ಮೊದಲ ಬಾರಿಯ ಮತ ಚಲಾಯಿಸಲು ಲಂಡನ್​ನಿಂದ ಆಗಮಿಸಿ ಸಂಭ್ರಮಿಸಿದ ಕಿರೀಠಿ ಜನಾರ್ದನ ರೆಡ್ಡಿ

ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮೀ ಅರುಣ ರೆಡ್ಡಿ ಮತ್ತು ಮಕ್ಕಳಾದ ಕಿರೀಠಿ ರೆಡ್ಡಿ ಮತ್ತು ಮಗಳು ಬ್ರಾಹ್ಮಿಣಿ ರೆಡ್ಡಿ ಅವರು ಅವಂಬಾವಿ ನಗರದ ಸರ್ಕಾರಿ ಶಾಲೆಯ ಮತಗಟ್ಟೆ ಸಂಖ್ಯೆ 5 ರಲ್ಲಿ ಮತದಾನ ಮಾಡಿದರು.

ಲಂಡನ್​ನಲ್ಲಿ ವ್ಯಾಸಂಗ ಮಾಡುತ್ತಿರುವ ಕಿರೀಠಿ ರೆಡ್ಡಿ ಅವರು ಮತ ಚಲಾವಣೆಗಾಗಿ ಲಂಡನ್​ನಿಂದ ಆಗಮಿಸಿದ್ದು ಈ ವೇಳೆ ಮಾತನಾಡಿದ ಅವರು, ನಾನು ಮೊದಲ ಬಾರಿ ಮತ ಚಲಾಯಿಸಿದ್ದೇನೆ. ಮತ ಚಲಾಯಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು ಪ್ರತಿಯೊಬ್ಬರು ಮತದಾನ ಮಾಡುವಂತೆ ಕೋರಿದರು.

ನಿಮ್ಮ ಮೊದಲ ಮತದಾನ ಮಾಡುವಾಗ ತಂದೆ ಇಲ್ಲ ಅಂತ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಎಲ್ಲದಕ್ಕೂ ಸೂಕ್ತ ಕಾಲ ಬರಲಿದೆ ಎಂದರು.

ನಾನು ವಿದೇಶದಲ್ಲಿ ರಾಜಕೀಯ ಶಾಸ್ತ್ರ ಓದುತ್ತಿದ್ದೇನೆ. ರಾಜಕೀಯಕ್ಕೆ ಬರುವ ಆಸೆ ಇಲ್ಲ. ಆದರೆ, ಸಮಾಜಸೇವೆ ಮಾಡಬೇಕು ಅನ್ನುವ ಆಸೆ ಇದೆ. ಒಳ್ಳೆಯ ಸಿನಿಮಾ ನಟ ಆಗಬೇಕು. ನನಗೆ ಸಿನಿಮಾ ಮೇಲೆಯೇ ಹೆಚ್ಚು ಆಸಕ್ತಿ ಇದೆ‌ ಎಂದರು.

ಜನಾರ್ದನ ರೆಡ್ಡಿ, ಮಾವ ಪರಮೇಶ್ವರ್ ರೆಡ್ಡಿ ಮತ್ತು ಅತ್ತೆ ನಾಗಲಕ್ಷ್ಮಮ್ಮ ಅವರು ಮತ ಚಲಾವಣೆ ಮಾಡಿದರು.(ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *