Wednesday, 12th December 2018  

Vijayavani

Breaking News

ಇಂದು ಕೆಕೆಆರ್​ V/S ಡೆಲ್ಲಿ

Monday, 16.04.2018, 3:03 AM       No Comments

ಕೋಲ್ಕತ: ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಕೋಲ್ಕತ ನೈಟ್ ರೈಡರ್ಸ್ ತಂಡ ಐಪಿಎಲ್-11ರ ಪಂದ್ಯದಲ್ಲಿ ಡೆಲ್ಲಿ ಡೇರ್​ಡೆವಿಲ್ಸ್ ತಂಡವನ್ನು ಎದುರಿಸಲಿದೆ. ಕಳೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ವಿರುದ್ಧ ಜಯ ಸಾಧಿಸಿರುವ ಡೆಲ್ಲಿ ಮತ್ತೊಂದು ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದೆ. ದಿನೇಶ್ ಕಾರ್ತಿಕ್ ಸಾರಥ್ಯದ ತಂಡ ಆರ್​ಸಿಬಿ ತಂಡವನ್ನು ಮಣಿಸಿದ ಬಳಿಕ ಆಡಿದ ಎರಡೂ ಪಂದ್ಯಗಳಲ್ಲಿ ಸೋತಿದ್ದು, ಇದೀಗ ಹ್ಯಾಟ್ರಿಕ್ ಸೋಲಿನ ಮುಖಭಂಗ ತಪ್ಪಿಸಿಕೊಳ್ಳಲು ಹೋರಾಡಬೇಕಿದೆ. ಮತ್ತೊಂ ದೆಡೆ, ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋತು, 3ನೇ ಪಂದ್ಯದಲ್ಲಿ ಜಯ ಕಂಡಿರುವ ಡೆಲ್ಲಿ ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ.

ಗಂಭೀರ್ ಸಾರಥ್ಯದ ಡೆಲ್ಲಿ ತಂಡಕ್ಕೆ ಜೇಸನ್ ರಾಯ್ ಅಬ್ಬರದ ಬ್ಯಾಟಿಂಗ್​ನಿಂದ ಮುಂಬೈ ವಿರುದ್ಧ ಗೆಲುವು ತಂದುಕೊಟ್ಟಿದ್ದರು. ಅಜೇಯ 91 ರನ್ ಸಿಡಿಸಿದ್ದ ರಾಯ್, ಕೆಕೆಆರ್ ಪಾಲಿಗೆ ಎಚ್ಚರಿಕೆಯ ಗಂಟೆಯಾಗಿದ್ದಾರೆ. ಕಳೆದ 7 ವರ್ಷಗಳಿಂದ ಕೆಕೆಆರ್ ತಂಡ ಮುನ್ನಡೆಸಿದ್ದ ಗಂಭೀರ್, ಇದೀಗ ತಮ್ಮ ಮಾಜಿ ತಂಡವನ್ನು ಎದುರಿಸಲಿದ್ದಾರೆ. ಮತ್ತೊಂದೆಡೆ, ಕೆಕೆಆರ್ ತಂಡ ಹ್ಯಾಟ್ರಿಕ್ ಸೋಲು ತಪ್ಪಿಸಿಕೊಂಡು ಗೆಲುವಿನ ಹಳಿಗೇರಲು ಹೋರಾ ಡಬೇಕಿದೆ. ಅನುಭವಿ ರಾಬಿನ್ ಉತ್ತಪ್ಪ ಕಳೆದ ಮೂರು ಪಂದ್ಯಗಳಲ್ಲೂ ವೈಫಲ್ಯ ಅನುಭವಿಸುತ್ತಿರುವುದು ತಂಡದ ಪಾಲಿಗೆ ನುಂಗಲಾರದ ತುತ್ತಾಗಿದೆ. 19 ವಯೋಮಿತಿ ವಿಶ್ವಕಪ್ ವಿಜೇತ ಭಾರತ ತಂಡದ ಆಟಗಾರರಾದ ಶುಭ್​ವಾನ್ ಗಿಲ್, ಶಿವಂ ಮಾವಿ ಕಳೆದ ಪಂದ್ಯದಲ್ಲಿ ಐಪಿಎಲ್​ಗೆ ಪದಾರ್ಪಣೆ ಮಾಡಿದ್ದು, ಮತ್ತೊಂದು ಪಂದ್ಯದಲ್ಲಿ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

Leave a Reply

Your email address will not be published. Required fields are marked *

Back To Top