ಕಾಲುವೆಗೆ ಹಾರಿ ರೈತ ಆತ್ಮಹತ್ಯೆ

ಯಡ್ರಾಮಿ: ಶಿವಪುರ ಗ್ರಾಮದ ಕಾಲುವೆ ಗೇಟ್ ಬಳಿ ರೈತನೊಬ್ಬನ ಮೃತದೇಹ ಪತ್ತೆಯಾಗಿದೆ. ಸುರಪುರ ತಾಲೂಕಿನ ಖಾನಾಪುರದ ರೈತ ಗಣಪತಿ ಸಂಬಳ (42) ಮೃತಪಟ್ಟವ.

ಸಾಲಬಾಧೆ ತಾಳದೆ ಕಳೆದ 17ರಂದು ಕಾಲುವೆಗೆ ಹಾರಿದ್ದು, ವಿಜಯದಶಮಿ ದಿನ ಶವ ಪತ್ತೆಯಾಗಿದೆ. ಖಾನಾಪುರದ ಸರ್ವೆ ನಂ.80ರಲ್ಲಿ 4.4 ಎಕರೆ ಜಮೀನಿದ್ದು, ನಗನೂರದ ಪಿಕೆಜಿ ಬ್ಯಾಂಕ್ನಲ್ಲಿ 50 ಸಾವಿರ ಹಾಗೂ ಖಾಸಗಿಯಾಗಿ 3 ಲಕ್ಷ ಸಾಲ ಮಾಡಿಕೊಂಡಿದ್ದ. ಸಾಲ ಮರಳಿಸಲು ಆಗದೆ ಹೊಲ ಹತ್ತಿರದ ಕಾಲುವೆಗೆ ಹಾರಿದ್ದ. ಪತಿ ಕಾಣದಿದ್ದಾಗ ಪತ್ನಿ ಎಲ್ಲೆಡೆ ಹುಡುಕಾಡಿದರೂ ಸಿಕ್ಕಿರಲಿಲ್ಲ. ಆದರೆ 19ರಂದು ಯಡ್ರಾಮಿ ತಾಲೂಕಿನ ಶಿವಪುರ ಕಾಲುವೆ ಗೇಟ್ಬಳಿ ಈತನ ಶವ ಪತ್ತೆಯಾಗಿದೆ.

ಸ್ಥಳಕ್ಕೆ ಎಎಸ್ಐ ರಾಜೇಂದ್ರ ಪ್ರಸಾದ, ಸಿಬ್ಬಂದಿ ತಸ್ಲೀಮ್, ಮಲ್ಲಿಕಾರ್ಜುನ, ಅಣ್ಣಪ್ಪ, ಸಂತೋಷ ಭೇಟಿ ನೀಡಿದ್ದು, ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.