More

  ಚಿಂಚೋಳಿಯಲ್ಲಿ ವೆಂಕಟೇಶ್ವರ ರಥೋತ್ಸವ ವೈಭವ

  ಚಿಂಚೋಳಿ: ಪಟ್ಟಣದ ಆರಾಧ್ಯ ದೈವ ಶ್ರೀ ವೆಂಕಟೇಶ್ವರ ದೇವರ ರಥೋತ್ಸವವು ಸಹಸ್ರಾರು ಭಕ್ತಗಣದ ಮಧ್ಯೆ ಶನಿವಾರ ಸಾಯಂಕಾಲ 8ಕ್ಕೆ ಗೋವಿಂದ ಗೋವಿಂದ ಎಂಬ ಘೋಷವಾಕ್ಯಗಳೊಂದಿಗೆ ಶೃದ್ಧಾ ಭಕ್ತಿಯಿಂದ ಜರುಗಿತು.

  ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ಹೋಮ, ಹವನ, ವಿಶೇಷ ಪೂಜೆ, ಅಭಿಷೇಕ, ನೈವಿದ್ಯ ನೇರವೇರಿತು. ಬೆಳಿಗ್ಗೆ 10ಕ್ಕೆ ಗ್ರಾಮದ ಹಿರಿಯರಾದ ಶರಣಪ್ಪ ಹಲಚೇರಿ, ಶಂಕರಗೌಡ ಅಲ್ಲಾಪೂರ ನೇತೃತ್ವದಲ್ಲಿ ಗೋ ಪ್ರದರ್ಶನ ಜರುಗಿತು. ಪ್ರತಿ ನಿತ್ಯವು ಅನಂತ ಮೇಸ್ತಿç ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಮಧ್ಯಾಹ್ನ ಡಾ. ಚನ್ನವೀರ ಶಿವಾಚಾರ್ಯರು ಆಗಮಿಸಿ ಶ್ರೀ ವೆಂಕಟೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

  ಸಾಯಂಕಾಲ ರಥಕ್ಕೆ ದೇವಾಲಯದ ಸಮಿತಿ ಅಧ್ಯಕ್ಷ ಕಿಶನರಾವ ಕಾಟಾಪೂರ ದಂಪತಿಗಳಿAದ ವಿಶೇಷ ಪೂಜೆ ಸಲ್ಲಿಸಿ ರಾತ್ರಿ 8ಕ್ಕೆ ಸಹಸ್ರಾರು ಭಕ್ತಗಣ ಮಧ್ಯೆ ಗೋವಿಂದ ಗೋವಿಂದ ಎಂಬ ಘೋಷವಾಕ್ಯ ಮೊಳಗಿತು. ಭಕ್ತರು ರಥಕ್ಕೆ ನಾಣ್ಯ ಎಸೆದು ತಮ್ಮ ಹರಕೆ ತೀರಿಸಿದರು.

  ಈ ವೇಳೆ ನಿವೃತ್ತ ನ್ಯಾಯಧೀಶ ಸತ್ಯನಾರಾಯಣ ಕಾಡಲೂರ, ಅಶೋಕ ಪಾಟೀಲ್, ಜಗನ್ನಾಥ ಅಗ್ನಿಹೋತ್ರಿ, ಗೌತಮ ಪಾಟೀಲ್, ಡಾ. ಬಸವೇಶ ಪಾಟೀಲ್, ಹಣಮಂತಚಾರ್ಯ ಕಾಳಗಿ, ಪಾಂಡುರAಗಚಾರ್ಯ ಓಂಕಾರ, ಬಾಸ್ಕರ್ ಕುಲಕರ್ಣಿ, ಮೋಹನ ಓಂಕಾರ, ಶ್ರೀಧರ ಪಾಟೀಲ್, ಶ್ರೀಹರಿ ಕಾಟಾಪೂರ, ರಾಜಶೇಖರ ಮುಸ್ತಾರಿ, ಲಾಲಬಹ್ದೂರ ಶಾಸ್ತಿç ಸೇರಿದಂತೆ ಅನೇಕರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts