More

  ಕೆಎಲ್​ ರಾಹುಲ್, ವಿರಾಟ್​ ಕೊ​​ಹ್ಲಿ, ಧವನ್​ಗೆ ಬಡ್ತಿ

  ದುಬೈ: ಕೆಎಲ್ ರಾಹುಲ್ ಐಸಿಸಿ ಪ್ರಕಟಿಸಿದ ಟಿ20 ರ‍್ಯಾಂಕಿಂಗ್​ನಲ್ಲಿ 6ನೇ ಸ್ಥಾನಕ್ಕೇರಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಭವಿ ಬ್ಯಾಟ್ಸ್​ಮನ್ ಶಿಖರ್ ಧವನ್ ಒಂದು ಸ್ಥಾನ ಏರಿಕೆ ಕಂಡಿದ್ದಾರೆ.

  ಪುಣೆಯಲ್ಲಿ ಶುಕ್ರವಾರ ಮುಕ್ತಾಯವಾದ ಸರಣಿಯನ್ನು ಶ್ರೀಲಂಕಾ ವಿರುದ್ಧದ ಸರಣಿಯನ್ನು 2-0ಯಿಂದ ಗೆದ್ದ ಬಳಿಕ ಪ್ರಕಟವಾದ ರ್ಯಾಂಕಿಂಗ್​ನಲ್ಲಿ ಕೆಎಲ್ ರಾಹುಲ್ ವೈಯಕ್ತಿಕ ಗರಿಷ್ಠ ಸ್ಥಾನ ಪಡೆದಿದ್ದಾರೆ. ಹೆಚ್ಚುವರಿ 26 ಅಂಕ ಕಲೆಹಾಕಿರುವ ರಾಹುಲ್, ಒಟ್ಟಾರೆ 760 ರೇಟಿಂಗ್ ಅಂಕ ಹೊಂದಿದ್ದಾರೆ. ಆಸ್ಟ್ರೇಲಿಯಾದ ಗ್ಲೇನ್ ಮ್ಯಾಕ್ಸ್​ವೆಲ್​ಗಿಂತ ಕೇವಲ 6 ಅಂಕ ಹಿಂದಿದ್ದಾರೆ. ಟೆಸ್ಟ್ ಹಾಗೂ ಏಕದಿನ ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಟಿ20 ರ್ಯಾಂಕಿಂಗ್​ನಲ್ಲಿ 9ನೇ ಸ್ಥಾನದಲ್ಲಿದ್ದಾರೆ. ಶಿಖರ್ ಧವನ್ 15ನೇ ಸ್ಥಾನ ಪಡೆದಿದ್ದಾರೆ. 4 ಸ್ಥಾನ ಮೇಲೆರಿರುವ ಕರ್ನಾಟಕದ ಮನೀಷ್ ಪಾಂಡೆ 70ನೇ ಸ್ಥಾನ ಅಲಂಕರಿಸಿದ್ದಾರೆ. ತಂಡ ವಿಭಾಗದಲ್ಲಿ ಎರಡು ಅಂಕ ಸಂಗ್ರಹಿಸಿರುವ ಭಾರತ 5ನೇ ಸ್ಥಾನ ಉಳಿಸಿಕೊಂಡಿದ್ದು, ಒಟ್ಟಾರೆ 260 ಅಂಕ ಹೊಂದಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts