ಕಲಬುರಗಿ ಮೆಡಿಕಲ್ ಹಬ್ ಮಾಡುವ ಸರ್ಕಾರದ ಸಂಕಲ್ಪಕ್ಕೆ ಕೆಕೆಆರ್‌ಡಿಬಿ ಸದಾಕಾಲ ಸಹಯೋಗ
ಕಲಬುರಗಿ : ಅಭಿವೃದ್ಧಿಯ ಹಲವು ಮಾನದಂಡಗಲು ಹಾಗೂ ಸೂಚ್ಯಂಕಗಳಲ್ಲಿ ರಾಜ್ಯದ ಹಿಂದುಳಿದ ಬಾಗವಾಗಿರುವ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿನ 7 ಜಿಲ್ಲೆಗಳ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಅಭಿವೃದ್ಧಿಗೆ ಕೆಕೆಆರ್ಡಿಬಿ ಸದಾ ಬದ್ಧವಾಗಿದೆ ಎಂದು ಮಂಡಳಿಯ ಅಧ್ಯಕ್ಷರು ಹಾಗೂ ಜೇವರ್ಗಿ ಶಾಸಕರು ಆಗಿರುವ ಡಾ. ಅಜಯ ಧರ್ಮಸಿಂಗ್ ಹೇಳಿದ್ದಾರೆ.
ಕಲಬುರಗಿಯಲ್ಲಿ ಭಾನುವಾರ ಕೆಕೆಆರ್‌ಡಿಬಿ ಸಹಯೋಗದಲ್ಲಿ ಮಂಡಳಿಯ 320 ಕೋಟಿ ರು ನ ಅನುದಾನದಲ್ಲಿ ತಲೆ ಎತ್ತಿರುವ 371 ಹಾಸಿಗೆಗಳ ನಡೆದ ಜಯದೇವ ಆಸ್ಪತ್ರೆ ಲೋಕಾಪ್ರಣೆಯ ಸಮಾರಂಭದಲ್ಲಿ ಮಾತನಾಡಿದ ಅವರು, ಮಂಡಳಿಯ 320 ಕೋಟಿ ರೂ. ನೆರವಿನಿಂದ ಕಲಬುರಗಿ ಜಯದೇವ ಆಸ್ಪತ್ರೆ ನಿರ್ಮಿಸಲಾಗಿದೆ. ಇದಲ್ಲದೆ ತಾಯಿ-ಮಗು ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆ, ಸುಟ್ಟು ಗಾಯಗಳ ಘಟಕದ ನಿರ್ಮಾಣಕ್ಕೂ ಅನುದಾನ ನೀಡಿದೆ. ವೈದ್ಯಕೀಯ ಇಲಾಖೆಯೊಂದಿಗೆ ಮಂಡಲಿ ಉತ್ತಮ ಬಾಂಧವ್ಯ ಇಟ್ಟುಕೊಂಡು ಕೆಲಸ ಮಾಡುತ್ತಿದೆ ಎಂದರು.
ಸಿಎಂ ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷರಾದ ಡಾ. ಖರ್ಗೆಯವರ ಸಲಹೆಯಂತೆ ಶಿಕ್ಷಣ ಹಾಗೂ ಆರೋಗ್ಯ ರಂಗದಲ್ಲಿ ಈ ಬಾಗದಲ್ಲಿ ಹೆಚ್ಚಿನ ಆದ್ಯತೆ ನೀಡಿ ಯೋಜನೆ ರೂಪಿಸಲಾಗುತ್ತಿದೆ. ಅಕ್ಷರ, ಆರೋಗ್ಯ ರಂಗ ಸುಧಾರಣೆಗೆ ಮಂಡಳಿ ಒತ್ತು ನೀಡಿದೆ, ಹೊಸ ಯೋಜನೆಗಳು ಇದೇ ರಂಗದಲ್ಲಿ ರೂಪಿಸಲಾಗುತ್ತಿದೆ ಎಂದರು.
ಇತ್ತೀಚೆಗೆ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಕಿ ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ 857 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಒಪ್ಪಿಗೆ ನೀಡಿದ್ದು, ಇದರಲ್ಲಿ ಕ.ಕ.ಭಾಗದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣ ಮತ್ತು ಮೇಲ್ದರ್ಜೇ, ಅಂಬುಲೆನ್ಸ್ ವಾಹನ ಸೌಕರ್ಯ ಕಲ್ಪಿಸಲು 319 ಕೋಟಿ ರೂ. ಹಣ ಮಂಡಳಿ ನೀಡಲಿದೆ. ಪ್ರದೇಶದಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರ ಸುಧಾರಣೆ ಅಕ್ಷರ ಮತ್ತು ಆರೋಗ್ಯ ಆವಿಷ್ಕಾರ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಕಲಂ 371 ಜೆ ತಿದ್ದುಪಡಿಯಿಂದಾಗಿ ಈ ಭಾಗದಲ್ಲಿ ಶಿಕ್ಷಣ ಹಾಗೂ ಆರೋಗ್ಯ ರಂಗದಲ್ಲಿ ಹೆಚ್ಚಿನ ಅಭಿವೃದ್ಧಿ ಕಾಣಲಾಗುತ್ತಿದೆ. ಇದಕ್ಕೆಲ್ಲ ಹಿರಿಯರಾದ ಡಾ. ಖರ್ಗೆಯವರು ದಿ. ಧರಂಸಿಂಗ್ ಅವರ ಅವಿರತ ಪ್ರಯತ್ನ ಕಾರಣ. ಈ ರಂಗದಲ್ಲಿ ಕೆಲಸ ಮಾಡಲು ಇನ್ನೂ ಅವಕಾಶಗಲಿದ್ದು ಇವರೆಲ್ಲರ ಸಲಹೆಯಂತೆ ತಾವು ಮುಂದಡಿ ಇಡೋದಾಗಿ ಡಾ. ಅಜಯ್ ಸಿಂಗ್ ಹೇಳಿದರು.