ವಿಜಯವಾಣಿ ಸುದ್ದಿಜಾಲ ಕಲಬುರಗಿ
ರಾಜ್ಯೋತ್ಸವ ಆಚರಿಸುವ ಈ ಸಂದರ್ಭದಲ್ಲಿ ನಾಡು ನುಡಿಯ ಬಗ್ಗೆ ವಾಸ್ತವದ ಅರಿವು ಮೂಡಿಸಿಕೊಂಡು ಮುಂದಣ ಹೆಜ್ಜೆ ಇಡುವ ಚಿಂತನೆ ನಡೆಸಬೇಕಾದ ಅಗತ್ಯತೆ ಇದೆ ಎಂದು ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ಬಿ.ನಾಯಕ್ ಸಲಹೆ ನೀಡಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಮಹಾತ್ಮಾಗಾಂಧಿ ಸಭಾಂಗಣದಲ್ಲಿ ಪ್ರಸಾರಾಂಗ ವಿಭಾಗವು ಶುಕ್ರವಾರ ಏರ್ಪಡಿಸಿದ್ದ ಕನರ್ಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ ಅವರು, ನಾಡಿನ ಆರ್ಥಿಕ ಸಂಪತ್ತಿಗಿಂತಲೂ ಸಾಂಸ್ಕೃತಿಕ ಸಂಪತ್ತು ಶ್ರೇಷ್ಠವಾಗಿದೆ. ಸಂಸ್ಕೃತಿ ಇಲ್ಲದ ಮನುಷ್ಯರು ನಾಡಿನ ಸಂಪತ್ತನ್ನು ಹಾಳುಮಾಡುತ್ತಾರೆ. ಕಲೆ, ಸಾಹಿತ್ಯ,ಜಾನಪದ, ಪುಸ್ತಕ ಪ್ರಕಟಣೆಯಂತಹ ಸಾಂಸ್ಕೃತಿಕ ಸಂಪನ್ನತೆಯು ವಿಸ್ತಾರಗೊಂಡಷ್ಟೂ ನಾಡಿನ ಅಭಿವೃದ್ಧಿಯಾಗುತ್ತದೆ. ನಾಡು, ನುಡಿ ಬೆಳೆದುಬಂದ ರೀತಿಯ ಅವಲೋಕನ ಮಾಡುತ್ತಲೇ ಮುಂದಣ ಹೆಜ್ಜೆ ಇಡುವುದು ಹೇಗೆ ಎಂಬ ಅರಿವು ಮೂಡಿಸಿಕೊಳ್ಳಲು ರಾಜ್ಯೋತ್ಸವ ಉತ್ತಮ ಅವಕಾಶ ಕಲ್ಪಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಗುವಿವಿ ಕುಲಪತಿ ಪ್ರೊ.ಎಸ್.ಆರ್.ನಿರಂಜನ್ ಮಾತನಾಡಿ, ಕಳೆದ 30 ವರ್ಷಗಳಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯೋತ್ಸವ ಅಂಗವಾಗಿ 700 ಜನರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದೆ. ಈ ಪ್ರಶಸ್ತಿ ಪಡೆದ ಅನೇಕರು ನಾಡಿನ ಹೆಸರಾಂತ ಲೇಖಕರಾಗಿ ಗುರುತಿಸಿಕೊಂಡಿದ್ದೂ ಇದೆ. ಹಾಗೆಯೇ ಈ ಪ್ರದೇಶದ ಪ್ರತಿಭಾವಂತರನ್ನು ಗುರುತಿಸಿ ಗೌರವಿಸಿದ ಹೆಮ್ಮೆಯೂ ವಿವಿಗೆ ಇದೆ ಎಂದು ಹೇಳಿದರು.
ಗುವಿವಿ ಸಿಂಡಿಕೇಟ್ ಸದಸ್ಯ ಚಂದ್ರಶೇಖರ ನಿಟ್ಟೂರೆ, ವಿದ್ಯಾವಿಷಯಕ ಪರಿಷತ್ ಸದಸ್ಯ ಡಾ.ಭಗವಂತಪ್ಪ ಬುಳ್ಳಾ, ಕುಲಸಚಿವರಾದ ಪ್ರೊ.ಸಿ.ಸೋಮಶೇಖರ, ಪ್ರೊ.ಡಿ.ಎಂ.ಮದರಿ, ವಿತ್ತಾಧಿಕಾರಿ ಪ್ರೊ.ಲಕ್ಷ್ಮಣರಾಜನಾಳಕರ್ ಭಾಗವಹಿಸಿದ್ದರು.
ಪ್ರಸಾರಾಂಗದ ನಿರ್ದೇಶಕರಾದ ಪ್ರೊ.ಎಚ್.ಟಿ.ಪೋತೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ಕನ್ನಡದ ಹೆಸರಾಂತ ಸಾಹಿತಿ ಗುವಿವಿ ಕುಲಪತಿಗಳಾಗಿದ್ದ ಪ್ರೊ.ಹಾ.ಮಾ.ನಾಯಕರಿಂದ ಶುರುವಾದ ರಾಜ್ಯೋತ್ಸವ ಪ್ರಶಸ್ತಿಯ ವ್ಯಾಪಕತೆ ಈಗಿನ ಕುಲಪತಿ ಪ್ರೊ.ನಿರಂಜನರಿಂದಾಗಿ ಹೆಚ್ಚಿದೆ. ಅವರು ಬಂದಮೇಲೆ ಸಮಾಜಮುಖಿ ಸಾಹಿತ್ಯ ಕೃತಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರಲ್ಲದೇ ಇದೇ ಮೊದಲ ಬಾರಿಗೆ ವಿಜ್ಞಾನ ಸಾಹಿತ್ಯ ಕೃತಿಗೂ ರಾಜ್ಯೋತ್ಸವ ನೀಡುವಂತೆ ಸೂಚಿಸುವ ಮೂಲಕ ವಿಜ್ಞಾನ ಸಾಹಿತ್ಯಕ್ಕೂ ಪ್ರೋತ್ಸಾಹ ನೀಡಿದ್ದು ಶ್ಲಾಘನೀಯ ಎಂದು ಹೇಳಿದರು.
ಶಿರಪುರ ಪ್ರಕಾಶನಕ್ಕೆ ಪ್ರಶಸ್ತಿ: ಕನ್ನಡದ ಹೆಸರಾಂತ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ ಸ್ಥಾಪಿಸಿದ ಶಿರಪುರ ಪ್ರಕಾಶನಕ್ಕೆ ಹೈಕ ಭಾಗದ ಉತ್ತಮ ಪ್ರಕಾಶನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಚಂದ್ರುಗೆ ಚಿನ್ನದ ಪದಕ: ದಿ. ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ ರಾಜ್ಯಮಟ್ಟದ ಕನ್ನಡ ಕಥಾ ಸ್ಪರ್ಧೆಯಲ್ಲಿ ಚಂದ್ರು ಆರ್.ಪಾಟೀಲರ ಸಂಕ್ರಮಣ ಕಥೆಗೆ ಚಿನ್ನದ ಪದಕ , 5000 ರೂ.ನಗದು ಹಾಗೂ ಸ್ಮರಣಿಕೆ ನೀಡಲಾಯಿತು. ಎಚ್.ಎಸ್.ಬೇನಾಳ ರಚಿಸಿದ ಹೆಬ್ಬಾವಿನ ಹೆಡೆಯ ಕೆಳಗಿನ ನೆರಳು ಕಥೆಗೆ ಬೆಳ್ಳಿ ಪದಕ ಮತ್ತು 3000 ರೂ.ಹಾಗೂ ಸಂಬಂಜ ಅನ್ನೋದು ಕಥೆ ರಚಿಸಿದ ಪ್ರವೀಣ ಪೊಲೀಸ್ಪಾಟೀಲರಿಗೆ ಕಂಚಿನ ಪದಕ ಮತ್ತು 2000ರೂ.ನೀಡಿ ಸತ್ಮರಿಸಲಾಯಿತು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
ಕನ್ನಡ ಪುಸ್ತಕ ವಿಭಾಗದಲ್ಲಿ ರಸಗಂಗಾಧರ (ಡಾ.ವಿಕ್ರಮ ವಿಸಾಜಿ), ಕಪ್ಪು ವ್ಯಾಕರಣ(ಡಾ. ವೆಂಕಟಗಿರಿ ದಳವಾಯಿ), ಕಲ್ಯಾಣ ಕದಳಿ(ವಿಜಯಲಕ್ಷ್ಮೀ ಕೌಟಗೆ), ಮಾತೃ ವಾತ್ಸಲ್ಯ(ಡಾ. ಎಸ್.ಎಸ್. ಗುಬ್ಬಿ), ಶರಣ ಸಂತುಷ್ಟಿ(ಡಾ. ಕಲ್ಯಾಣರಾವ ಪಾಟೀಲ), ಶರಣ ಸಂಪದ(ಕುಪೇಂದ್ರ ಪಾಟೀಲ), ಗುಲಬಗರ್ಾ ಜಿಲ್ಲೆಯ ಆಧುನಿಕ ವಚನ ಸಾಹಿತ್ಯ(ಡಾ. ಹಣಮಂತ ಮೇಲಕೇರಿ) ಹಾಗೂ ಜಾನಪದ ಪುಸ್ತಕಗಳಾದ ಕೊಡೇಕಲ್ಲ ಬಸವಣ್ಣ ರಾಚಪ್ಪಯ್ಯ ಮತ್ತಿತರರ ತತ್ವಪದಗಳು(ಡಾ. ಶಿವಾನಂದ ಎಸ್. ವಿರಕ್ತಮಠ), ಜೀವನ ಕಥನ ರಾಷ್ಟ್ರದ ಪ್ರಖ್ಯಾತ ಮಹನೀಯರು(ಬಿ.ಎಚ್. ನಿರಗುಡಿ), ಕೂಡು ಕಟ್ಟುವ ಬಗೆ(ಡಾ. ಎಂ.ಬಿ. ಕಟ್ಟಿ), ಹಾಗೂ ಸಮಾಜವಿಜ್ಞಾನ ವಿಭಾಗದಲ್ಲಿ ಡಾ.ಮೇಧಾವಿನಿ, ವಿಜ್ಞಾನ ವಿಭಾಗದಲ್ಲಿ ಡಾ. ಎಸ್.ಎನ್.ಮುಲಗಿ, ಅನುವಾದ ವಿಭಾಗದಲ್ಲಿ ಡಾ.ಪ್ರಭಾಕರ ನಿಂಬಗರ್ಿ, ಗಡಿನಾಡು ವಿಭಾಗದಲ್ಲಿ ಮಧು ಬಿರಾದಾರ, ಮರಾಠಿ ವಿಭಾಗದಲ್ಲಿ ಶಕುಂತಲಾ ಸೋನಾರ, ಉರ್ದು ವಿಭಾಗದಲ್ಲಿ ಮಾಸೂದ ಅಲಿ ತಿಮ್ಮಾಪುರಿ, ಇಂಗ್ಲಿಷ್ ವಿಭಾಗದಲ್ಲಿ ಡಾ.ಸತೀಶ ಎಸ್.ಹೊಸಮನಿ, ಜನಪದ ವಿಭಾಗದಲ್ಲಿ ಶ್ರೀಮಂತ ನಿಂಗಪ್ಪ ಅವರಿಗೆ ಮತ್ತು ಕಲಾವಿದರಾದ ಜಗನ್ನಾಥ ಜಕ್ಕೇಪಳ್ಳಿ, ನಿಂಗಪ್ಪ ಕೇರಿ, ಜಲಜಾಕ್ಷಿ ಕುಲಕರ್ಣಿ, ಬಿ.ಎನ್.ಪಾಟೀಲ, ಸತೀಶಕುಮಾರ ವಲ್ಲೇಪುರೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.