ತೇಜಸ್ವಿ ಸೂರ್ಯ ವಿರುದ್ಧ ಕೆಜೆಪಿ ಸಂಸ್ಥಾಪಕನ ಗುಡುಗು; ಕನ್ನಡ ವಿರುದ್ಧ ಮಾತನಾಡಿದ್ರೆ ನಾಲಿಗೆ ಸೀಳ್ತಿವೆ ಎಂದು ಪದ್ಮನಾಭ ಪ್ರಸನ್ನ

Latest News

ಜನಜಾಗೃತಿ ಅಭಿಯಾನಕ್ಕೆ ಅಭಿನವ ಗವಿಶ್ರೀ ಚಾಲನೆ

ಕಾರಟಗಿ: ಪಟ್ಟಣದಲ್ಲಿ ಜೆಸ್ಕಾಂನಿಂದ ಹಮ್ಮಿಕೊಂಡಿದ್ದ ವಿದ್ಯುತ್ ಅಪಾಯಗಳನ್ನು ತಪ್ಪಿಸುವ ಸುರಕ್ಷತಾ ಜನಜಾಗೃತಿ ಅಭಿಯಾನಕ್ಕೆ ಗವಿಮಠದ ಅಭಿನವ ಗವಿಶ್ರೀಗಳು ಬುಧವಾರ ಚಾಲನೆ ನೀಡಿದರು. ಜೆಸ್ಕಾಂನ ಇಇ...

ಕಲಿಕೆಗೆ ವಯಸ್ಸಿನ ಮಿತಿ ಇಲ್ಲ ಎಂಬುದನ್ನು ಮತ್ತೆ ಪ್ರೂವ್ ಮಾಡಿದ ಕೇರಳದ ಈ ಅಜ್ಜಿಯ ವಯಸ್ಸೆಷ್ಟು ಗೊತ್ತೆ?

ತಿರುವನಂತಪುರಂ: ಓದಿಗೆ ವಯಸ್ಸಿನ ಮಿತಿಯಿಲ್ಲ. ಉತ್ಸಾಹ ಹಾಗೂ ಛಲ ಓದಿಗೆ ಮುಖ್ಯ ಎಂದು ಕೇರಳದ 105 ವರ್ಷ ವಯಸ್ಸಿನ ಅಜ್ಜಿಯೊಬ್ಬರು ನಿರೂಪಿಸಿದ್ದಾರೆ. ಕೇರಳ ಸರ್ಕಾರದ...

VIDEO: ರಸ್ತೆಯಲ್ಲಿ ಎಂಬಿಎ ವಿದ್ಯಾರ್ಥಿನಿಯ ವಿಭಿನ್ನ ನೃತ್ಯ; ಇದು ಮನರಂಜನೆಗೆ ಮಾತ್ರವಲ್ಲ, ಅವಳೊಂದು ಸಂದೇಶ ಸಾರುತ್ತಿದ್ದಾಳೆ…

ಇಂದೋರ್​: ವಾಹನ ಸವಾರರಿಗೆ ಟ್ರಾಫಿಕ್​ ನಿಯಮಗಳನ್ನು ಅರ್ಥ ಮಾಡಿಸುವುದು ಟ್ರಾಫಿಕ್​ ಪೊಲೀಸರಿಗೆ ದೊಡ್ಡ ಸಾಹಸವೇ ಸರಿ. ಬೈಕ್​ ಸವಾರರು ಹೆಲ್ಮೆಟ್​ ಧರಿಸುವುದಿಲ್ಲ, ಕಾರು ಚಾಲಕರು ಸೀಟ್​...

ಮನವಿಗಾರರ ಜತೆ ಪ್ರಧಾನಿ ಮಾತುಕತೆ ಅವಧಿ 20 ನಿಮಿಷ: ಕೃಷಿಕರ ಸಮಸ್ಯೆ ಕೊಂಡೊಯ್ದ ಪವಾರ್ ಜತೆಗೆ 50 ನಿಮಿಷದ ಮಾತುಕತೆ ಯಾಕೆ?

ನವದೆಹಲಿ: ಮಹಾರಾಷ್ಟ್ರದಲ್ಲಿ ರಾಜಕೀಯ ಬೆಳವಣಿಗೆಗಳು ದಿನಕ್ಕೊಂದು ತಿರುವು ತೆಗೆದುಕೊಳ್ಳುತ್ತಿದೆ. ಹೀಗಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್​ಸಿಪಿ ನಾಯಕ ಶರದ್ ಪವಾರ್ ನಡುವಿನ...

ಗವಿಸಿದ್ಧೇಶ್ವರ ಶ್ರೀಗಳ ಸದ್ಭಾವನಾ ಯಾತ್ರೆಗೆ ಸ್ವಾಗತ, ಸಹಬಾಳ್ವೆ, ಸಾಮರಸ್ಯ ಸಂದೇಶ ಸಾರಿದ ಶ್ರೀಗಳು

ಸಿಂಧನೂರು: ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ಬುಧವಾರ ಕೊಪ್ಪಳದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ 6ನೇ ದಿನದ ಸದ್ಭಾವನಾ ಯಾತ್ರೆ ನಡೆಸಿ ಸಹಬಾಳ್ವೆ, ಸಾಮರಸ್ಯದ ಸಂದೇಶ...

ಧಾರವಾಡ: ಕನ್ನಡ ವಿಚಾರದಲ್ಲಿ ವಿರುದ್ಧವಾಗಿ ಮಾತನಾಡಿದರೆ ಅಂತವರ ನಾಲಿಗೆ ಸೀಳುವುದಾಗಿ ಕರ್ನಾಟಕ ಜನತಾ ಪಕ್ಷ (ಕೆಜೆಪಿ)ದ ಸಂಸ್ಥಾಪಕ ಪದ್ಮನಾಭ ಪ್ರಸನ್ನ ಕುಮಾರ್​ ಅವರು ಪರೋಕ್ಷವಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತೇಜಸ್ವಿ ಹೆಸರು ಹೇಳದೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಕನ್ನಡ ಹೋರಾಟಗಾರರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಅಲ್ಪನಿಗೆ ಐಶ್ವರ್ಯ ಬಂದರೆ, ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದ ಎನ್ನುವ ಹಾಗೆ ಅವರ ಸ್ಥಿತಿ ಇದೆ ಎಂದು ವ್ಯಂಗ್ಯವಾಡಿದರು.

ತೇಜಸ್ವಿನಿ‌ ಅನಂತಕುಮಾರ್​ಗೆ ಟಿಕೆಟ್ ಸಿಗಬೇಕಿತ್ತು. ಆದರೆ, ತೇಜಸ್ವಿ ಸೂರ್ಯ, ರವಿ ಸುಬ್ರಹ್ಮಣ್ಯ ಅವರ ಬಳಿ ಬಕೆಟ್ ಹಿಡಿದು ಸಂತೋಷ್​ ಹತ್ತಿರ ಟಿಕೆಟ್ ತಗೆದುಕೊಂಡು ಸಂಸದನಾಗಿದ್ದಾರೆ. ಈ ಸಂಸದ ಕನ್ನಡ ಹೋರಾಟಗಾರರ ಕ್ಷಮೆ ಕೇಳದೇ ಹೋದರೆ, ಅವರ ಮನೆಗೆ ಮುತ್ತಿಗೆ ಹಾಕುತ್ತೇವೆ. ಕನ್ನಡ ನೆಲ, ಜನ, ಭಾಷೆ, ಕನ್ನಡಿಗರ ವಿರುದ್ಧ ಮಾತನಾಡಿದರೆ ಅವರ ನಾಲಿಗೆಯನ್ನೇ ಸೀಳಿ ಹಾಕುತ್ತೇನೆ ಎಂದು ಎಚ್ಚರಿಸಿದ್ದಾರೆ.

ಬಿಜೆಪಿಯಲ್ಲಿ ಯಾವೊಬ್ಬರು ಒಳ್ಳೆಯವರಿಲ್ಲ. ವಿಧಾನಸೌಧದಲ್ಲಿ ಕುಳಿತು ನೀಲಿ ಚಿತ್ರ ನೋಡಿದ ಸವದಿ ಒಳ್ಳೆಯವರಾ? ಬಿಜೆಪಿಗೆ ಬ್ಲೂಫಿಲ್ಮ್ ನೋಡೋರೆ ಬೇಕಾಗಿದ್ದಾರೆಂದರೆ, ಏನೂ ಮಾಡೋಕೆ ಆಗೋದಿಲ್ಲ. ಅವರಿಗೆ ಜನರ ಸೇವೆ ಮಾಡೋರು ಬೇಕಾಗಿಲ್ಲ. ನೀಲಿ ಚಿತ್ರ ನೋಡುವವರು, ತೋರಿಸುವವರು ಬೇಕಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಯಡಿಯೂರಪ್ಪ‌ ನಮ್ಮ ತಂದೆ ಸಮಾನ
ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರ ಬಗ್ಗೆ ಮಾತನಾಡಿದ ಪ್ರಸನ್ನ ಅವರು ನಂದು ಮತ್ತು ಅವರದು ತಂದೆ ಮಗನ ಸಂಬಂಧ. ಮೊದಲಿನಿಂದಲೂ ಯಡಿಯೂರಪ್ಪ ಜತೆ ನನ್ನ ಸಂಬಂಧ ಚೆನ್ನಾಗಿದೆ. ಅವರಿಂದಾನೇ ನನಗೆ ಹೆಸರು ಬಂದಿದ್ದಲ್ವ? ಅವರು ಬಂದ ಮೇಲೇಯೇ ಕೆಜೆಪಿಗೆ ಒಳ್ಳೆದಾಗಿದೆ. ಒಳ್ಳೆಯದು ಮಾಡಿದವರಿಗೆ ಒಳ್ಳೆಯದೇ ಆಗಲಿ ಎಂದು ಬಯಸಬೇಕಲ್ವಾ? ಎಂದು ಹೇಳಿದರು.

ಪಾಪ ಅವರೀಗ ತುಂಬಾ ಗೊಂದಲದಲ್ಲಿದ್ದಾರೆ. ಮೊದಲಿನಿಂದಲೂ ಅವರ ಮೇಲೆ ನನಗೆ ಮೃಧು ಧೋರಣೆ ಇದೆ. ನನಗೆ ಅನ್ಯಾಯ ಆದಾಗ ಅವರ ವಿರುದ್ಧ ಮಾತಾಡಿದ್ದು, ಬೈದಿದ್ದು ಉಂಟು. ಅಪ್ಪ-ಮಕ್ಕಳ ಸಂಬಂಧ ಹಾಗೆಯೇ ಅಲ್ವಾ? ಅಪ್ಪ ಬೈದ್ರೆ ನಾವು ಹೊಡೆಯೊಲ್ಲ. ಅಪ್ಪ ಕೆಟ್ಟದು ಮಾಡಿದಾಗ ನಾವೂ ಬೈಯುತ್ತೇವೆ. ಯಡಿಯೂರಪ್ಪ ಅವರು ನಮ್ಮ ತಂದೆ ಸಮಾನರು ಎಂದು ತಿಳಿಸಿದರು.

ಭ್ರಷ್ಟಾಚಾರ ಅಪ್ಪ-ಅಮ್ಮ ಯಾರೇ ಮಾಡಿದರೂ ತಪ್ಪೇ, ನನ್ನ ಪಕ್ಷಕ್ಕೆ ಅವರು ಬಂದ ಮೇಲೆ ನನಗೆ ಏನೆಲ್ಲಾ ಮಾಡಿದ್ರೂ ಸಹಿಸಿಕೊಂಡು ಬಂದಿದ್ದೆವು. ಈಗ ಜಗಳ ಬೇಡ ಎಂದು ಇದ್ದೇವೆ. ಇದರ ಸರ್ಥ ನಾವೆಲ್ಲ‌ ಒಂದಾಗಿದೇವೆ ಎಂದಲ್ಲಾ, ನಮ್ಮ ಪಕ್ಷದಲ್ಲಿ ನಾವಿದ್ದೇವೆ. ಅವರ ಪಕ್ಷದಲ್ಲಿ ಅವರಿದ್ದಾರೆ. ಈಗ ನಮಗೂ ಅವರಿಗೂ ಸಂಬಂಧ ಇಲ್ಲ. ಮೃಧು ಧೋರಣೆ ಮಾತ್ರ ಇದೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

- Advertisement -

Stay connected

278,627FansLike
573FollowersFollow
610,000SubscribersSubscribe

ವಿಡಿಯೋ ನ್ಯೂಸ್

VIDEO: ರಸ್ತೆಯಲ್ಲಿ ಎಂಬಿಎ ವಿದ್ಯಾರ್ಥಿನಿಯ ವಿಭಿನ್ನ ನೃತ್ಯ; ಇದು ಮನರಂಜನೆಗೆ...

ಇಂದೋರ್​: ವಾಹನ ಸವಾರರಿಗೆ ಟ್ರಾಫಿಕ್​ ನಿಯಮಗಳನ್ನು ಅರ್ಥ ಮಾಡಿಸುವುದು ಟ್ರಾಫಿಕ್​ ಪೊಲೀಸರಿಗೆ ದೊಡ್ಡ ಸಾಹಸವೇ ಸರಿ. ಬೈಕ್​ ಸವಾರರು ಹೆಲ್ಮೆಟ್​ ಧರಿಸುವುದಿಲ್ಲ, ಕಾರು ಚಾಲಕರು ಸೀಟ್​ ಬೆಲ್ಟ್​ ಹಾಕಿಕೊಂಡಿರುವುದಿಲ್ಲ...ಅದರೊಟ್ಟಿಗೆ ಬೇಕಾಬಿಟ್ಟಿ ಚಾಲನೆ ಬೇರೆ....

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...

VIDEO| ಜೆಎನ್​ಯು ವಿದ್ಯಾರ್ಥಿಗಳ ಹೆಸರಿನಲ್ಲಿ ವೈರಲ್​ ಆಗಿದ್ದ ವಿಡಿಯೋದ ಅಸಲಿಯತ್ತು...

ನವದೆಹಲಿ: ಪಾಕಿಸ್ತಾನದ ಲಾಹೋರ್​​ನಲ್ಲಿ ನಡೆದಿದ್ದ ಫೈಜ್​ ಸಾಹಿತ್ಯೋತ್ಸವದಲ್ಲಿ ವಿದ್ಯಾರ್ಥಿಗಳು ಕೂಗಿದ್ದ "ಆಜಾದಿ" ಘೋಷಣೆಯ ವಿಡಿಯೋವನ್ನು ದೆಹಲಿಯ ಜವಹರ್​ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್​ಯು)ದ ವಿದ್ಯಾರ್ಥಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಶೇರ್​ ಮಾಡಲಾಗಿದೆ. "ಜೆಎನ್​ಯು...

VIDEO| ಮೀಮ್ಸ್​ ವಿಡಿಯೋ ಹರಿಬಿಡುವ ಮೂಲಕ ಸೋದರ ರಮೇಶ್​ ಜಾರಕಿಹೊಳಿಗೆ...

ಬೆಳಗಾವಿ: ಗೋಕಾಕ್​ ಕ್ಷೇತ್ರದ ಉಪಚುನಾವಣೆಯ ಕದನ ತೀವ್ರ ಕುತೂಹಲ ಮೂಡಿಸಿದೆ. ಸಹೋದರರ ನಡುವಿನ ಜಿದ್ದಾಜಿದ್ದಿಯೇ ಅದಕ್ಕೆ ನೇರ ಕಾರಣವಾಗಿದೆ. ಕಾಂಗ್ರೆಸ್​ಗೆ ಗುಡ್​ಬೈ ಹೇಳಿ ಬಿಜೆಪಿ ಸೇರಿಕೊಂಡಿರುವ ಸೋದರ ರಮೇಶ್​ ಜಾರಕಿ...

VIDEO| ಶಾಸಕ ತನ್ವೀರ್​ ಸೇಠ್​ ಹಲ್ಲೆ ಪ್ರಕರಣ: ಪೊಲೀಸ್​ ವಿಚಾರಣೆ...

ಮೈಸೂರು: ಕಾಂಗ್ರೆಸ್​ ಶಾಸಕ ಹಾಗೂ ಮಾಜಿ ಸಚಿವ ತನ್ವೀರ್‌ ಸೇಠ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸ್​ ವಿಚಾರಣೆಯ ವೇಳೆ ಸ್ಪೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ತನ್ವೀರ್‌ ಸೇಠ್ ಹತ್ಯೆಗೆ ಈ ಹಿಂದೆ...

VIDEO: ಗೋಕಾಕ್​ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಲಖನ್​, ಸತೀಶ್​ ನಾಮಪತ್ರ ಸಲ್ಲಿಕೆ;...

ಗೋಕಾಕ್​: ಡಿಸೆಂಬರ್​ 5ಕ್ಕೆ ಉಪಚುನಾವಣೆ ನಡೆಯಲಿದ್ದು ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಬಹುತೇಕ ಅನರ್ಹರೆಲ್ಲ ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ ಇವತ್ತು ಕುತೂಹಲ ಮೂಡಿಸಿದ್ದು ಗೋಕಾಕ್​ ಕ್ಷೇತ್ರ. ಇಲ್ಲಿ ಬಿಜೆಪಿಯಿಂದ ರಮೇಶ್​...

ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಬಳಸಿದ ಪರಿಸರಸ್ನೇಹಿ ಕಾರು...

ಬೆಂಗಳೂರು: ದೆಹಲಿಯಲ್ಲಿ ಮಿತಿಮೀರಿದ ವಾಯುಮಾಲಿನ್ಯ ನಿಯಂತ್ರಣಕ್ಕೆ ನಾನಾ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಆದರೂ, ವೈಯಕ್ತಿಕವಾಗಿ ಏನು ಮಾಡಬಹುದು ಎಂಬುದನ್ನು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ ಜಾವಡೇಕರ್ ತೋರಿಸಿದ್ದಾರೆ. ಅವರು...