ಮಂಗಳೂರು ವಿವಿಗೆ ಸಮಗ್ರ ಪ್ರಶಸ್ತಿ

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರಾಸ್ಕಂಟ್ರಿ ಚಾಂಪಿಯನ್​ ಶಿಪ್​ನಲ್ಲಿ ಮಂಗಳೂರು ವಿಶ್ವವಿದ್ಯಾಲಯ ಸಮಗ್ರ ಪ್ರಶಸ್ತಿ ಬಾಚಿಕೊಳ್ಳುವ ಮೂಲಕ ಕಳೆದ ಬಾರಿಯ ತನ್ನ ಗರಿ ಮತ್ತೆ ಉಳಿಸಿಕೊಳ್ಳುವಲ್ಲಿ ಯಶಸ್ಸಿಯಾಗಿದೆ.

2017ರಲ್ಲಿ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆದ ಚಾಂಪಿಯನ್ಷಿಪ್ನಲ್ಲಿ ಮಂಗಳೂರು ವಿವಿ ಸಮಗ್ರ ಪ್ರಶಸ್ತಿ ಬಾಚಿಕೊಂಡಿತ್ತು. ಆ ಕಿರೀಟವನ್ನು ಈಗಲೂ ತನ್ನ ತೆಕ್ಕೆಯಿಂದ ಬೇರೆಯವರಿಗೆ ಬಿಟ್ಟು ಕೊಡದೆ ಚಾಂಪಿಯನ್ ಪಟ್ಟ ಉಳಿಸಿಕೊಂಡಿತು. ಮಂಗಳೂರು ವಿವಿ ಪುರುಷ 15, ಮಹಿಳೆ 50 ಸೇರಿ 65 ಸ್ಕೋರ್ ಮಾಡುವ ಮೂಲಕ ಸಮಗ್ರ ಪ್ರಶಸ್ತಿಗೆ ಭಾಜನವಾಗಿದೆ.

ವೈಯಕ್ತಿಕ (ಪುರುಷ): ವೈಯಕ್ತಿಕ ಚಾಂಪಿಯನ್ಷಿಪ್ ಪುರುಷರ ವಿಭಾಗದಲ್ಲಿ ರೋಹಟೆಕ್ ಎಂ.ಡಿ. ವಿವಿಯ ಕಾತರ್ಿಕ್ 30 ನಿಮಿಷ 40 ಸೆಕೆಂಡ್ನಲ್ಲಿ ಒಂದು ಅಂಕದೊಂದಿಗೆ ಪ್ರಥಮ ಸ್ಥಾನ ಪಡೆದರೆ, ಮಂಗಳೂರು ವಿವಿ ನರೇಂದ್ರ ಪ್ರತಾಪ್ಸಿಂಗ್ 31.07 ನಿಮಿಷದಲ್ಲಿ ದ್ವಿತೀಯ, ಮಂಗಳೂರು ವಿವಿ ದಿನೇಶ್ 31.11 ನಿಮಿಷದಲ್ಲಿ ಗುರಿ ತಲುಪಿ ತೃತೀಯ, ಇದೇ ವಿವಿಯ ಅಬ್ದುಲ್ ಬಾರಿ 4ನೇ, ಕೊಟ್ಟಾಯಂ ಮಹಾತ್ಮಗಾಂಧಿ ವಿವಿಯ ಶೆರಿನ್ ಜೋಸ್ 5 ಮತ್ತು ಮಂಗಳೂರು ವಿವಿಯ ಶಾಮ್ 6ನೇ ಸ್ಥಾನ ಗಳಿಸಿದ್ದಾರೆ.

ವೈಯಕ್ತಿಕ (ಮಹಿಳೆ): ವೈಯಕ್ತಿಕ ಚಾಂಪಿಯನ್ಷಿಪ್ ಮಹಿಳಾ ವಿಭಾಗದಲ್ಲಿ ನಾಗಪುರ ಆರ್ಟಿಎಂ ವಿವಿ ಪ್ರಜಾಕ್ತಾ ಗೋಡಬೋಲೆ 35.33 ನಿಮಿಷದಲ್ಲಿ ಗುರಿ ತಲುಪಿ ಪ್ರಥಮ ಸ್ಥಾನ, ಗೋರಖಪುರ ವಿವಿ ಫೂಲನ್ ಪಾಲ್ 36.14 ನಿಮಿಷದಲ್ಲಿ ಗುರಿ ತಲುಪಿ 2ನೇ, ಮಂಗಳೂರು ವಿವಿ ಜ್ಯೋತಿ ಚವ್ಹಾಣ್ 36.38 ನಿಮಿಷದಲ್ಲಿ 3ನೇ, ಮಂಗಳೂರು ವಿವಿ ಭಗತ್ ಶೀತಲ್ ಝಮಾಜಿ 4ನೇ, ಪಟಿಯಾಲಾ ಪಂಜಾಬಿ ವಿವಿ ಕೆ.ಎಂ.ಮಮತಾ 5 ಮತ್ತು ರೋಹಟೆಕ್ ಎಂಡಿಯು ವಿವಿ ಕಿರಣ ಚವ್ಹಾಣ 6ನೇ ಸ್ಥಾನ ಗಳಿಸಿದರು.

ಪುರುಷರ ವಿಭಾಗ: ಮಂಗಳೂರು ವಿವಿ 15 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದುಕೊಂಡಿತು. ನರೇಂದ್ರ ಪ್ರತಾಪಸಿಂಗ್ 31.07 ನಿಮಿಷ 2 ಅಂಕ, ದಿನೇಶ 31.11 ನಿಮಿಷ 3 ಅಂಕ, ಅಬ್ದುಲ್ ಬಾರಿ 31.15 ನಿಮಿಷ 4 ಅಂಕ, ಶಾಮ್ 31.32 ನಿಮಿಷ 6 ಅಂಕ, ಕುಶ್ಮೇಶ್ ಕುಮಾರ 31.52 ನಿಮಿಷ 10 ಅಂಕ, ಅನಿಲ್ಕುಮಾರ 32.33 ನಿಮಿಷ 46 ಅಂಕ ಗಳಿಸಿದ್ದಾರೆ.

ರೋಹಟೆಕ್ ಮಹರ್ಷಿ ದಯಾನಂದ ವಿಶ್ವವಿದ್ಯಾಲಯ 49 ಅಂಕ ಗಳಿಸಿ ದ್ವಿತೀಯ ಸ್ಥಾನ ಪಡೆದುಕೊಂಡಿತು. ಕಾರ್ತಿಕಕುಮಾರ 30.40 ನಿಮಿಷ 1 ಅಂಕ, ರವಿ ದಹಿಯಾ 31.38 ನಿಮಿಷ 7 ಅಂಕ, ಸೂರಜ್ 32.23 ನಿಮಿಷ 18 ಅಂಕ, ಮಹೇಂದರ್ ಗುಜ್ಜರ್ 32.37 ನಿಮಿಷ 23 ಅಂಕ, ಸುನಿಲಕುಮಾರ 32.55 ನಿಮಿಷ 30 ಅಂಕ, ರಣದೀಪ ಕುಂದು 33.43 ನಿಮಿಷ 74 ಅಂಕ ಗಳಿಸಿದರು.

ಚಂಡೀಗಢದ ಪಂಜಾಬಿ ವಿವಿ 55 ಅಂಕಗಳೊಂದಿಗೆ 3ನೇ ಸ್ಥಾನ ಗಳಿಸಿದೆ. ರೇಣುಕುಮಾರ 31.45 ನಿಮಿಷ 9 ಅಂಕ, ರವೀಂದ್ರಕುಮಾರ ತಿವಾರಿ 31.55 ನಿಮಿಷ 11 ಅಂಕ, ವಿರೇಂದ್ರಸಿಂಗ್ 32.19 ನಿಮಿಷ 16 ಅಂಕ, ಸಂದೀಪ ಸಿಂಗ್ 32.28 ನಿಮಿಷ 19 ಅಂಕ, ಅಶ್ವಿನಕುಮಾರ 32.34 ನಿಮಿಷ 22 ಅಂಕ, ದೀಪಕಕುಮಾರ 33 ನಿಮಿಷ 35 ಅಂಕ ಗಳಿಸಿದ್ದಾರೆ.

ಮಹಿಳಾ ವಿಭಾಗ: ಪಟಿಯಾಲಾ ಪಂಜಾಬಿ ವಿವಿ 48 ಅಂಕದೊಂದಿಗೆ ಪ್ರಥಮ ಸ್ಥಾನ ಬಾಚಿಕೊಂಡಿತು. ಕೆ.ಎಂ.ಮಮತಾ, ಸುಮನ್ರಾಣಿ, ಪರಮಿಂದರ್ ಕೌರ್, ಸುನಿತಾ ಜತ್, ಪ್ರಬ್ಜೋತ್ ಕೌರ್, ಪ್ರಭ್ಜಿತ್ ಕೌರ್ ತಂಡದಲ್ಲಿದ್ದರು. ಮಂಗಳೂರು ವಿವಿ 50 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದು, ಜ್ಯೋತಿ ಚವ್ಹಾಣ್, ಭಗತ್ ಶೀತಲ್ ಝಾಮ್ಜಿ, ಸುಮಾ, ಚೈತ್ರಾ, ಚಾವರಕರ್ ಪ್ರಿಯಂಕಾ, ವಿಶಾಲಾಕ್ಷಿ ಎಂ.ಕೆ. ತಂಡದಲ್ಲಿದ್ದರು. ಗೋರಖಪುರ ದೀನ್ದಯಾಳ್ ಉಪಾಧ್ಯಾಯ ವಿಶ್ವವಿದ್ಯಾಲಯ 53 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದು, ಫೂಲನ್ ಪಾಲ್, ಕಿರಣ್ ಚವ್ಹಾಣ್, ಸಪ್ನಾ ಪಟೇಲ್, ಸುಮನ್ಸಿಂಗ್, ನೀತು ಯಾದವ್, ಹೇಮಲತಾ ಶರ್ಮಾ ತಂಡದಲ್ಲಿದ್ದರು.

ಕುಸಿದು ಬಿದ್ದ ವಿದ್ಯಾರ್ಥಿ
ಅಖಿಲ ಭಾರತ ಕ್ರಾಸ್ಕಂಟ್ರಿ ಚಾಂಪಿಯನ್ಷಿಪ್ನಲ್ಲಿ ಓಟ ಕೊನೆಗೊಂಡಾಗ ವಿದ್ಯಾರ್ಥಿಯೊಬ್ಬ ಪ್ರಜ್ಞೆ ಕಳೆದುಕೊಂಡು ಕುಸಿದುಬಿದ್ದ ಪ್ರಸಂಗ ನಡೆಯಿತು. ಚಂಡೀಗಢ ಪಂಜಾಬಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಿರಂತರ 10 ಕಿಮೀ ಓಡಿ ವಿವಿ ಮೈದಾನದಲ್ಲಿ ಓಟ ಕೊನೆಗೊಳಿಸಿದ ಸಂದರ್ಭದಲ್ಲಿ ಕುಸಿದುಬಿದ್ದ. ತಕ್ಷಣವೇ ಆಂಬುಲೆನ್ಸ್ ತರಿಸಿ ಹತ್ತಿರದ ಇಎಸ್ಐ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಕೊಡಿಸಲಾಯಿತು. ನಂತರ ಸುಧಾರಿಸಿಕೊಂಡ ವಿದ್ಯಾರ್ಥಿ ತಮ್ಮ ವಿವಿ ತಂಡವನ್ನು ಸೇರಿಕೊಂಡಿದ್ದಾನೆ.