KL Rahul: ಇತ್ತೀಚೆಗಷ್ಟೇ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ಫೈನಲ್ ಗೆದ್ದ ಭಾರತ, ರೋಹಿತ್ ಶರ್ಮ ನಾಯಕತ್ವದಲ್ಲಿ ಸತತವಾಗಿ ಎರಡನೇ ಐಸಿಸಿ ಟ್ರೋಫಿ ಎತ್ತಿಹಿಡಿಯಿತು. ಕಳೆದ ವರ್ಷ ಬಾರ್ಬಡೋಸ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ ಸಾಧಿಸಿ, ಐಸಿಸಿ ಟಿ20 ವಿಶ್ವಕಪ್ ಗೆದ್ದಿದ್ದ ಟೀಮ್ ಇಂಡಿಯಾ, 2025ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನೂ ತನ್ನ ಮುಡಿಗೇರಿಸಿಕೊಂಡಿದ್ದು ಇತಿಹಾಸ.
ಇದನ್ನೂ ಓದಿ: ಅಮೀರ್ ಜತೆ ಡೇಟಿಂಗ್ನಲ್ಲಿರುವ ಬೆಂಗಳೂರಿನ ಗೌರಿ ಸ್ಪ್ರಾಟ್ ಯಾರು?; ಇದೀಗ ಏನು ಮಾಡ್ತಿದ್ದಾರೆ ಗೊತ್ತೆ! | Gauri Spratt
ಚಾಂಪಿಯನ್ಸ್ ಟ್ರೋಫಿ ಟೂರ್ನಿ ಪೂರ ಆರನೇ ಕ್ರಮಾಂಕದಲ್ಲಿ ಆಡಿದ ಕನ್ನಡಿಗ ಕೆ.ಎಲ್. ರಾಹುಲ್, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಹಿಂದೆ ಟಾಪ್ ಆರ್ಡರ್ನಲ್ಲಿ ಅಖಾಡಕ್ಕಿಳಿಯುತ್ತಿದ್ದ ರಾಹುಲ್, ಈ ಟೂರ್ನಿಯಲ್ಲಿ ಐದು ಮತ್ತು ಆರನೇ ಕ್ರಮಾಂಕದಲ್ಲಿ ಆಡಿದರು. ಆರನೇ ಕ್ರಮಾಂಕದಲ್ಲಿ ಬಂದರೂ ಒಳ್ಳೆಯ ಪ್ರದರ್ಶನ ನೀಡಿದ ರಾಹುಲ್, ಹೆಚ್ಚುವರಿ ರನ್ ಕೊಡುಗೆ ಜತೆಗೆ ಉತ್ತಮ ವಿಕೆಟ್ ಕೀಪಿಂಗ್ ಕೂಡ ಮಾಡಿದರು. ಈ ಮೂಲಕ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದ ಕೆ.ಎಲ್. ರಾಹುಲ್, ತಾವು ಯಾವ ಕ್ರಮಾಂಕದಲ್ಲಿ ಆಡಲು ಹೆಚ್ಚು ಬಯಸುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.
ಕೆ.ಎಲ್. ರಾಹುಲ್ ಮುಕ್ತ ಮಾತು
“ಓಪನಿಂಗ್ ಆಡುವುದು ನನಗಿಷ್ಟ. ತಂಡದ ಪರ ಟಾಪ್ ಆರ್ಡರ್ನಲ್ಲಿ ಆಡುವುದು ಉತ್ತಮ ಹಾಗೂ ಹೆಚ್ಚು ಆರಾಮದಾಯಕ. ನಾನು ಕ್ರಿಕೆಟ್ ಆಡಲು ಶುರು ಮಾಡಿದಾಗಿನಿಂದಲೂ ಓಪನರ್ ಆಗಿಯೇ ತಂಡಗಳ ಪರ ಆಡುತ್ತಿದ್ದೇನೆ. 11ನೇ ವಯಸ್ಸಿನಲ್ಲಿ ಮಂಗಳೂರಿನಲ್ಲಿ ನನ್ನ ಮೊದಲ ಪಂದ್ಯದಿಂದ ಟೀಮ್ ಇಂಡಿಯಾಗೆ ಆಯ್ಕೆಯಾಗುವವರೆಗೆ, ನಾನು ಬಹುತೇಕ ಪಂದ್ಯಗಳಲ್ಲಿ ಓಪನಿಂಗ್ ಬ್ಯಾಟರ್ ಆಗಿಯೇ ಆಡಿದ್ದೇನೆ. ಕ್ರಿಕೆಟ್ ಒಂದು ತಂಡದ ಕ್ರೀಡೆ. ಇಲ್ಲಿ ನೀವು ತಂಡದ ಅಗತ್ಯಗಳಿಗೆ ಅನುಗುಣವಾಗಿ ಆಡಬೇಕು. ಒಬ್ಬ ಆಟಗಾರನಾಗಿ ನಾನು ನನ್ನ ಜವಾಬ್ದಾರಿಯನ್ನು ನಿಭಾಯಿಸಬೇಕು” ಎಂದು ರಾಹುಲ್ ಹೇಳಿದರು.
ಇದನ್ನೂ ಓದಿ: Aadhaar ಕಾರ್ಡ್ನಲ್ಲಿ ಮೊಬೈಲ್ ನಂಬರ್ ಎಷ್ಟು ಸಾರಿ ಬದಲಾಯಿಸಬಹುದು?; ಇಲ್ಲಿದೆ ನೋಡಿ ಮಾಹಿತಿ..
ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಸರ್ ಪಟೇಲ್
“ತಂಡಕ್ಕೆ ಏನು ಅಗತ್ಯವೋ ಅದನ್ನು ಕೊಡುವುದು ಮುಖ್ಯ. ನನ್ನ ವೃತ್ತಿಜೀವನದ ಆರಂಭದಿಂದಲೂ ನಾನು ಅದನ್ನೇ ಮಾಡುತ್ತಿದ್ದೇನೆ. ನಾನು ಈ ಹಿಂದೆ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡಗಳ ನಾಯಕತ್ವ ವಹಿಸಿದ್ದೇನೆ. ಈ ಬಾರಿ, ಹರಾಜಿನಲ್ಲಿ ನನ್ನನ್ನು ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿತು. ಆದಾಗ್ಯೂ, ಹಿಂದೆ ಕ್ಯಾಪ್ಟನ್ ಆಗಿ ಒಂದಷ್ಟು ಕೆಟ್ಟ ಅನುಭವಗಳಾಗಿವೆ. ಈ ಸಂದರ್ಭದಲ್ಲಿ, ನಾನು ನಾಯಕನಾಗಿ ತಂಡದಲ್ಲಿ ಆಡುವುದಕ್ಕಿಂತ ಒಬ್ಬ ಆಟಗಾರನಾಗಿ ಮುಂದುವರಿಯಲು ಬಯಸುತ್ತೇನೆ” ಎಂದು ಹೇಳಿದರು,(ಏಜೆನ್ಸೀಸ್).