಳಿ, ಕಲಬುರಗಿ ಜಿಲ್ಲಾ ಪಂಚಾಯಿತಿ ಪ್ರತಿಪಕ್ಷ ನಾಯಕ ಶಿವಾನಂದ ಪಾಟೀಲ್, ಮಾಜಿ ಅಧ್ಯಕ್ಷ ರಮೇಶ ಮರಗೋಳ, ಸದಸ್ಯರಾದ ಶಿವರುದ್ರ ಭೀಣಿ, ಸಂತೋಷಕುಮಾರ ದಣ್ಣೂರ, ಶಾಂತಪ್ಪ ಕೂಡಗಿ, ಗೌತಮ ಪಾಟೀಲ್, ತಾಪಂ ಅಧ್ಯಕ್ಷ ಜಗಣ್ಣಗೌಡ ರಾಮತೀರ್ಥ, ಎಪಿಎಂಸಿ ಅಧ್ಯಕ್ಷ ಬಸವರಾಜ ಸಜ್ಜನ್, ಪ್ರಮುಖರಾದ ವಿಜಯಕುಮಾರ ಜಿ.ಆರ್., ವೈಜನಾಥ ತಡಕಲ್, ರಾಜಶೇಖರ ತಿಮ್ಮನಾಕ, ನಿಂಬೆಣ್ಣಪ್ಪ ಕೋರವಾರ, ಭೀಮರಾಯ ಹೊತಿನಮಡಿ, ಸುನೀಲ್ ದೊಡ್ಡಮನಿ, ಮಲ್ಲಪ್ಪ ಹೊಸಮನಿ ಇಂಗನಕಲ್, ಜಯಪ್ರಕಾಶ ಕಮಕನೂರ, ಲಿಂಗರಾಜ ಕಣ್ಣಿ, ಅಶೋಕ ವೀರನಾಯಕ, ಜಗದೀಶ ಶಿಂಧೆ, ವೀರುಪಾಕ್ಷಿ ಗಡ್ಡದ್, ಮಲ್ಲಿನಾಥಗೌಡ ಸನ್ನತ್ತಿ, ಅಬ್ದುಲ್ ಸಲೀಂ ನಾಲವಾರ, ಶಿವಯೋಗಿ ಸಾಹು, ಮಲ್ಲಿಕಾಜರ್ುನ ಪೂಜಾರಿ ಭಂಕೂರ, ಬಸವರಾಜ ಪೂಜಾರಿ, ಬಸವರಾಜ ಹೊಸಳ್ಳಿ, ಯಲ್ಲಾಲಿಂಗ ಮುಗಟಿ, ಡಾ.ಪ್ರಭುರಾಜ ಕಾಂತಾ, ವೆಂಕಟೇಶ ಕುಲಕಣರ್ಿ, ಹಣಮಂತ ಸಂಕನೂರ, ದೇವಿಂದ್ರ ಅಣಕಲ್, ಜಗನ್ನಾಥ ಪೂಜಾರಿ, ಮಾಣಿಕ ಸಂಗನ್ ಇತರರಿದ್ದರು.

ವಿಜಯವಾಣಿ ಪುರವಣಿಗೆ ಪ್ರಶಂಸೆ
ಕಲಬುರಗಿ ಜಿಲ್ಲಾ ಉಸ್ತುವಾರಿ, ಸಮಾಜ ಕಲ್ಯಾಣ ಇಲಾಖೆ ಸಚಿವ ಹಾಗೂ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರ 40ನೇ ಜನ್ಮದಿನ ನಿಮಿತ್ತ ವಿಜಯವಾಣಿ ಹೊರತಂದ `ಜನ ಪ್ರಿಯಾಂಕ್’ ವಿಶೇಷ ಪುರವಣಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು. ಖುದ್ದು ಸಚಿವರೇ ಬೆಂಗಳೂರಿನಲ್ಲಿ ಪುರವಣಿ ಬಿಡುಗಡೆಗೊಳಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು. ಪುರವಣಿಯಲ್ಲಿ ಸಚಿವರ ಅಭಿವೃದ್ಧಿ ಕಾರ್ಯಗಳು ಹಾಗೂ ಹಲವಾರು ಯೋಜನೆಗಳ ಬಗ್ಗೆ ವಿವರ ಮಾಹಿತಿ ನೀಡಿದ್ದರ ಬಗ್ಗೆ ಎಲ್ಲರೂ ಪ್ರಶಂಸಿಸಿದರು.