ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಸ್ಟಾರ್ ಸುವರ್ಣ ವಾಹಿನಿ ಒಂದು ವಾರ ಪೂರ್ತಿ ಮಹಿಳಾ ಸಾಧಕಿಯರಿಂದ ‘ಕಿಚನ್ ದರ್ಬಾರ್’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ.
ಮಾ. 2ರಿಂದ 9ರವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹಿಳೆಯರು ‘ಸ್ಟಾರ್’ ಅಡುಗೆ ಮನೆಯಲ್ಲಿ ತಮ್ಮ ಕೈರುಚಿ ತೋರಲಿದ್ದಾರೆ. ಈ ವಿಶೇಷ ಕಾರ್ಯಕ್ರಮದಲ್ಲಿ ಸಾಧಕಿಯರ ದರ್ಬಾರ್ ನಡೆಯಲಿದೆ. ಮಾ.2ರಂದು ನಟಿ ವನಿತಾ ವಾಸು, 3ರಂದು ಡಿಸಿಪಿ ಇಶಾ ಪಂತ್, 4ರಂದು ರಾಯಚೂರಿನ ರೈತೆ ಕವಿತಾ ಉಮಾಶಂಕರ್, ಗುರುವಾರ ಮಕ್ಕಳ ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ, ಶುಕ್ರವಾರ ಮಾಜಿ ಶಾಸಕಿ ಬಿ.ಟಿ.ಲಲಿತಾ ನಾಯಕ್, ಶನಿವಾರ ಬಿಎಂಟಿಸಿಯ ಮೊದಲ ಬಸ್ ಚಾಲಕಿ ಪ್ರೇಮಾ, ಮಾ. 8 ಮತ್ತು 9ರಂದು ಇನ್ಪೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರು ಪಾಲ್ಗೊಳ್ಳಲಿದ್ದಾರೆ.
ವೃತ್ತಿಬದುಕಿನಲ್ಲಿ ಮಹತ್ತರ ಸಾಧನೆಗೈದಿರುವ ಈ ಮಹಿಳೆಯರು ಅಡುಗೆಮನೆಯಲ್ಲೂ ತಮ್ಮ ಕೈಚಳಕ ತೋರಿಸಲಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮಾ.2ರಿಂದ 9ರ ವರೆಗೆ ಪ್ರತಿ ದಿನ ಮಧ್ಯಾಹ್ನ 12ಕ್ಕೆ ‘ಕಿಚನ್ ದರ್ಬಾರ್’ನಲ್ಲಿ ಈ ಸಾಧಕಿಯರ ಸವಿರುಚಿ ಆಸ್ವಾದಿಸಬಹುದು.