ಕಲಬುರಗಿ: ಕಲಾಕೃತಿಗಳ ಮೂಲಕ ಸಾಮಾಜಿಕ ಬದಲಾವಣೆಯಲ್ಲಿ ಅನುಕೂಲಕರ ವಾತಾವರಣ ಸೃಷ್ಟಿಸಬೇಕು ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೂ ಆದ ಪ್ರಭಾರಿ ಕುಲಪತಿ ಪ್ರೊ.ಎಸ್.ಪಿ.ಮೇಲ್ಕೇರಿ ಹೇಳಿದರು.
ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಗುಲ್ಬರ್ಗ ವಿವಿ ಕನ್ನಡ ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ಗುರುವಾರ ನಡೆದ ಭಾವ ಶಿಲ್ಪ ಶಿಬಿರ ( ಫೈಬರ್ ಮಾಧ್ಯಮ) ದ ಸಮಾರೋಪದಲ್ಲಿ ಮಾತನಾಡಿದರು.
ಕಲಾಕೃತಿಗಳ ಮೂಲಕ ಭಾವನೆ, ವಿಚಾರ, ಕಲ್ಪನೆಗಳು ಒಟ್ಟಾಗಿ ಮೂಡಿಬರುತ್ತವೆ. ಕಲೆ, ಕಲಾಕೃತಿಗಳು ಇತಿಹಾಸ ಹೇಳುತ್ತವೆ. ಹೀಗಾಗಿ ಇವು ಉಳಿದು, ಬೆಳೆಯಬೇಕಾಗಿದೆ. ಈ ನಿಟ್ಟಿನಲ್ಲಿ ಕಲಾವಿದರು ಹೆಚ್ಚಿನ ಮುತವರ್ಜಿ ವಹಿಸಬೇಕು ಎಂದರು.
ಶಿಲ್ಪಗಳ ಲೋಕಾರ್ಪಣೆ ಮಾಡಿ ಮಾತನಾಡಿದ ನಾಡೋಜ ಡಾ.ಜೆ.ಎಸ್.ಖಂಡೇರಾವ್, ಶಿಲ್ಪಕಲಾ ಮಹೋತ್ಸವದ ಈ ಕಲೆ ಕಲಾವಿದರು, ವಿದ್ಯಾಥರ್ಿಗಳಿಗೆ ಈ ಶಿಬಿರ ಉಪಯುಕ್ತವಾಗಲಿದೆ. ಕಲೆ ಭಾವನೆಯ ಅಭಿವ್ಯಕ್ತಿ, ಶಿಲ್ಪಿಗಳಲ್ಲಿ ಭಾವನೆ ಮೂಡಿಬರಬೇಕು. ಕಲೆ ಮನುಷ್ಯನ ಅಭಿವ್ಯಕ್ತಿ ಎಂದರು.
ಕಲಾವಿದರಲ್ಲಿ ಏಕಾಗ್ರತೆ ಮುಖ್ಯ. ಮಾಧ್ಯಮ ರಚನಾತ್ಮಕ ಅನುಭವ ಹೊಂದಿರುತ್ತದೆ. ಕಲಾವಿದರ ಹೃದಯದಿಂದ ಕಲೆ ಮೂಡಿಬರಬೇಕು. ಕಲೆ ಶೋಧನೆಯ ರೂಪವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಶಿಲ್ಪಿ ಕಾಳಾಚಾರ್ಯ ಮಾತನಾಡಿ, ಭಾರತದಲ್ಲಿ ಶಿಲ್ಪಕಲೆ ಮೇರು ಹಂತಕ್ಕೆ ತಲುಪಿದೆ. ಕಲೆ ಉಳಿದು ಬರಬೇಕು. ಇಲ್ಲವಾದಲ್ಲಿ ಸಂಸ್ಕೃತಿ ವಿನಾಶದತ್ತ ಸಾಗಲಿದೆ. ಪ್ರಾಚೀನ ಕಲೆ, ಸಂಸ್ಕೃತಿಗೆ ಆದ್ಯತೆ ನೀಡಬೇಕು. ಇತಿಹಾಸದ ಪರಿಕಲ್ಪನೆ ಮೂಡಬೇಕು ಎಂದು ಹೇಳಿದರು.
ಭಾಗವಹಿಸಿದ್ದ ಶಿಲ್ಪಿಗಳು
ರಾಜ್ಯದ ವಿವಿಧ ಭಾಗಗಳಿಂದ 20 ಜನ ಕಲಾವಿದರು ಶಿಬಿರದಲ್ಲಿ ಪಾಲ್ಗೊಂಡಿದ್ದರು. ವಿಶಾಲಕ್ ಕೆ, ವೆಂಕಟೇಶ ಎಂ, ಜಗನ್ನಾಥ ಜಕ್ಕೇಪಳ್ಳಿ, ಮಹೇಶಕುಮಾರ ತಳವಾರ, ರಾಘವೇಂದ್ರ ಕೆ, ಬಾಬುರಾವ ನಡೋಣಿ, ಮುರುಳೀಧರ ಆಚಾರ, ನಾಗರಾಜ್, ಸೋಮಶೇಖರ, ಜಿ.ಬಿ.ಓಂಕಾರಮೂತರ್ಿ, ಹರೀಶ ಟಿಎಸ್, ಅವಿನಾಶ್ ಸದಾನಂದ, ಬಾಬುರಾವ ದಂಗಾಪುರ, ಜೀವನ ಕೇರಿ, ಸುಮಾ ಹೂಗಾರ, ಶೋಭಾದೇವಿ ಪಾಟೀಲ್, ಯೋಗೇಶ, ಶರಣಪ್ಪ, ಪರಶುರಾಮ ಹೂಗಾರ, ರಮೇಶ ಬಡಿಗೇರ.