More

    ಜೇವರ್ಗಿ: ಮಹಾಲಕ್ಷ್ಮೀ ಜಾತ್ರೆಯಲ್ಲಿ ಹುಳಿಬಾನಕ್ಕೆ ಬೇಡಿಕೆ

    ಜೇವರ್ಗಿ: ಲಕ್ಷಾಂತರ ಭಕ್ತರ ಆರಾಧ್ಯ ದೈವ, ಗ್ರಾಮ ದೇವತೆ ಶ್ರೀ ಮಹಾಲಕ್ಷಿö್ಮÃ ಜಾತ್ರೋತ್ಸವ ದಿನಕಳೆದಂತೆ ಕಳೆಗಟ್ಟುತ್ತಿದೆ. ಮೊದಲ ದಿನ ಬಡಿಗೇರ ಮನೆಯಲ್ಲಿ ದೇವಿ ಪ್ರತಿಷ್ಠಾಪನೆ ಮಾಡಿದ್ದು, ಎರಡನೇ ದಿನ ಸ್ಥಳೀಯರು ದೇವಿಗೆ ನೈವೇದ್ಯ ಅರ್ಪಿಸಿ ಕತಾರ್ಥರಾದರು. ಇದೀಗ ಪ್ರಸಾದ ಸಿದ್ಧಪಡಿಸುವ ಕೆಲಸ ಜೋರಾಗಿ ಸಾಗುತ್ತಿದೆ.

    ಜಾತ್ರೋತ್ಸವದಂದು ದೇವಿ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಹಾಗೂ ಡೊಳ್ಳು ಬಾರಿಸಲು ಆಗಮಿಸುವ ಹಾಲುಮತ ಸಮಾಜದವರಿಗಾಗಿ ಹುಳಿಬಾನ ಪ್ರಸಾದ ಸಿದ್ಧಪಡಿಸುವುದು ವಾಡಿಕೆ. ದೇವಸ್ಥಾನ ಸಮಿತಿ ನೀಡುವ ಜೋಳ ತೆಗೆದುಕೊಂಡು ಹಾಲುಮತ ಸಮಾಜದವರು ಪ್ರತಿ ವರ್ಷ ಹುಳಿಬಾನ ತಯಾರಿಸಿ ಭಕ್ತರಿಗೆ ವಿತರಿಸುವ ಮೂಲಕ ದೇವಿ ಸೇವೆ ಸಲ್ಲಿಸುತ್ತಾರೆ.

    ಹುಳಿಬಾನ ತಯಾರಿಸುವುದುಕ್ಕೂ ಒಂದು ಪ್ರಕ್ರಿಯೆ ಇದೆ. ಜೋಳ ನೆನಸಿ, ನಂತರ ಒಣಗಿಸಿ ಅದನ್ನು ಸರಿಯಾಗಿ ಕುಟ್ಟಲಾಗುತ್ತದೆ. ಮೇಲಿನ ಪದರು ಬೇರ್ಪಡಿಸಿ, ಬಳಿಕ ಹುಳಿಬಾನ ಸಿದ್ಧಪಡಿಸಲು ಮುಂದಾಗುತ್ತಾರೆ. ಈ ಪ್ರಸಾದಕ್ಕೆ ಸುಮಾರು 16 ಕ್ವಿಂಟಾಲ್ ಜೋಳ ಬಳಸಲಾಗುತ್ತಿದೆ. ಇದು ದೇಹಕ್ಕೆ ಪೌಷ್ಟಿಕಾಂಶ ನೀಡುವುದರ ಜತೆಗೆ ತಂಪಾಗಿಡುತ್ತದೆ. ಹೀಗಾಗಿ ಜಾತ್ರೆಗೆ ಬರುವ ಪ್ರತಿಯೊಬ್ಬರೂ ಭಕ್ತಿ ಪೂರ್ವಕವಾಗಿ ಪ್ರಸಾದ ಸವಿಯುತ್ತಾರೆ.

    ಹಾಲುಮತ ಸಮಾಜದ ರಾಮಣ್ಣ ಪೂಜಾರಿ, ನಿಂಗಪ್ಪ ಪೂಜಾರಿ, ಚಂದ್ರಶೇಖರ ಕುನ್ನೂರ, ಶರಣಗೌಡ ಸರಡಗಿ, ಕಾಮಣ್ಣ ಹಿರಿಪೂಜಾರಿ, ಮಂಗಣ್ಣ ಹಿರಿಪೂಜಾರಿ, ಶರಣಬಸ್ಸು ಯಡ್ರಾಮಿ, ರಾಜು ರz್ದೆÃವಾಡಗಿ, ಬಸಣ್ಣ ಪೂಜಾರಿ, ಮರೆಪ್ಪ ಸರಡಗಿ, ಚಂದ್ರಶೇಖರ ಕುನ್ನೂರ, ಲಿಂಗರಾಜ ಮಾಸ್ಟರ್ ಇತರರು ಹುಳಿಬಾನ ಸಿದ್ಧಪಡಿಸುವ ತಂಡದಲ್ಲಿದ್ದರು.

    ನಮ್ಮೆಲ್ಲರ ಆರಾಧ್ಯ ದೈವ ಶ್ರೀ ಮಹಾಲಕ್ಷಿö್ಮÃ ದೇವಿಗೆ ಪ್ರತಿಯೊಬ್ಬರೂ ಒಂದೊAದು ರೀತಿಯಲ್ಲಿ ಸೇವೆ ಸಲ್ಲಿಸುತ್ತಾರೆ. ನಮಗೆ ಪ್ರಸಾದ ತಯಾರಿಸುವ ಹೊಣೆ ನೀಡಿದ್ದು, ಈ ಕಾಯಕದಲ್ಲಿಯೇ ತಾಯಿಯ ಸ್ಮರಣೆ ಮಾಡುತ್ತಿz್ದÉÃವೆ. ಪ್ರತಿ ವರ್ಷ ಹಾಲುಮತ ಸಮುದಾಯದಿಂದ ಹುಳಿಬಾನ ಪ್ರಸಾದ ಸಿದ್ಧಪಡಿಸುತ್ತೇವೆ. ಮಾಳಿಂಗರಾಯನ ದೇವಸ್ಥಾನದಲ್ಲಿ ವಿತರಣೆಗೆ ವ್ಯವಸ್ಥೆ ಮಾಡಲಾಗುದ್ದು, 4-5 ಗಂಟೆಯಲ್ಲಿಯೇ ಖಾಲಿಯಾಗಿ ಬಿಡುತ್ತದೆ. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಪ್ರಸಾದ ತಯಾರಿಸಲಾಗುತ್ತಿದೆ.
    | ರಾಮಣ್ಣ ಪೂಜಾರಿ, ಹುಳಿಬಾನ ತಯಾರಿಸುವ ತಂಡದ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts