3ನೇ ಸ್ಥಾನಕ್ಕೇರಿದ ರಾಹುಲ್

ದುಬೈ: ಭರ್ಜರಿ ಫಾಮರ್್​ನಲ್ಲಿರುವ ಕನ್ನಡಿಗ ಕೆಎಲ್ ರಾಹುಲ್, ಐಸಿಸಿ ಟಿ20 ಬ್ಯಾಟಿಂಗ್ ರ್ಯಾಂಕಿಂಗ್​ನಲ್ಲಿ ಜೀವನಶ್ರೇಷ್ಠ 3ನೇ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾದ ಆರನ್ ಫಿಂಚ್ (891 ಅಂಕ) ಅಗ್ರಸ್ಥಾನಕ್ಕೇರಿದ್ದಾರೆ.

ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ರಾಹುಲ್ (812 ಅಂಕ), 9 ಸ್ಥಾನ ಏರಿಕೆ ಕಾಣುವ ಮೂಲಕ ಭಾರತದ ಅಗ್ರ ಶ್ರೇಯಾಂಕಿತ ಟಿ20 ಬ್ಯಾಟ್ಸ್​ಮನ್ ಎನಿಸಿದ್ದಾರೆ. ಐರ್ಲೆಂಡ್ ವಿರುದ್ಧ ಟಿ20 ಪಂದ್ಯದಲ್ಲಿ ರಾಹುಲ್ 70 ರನ್ ಸಿಡಿಸಿ ಮಿಂಚಿದ್ದರು. ಅಂತಿಮ ಪಂದ್ಯದಲ್ಲಿ 3ನೇ ಟಿ20 ಶತಕ ಸಿಡಿಸಿದ ರೋಹಿತ್ ಶರ್ಮ (11ನೇ ರ್ಯಾಂಕ್) 2 ಸ್ಥಾನ ಏರಿಕೆ ಕಂಡಿದ್ದಾರೆ. ವಿರಾಟ್ ಕೊಹ್ಲಿ (12ನೇ ಸ್ಥಾನ) 4 ಸ್ಥಾನ ಕುಸಿದಿದ್ದಾರೆ. ಇತ್ತೀಚೆಗೆ ಜಿಂಬಾಬ್ವೆ ವಿರುದ್ಧ 172 ರನ್ ಸಿಡಿಸಿ ಮಿಂಚಿದ್ದ ಫಿಂಚ್ ತ್ರಿಕೋನ ಸರಣಿಯ ನಡುವೆ ಟಿ20 ರ್ಯಾಂಕಿಂಗ್​ನಲ್ಲಿ 900 ಅಂಕದ ಗಡಿ ದಾಟಿದ ಮೊದಲ ಬ್ಯಾಟ್ಸ್​ಮನ್ ಎಂಬ ಸಾಧನೆಯನ್ನೂ ಮಾಡಿದ್ದರು. ಪಾಕಿಸ್ತಾನದ ಆರಂಭಿಕ ಫಖರ್ ಜಮಾನ್ 2ನೇ ಸ್ಥಾನದಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಅಫ್ಘಾನಿಸ್ತಾನದ ರಶೀದ್ ಖಾನ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಭಾರತದ ಯಜುವೇಂದ್ರ ಚಾಹಲ್ 5ನೇ ಸ್ಥಾನದಲ್ಲಿದೆ.