ವಿಜಯವಾಣಿ ಸುದ್ದಿಜಾಲ ಬೆಳಗಾವಿ
ದೇಶದಲ್ಲಿ ಹಾಲು ಮತ್ತು ಹಾಲಿನ ಉಪ ಉತ್ಪನ್ನಗಳ ಮಾರುಕಟ್ಟೆಯಲ್ಲಿ ತನ್ನ ಗುಣಮಟ್ಟದ ಉತ್ಪನ್ನಗಳ ಮೂಲಕವೇ ಮನೆ ಮಾತಾಗಿರುವ ವಿಜಯಕಾಂತ ಡೇರಿ ಮತ್ತು ಆಹಾರ ಉತ್ಪನ್ನಗಳ ಲಿಮಿಟೆಡ್ ಇದೀಗ ತನ್ನ ಗ್ರಾಹಕರಿಗಾಗಿ ಹೊಸದಾಗಿ ‘ಕಿಂಗ್ ಐಸ್ಕ್ರೀಮ್ ಪರಿಚಯಿಸಿದೆ.
ನಗರ ಹೊರವಲಯದ ಐಟಿಸಿ ಹೋಟೆಲ್ನಲ್ಲಿ ವಿಜಯಕಾಂತ ಡೇರಿ ಆಂಡ್ ಫುಡ್ ಪ್ರೊಡಕ್ಸ್ಟ್ ಲಿಮಿಟೆಡ್ನಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಂಸದ ಜಗದೀಶ ಶೆಟ್ಟರ್ ಹಾಗೂ ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ವಿಜಯಕಾಂತ ಡೇರಿಯ ‘ಕಿಂಗ್’ ಐಸ್ಕ್ರೀಮ್ ಲೋಕಾರ್ಪಣೆಗೊಳಿಸಿದರು. ವಿಜಯಕಾಂತ ಡೇರಿ ಮತ್ತು ಆಹಾರ ಉತ್ಪನ್ನಗಳ ಲಿಮಿಟೆಡ್ ಎಂಡಿ ದೀಪಾ ಸಿದ್ನಾಳ, ಉಪಾಧ್ಯಕ್ಷರಾದ ವಿಜಯಕಾಂತ ಸಿದ್ನಾಳ, ನಿವೇದಿತಾ ಸಿದ್ನಾಳ, ಶ್ರೀಮತಿ ಲಲಿತಾ ವಿಜಯ ಸಂಕೇಶ್ವರ, ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ, ವಿಜಯಾನಂದ ಟ್ರಾವೆಲ್ಸ್ ಎಂಡಿ ಶಿವಾ ಸಂಕೇಶ್ವರ ಇದ್ದರು.
ಉತ್ತರ ಕರ್ನಾಟಕ ಭಾಗದಲ್ಲಿ ಹೈನೋದ್ಯಮ ಕ್ಷೇತ್ರಕ್ಕೆ ಹೊಸ ಭಾಷ್ಯ ಬರೆದ ನವೋದ್ಯಮಿ ದಿ.ಶಿವಕಾಂತ ಎಸ್. ಸಿದ್ನಾಳ ಸ್ಥಾಪಿಸಿದ ವಿಜಯಕಾಂತ ಡೇರಿ ಆಂಡ್ ಫುಡ್ ಪ್ರೊಡಕ್ಸ್ಟ್ ಲಿಮಿಟೆಡ್ ಕಡಿಮೆ ಸಮಯದಲ್ಲಿಯೇ ಗುಣಮಟ್ಟದ ಹಾಲಿನ ಉತ್ಪನ್ನಗಳು, ಐಸ್ಕ್ರೀಮ್ ಸೇರಿ ಹಾಲಿನ ಇತರ ಉಪಉತ್ಪನ್ನಗಳ ಮೂಲಕ ಮಾರುಕಟ್ಟೆಯಲ್ಲಿ ‘ವಿಜಯ’ ಸಾಧಿಸಿದೆ. ಅಲ್ಲದೆ, ಹೊಸದಾಗಿ ಕಿಂಗ್ ಐಸ್ಕ್ರೀಮ್ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಮೂಲಕ ರಾಷ್ಟ್ರ, ಅಂತಾರಾಷ್ಟೀಯ ಮಟ್ಟಕ್ಕೆ ಮಾರುಕಟ್ಟೆ ವಿಸ್ತರಣೆಗೆ ನಾಂದಿ ಹಾಡಿದೆ.
ನೆರೆಯ ಮಹಾರಾಷ್ಟ್ರ, ಗೋವಾ ರಾಜ್ಯಗಳು, ಬೆಂಗಳೂರು, ಮೈಸೂರು, ಕಲಬುರಗಿ, ಮಂಗಳೂರು, ವಿಜಯಪುರ, ಧಾರಾವಾಡ ಸೇರಿ ರಾಜ್ಯಾದ್ಯಂತ ಹಾಲಿನ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಛಾಪು ಮೂಡಿಸಿರುವ ವಿಜಯಕಾಂತ ಡೇರಿ ಆಂಡ್ ಫುಡ್ ಪ್ರೊಡಕ್ಸ್ಟ್ ಲಿಮಿಟೆಡ್ ಲಕ್ಷಾಂತರ ಗ್ರಾಹಕರ ಬಳಗವನ್ನು ಹೊಂದಿದೆ. ಗುಣಮಟ್ಟಕ್ಕೆ ಮತ್ತೊಂದು ಹೆಸರು ವಿಜಯಕಾಂತ ಡೇರಿ ಎಂಬ ಖ್ಯಾತಿ ಪಡೆದುಕೊಂಡಿದೆ. ಈ ರಾಜ್ಯಗಳಿಗೆ ನಿತ್ಯ ಲಕ್ಷಾಂತರ ಲೀಟರ್ ಹಾಲು ಮಾರಾಟ ಮಾಡುತ್ತಿದೆ. ಸುಮಾರು 300 ಮಾದರಿಯ ಹಾಲಿನ ಉತ್ಪನ್ನ ಮಾರಾಟ ಮಾಡುವ ಮೂಲಕ ಹೈನುಗಾರಿಕೆ ಕ್ಷೇತ್ರದಲ್ಲಿ ಹೊಸ ಸಾಧನೆ ಮಾಡಿದೆ. ರೈತರು, ಗ್ರಾಹಕರು ಹಾಗೂ ಹೈನುಗಾರರೇ ಬೆಳೆಸಿರುವ ಯಾವುದಾದರೂ ಡೇರಿ ಇದ್ದರೆ ಅದು ವಿಜಯಕಾಂತ ಡೇರಿ ಎಂದು ನೆರೆದ ಗಣ್ಯರು ಅಭಿಪ್ರಾಯಪಟ್ಟರು.
18 ವರ್ಷಗಳಿಂದ ಹೈನೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ವಿಜಯಕಾಂತ ಡೇರಿ ಆಂಡ್ ಫುಡ್ ಪ್ರೊಡಕ್ಸ್ ್ಟ ಲಿಮಿಟೆಡ್ನಲ್ಲಿ ನೇರ ಮತ್ತು ಪರೋಕ್ಷವಾಗಿ ಲಕ್ಷಾಂತರ ಜನರು ಉದ್ಯೋಗ ಪಡೆದುಕೊಂಡಿದ್ದಾರೆ. ಗ್ರಾಮೀಣ ಭಾಗದ ಬಡ ಕುಟುಂಬಗಳಿಗೆ, ಯುವಕರಿಗೆ ವಿಜಯಕಾಂತ ಡೇರಿ ಆಧಾರಸ್ತಂಭವಾಗಿ ಬೆಳೆದು ನಿಂತಿದೆ. ಹಾಗಾಗಿಯೇ ವಿಜಯಕಾಂತ ಡೇರಿಯ ಪ್ರತಿಯೊಂದು ಉತ್ಪನ್ನವೂ ಮಹತ್ವ ಪಡೆದುಕೊಂಡಿದೆ. ಇದೀಗ ಹೊಸದಾಗಿ ಪರಿಚಯಿಸಿದ ‘ಕಿಂಗ್’ ಐಸ್ಕ್ರೀಮ್ ಉತ್ಪನ್ನವು ಆರಂಭಕ್ಕೂ ಮುನ್ನವೇ ಹೊಸ ಸಂಚಲನ ಸೃಷ್ಟಿಸಿದೆ. ಕಿಂಗ್ ಐಸ್ಕ್ರೀಮ್ ರುಚಿ ನೋಡಲು ಗ್ರಾಹಕರು ತುದಿಗಾಲಲ್ಲಿ ನಿಂತಿದ್ದಾರೆ. ಅಲ್ಲದೆ, ಜನರೇ ಕಿಂಗ್ ಐಸ್ಕ್ರೀಮ್ ಉತ್ಪನ್ನ ಕುರಿತು ಪರಿಚಯಿಸುತ್ತಿರುವುದು ವಿಶೇಷ. ರಾಷ್ಟ್ರ, ಅಂತಾರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಐಸ್ಕ್ರೀಮ್ ಮಾರುಕಟ್ಟೆಯಲ್ಲಿ ವಿಜಯಕಾಂತ ಡೇರಿ ‘ಕಿಂಗ್’ ಐಸ್ಕ್ರೀಮ್ ಹೊಸ ಮೈಲಿಗಲ್ಲು ಸ್ಥಾಪಿಸುವುದರಲ್ಲಿ ಅನುಮಾನವೇ ಇಲ್ಲ ಎಂದು ಮಾರಾಟಗಾರರು, ವಿತರಕರು ವಿಶ್ವಾಸ, ಅಭಿಮಾನ ವ್ಯಕ್ತಪಡಿಸಿದರು.
ಉತ್ತಮ ಉತ್ಪನ್ನ ಕೊಟ್ಟರೆ ಯಶಸ್ಸು ಸಾಧ್ಯ
ಹದಿನೆಂಟು ವರ್ಷಗಳ ಹಿಂದೆ ವಿಜಯಕಾಂತ ಡೇರಿ ಆಂಡ್ ಫುಡ್ ಪ್ರೊಡಕ್ಸ್ಟ್ ಲಿಮಿಟೆಡ್ ಆರಂಭಿಸುವ ಕುರಿತು ಪುತ್ರಿ ದೀಪಾ ಮತ್ತು ಅಳಿಯ ಶಿವಕಾಂತ ಸಿದ್ನಾಳ ಅವರು ವಿಷಯ ಪ್ರಸ್ತಾಪಿಸಿದರು. ಅಲ್ಲದೆ, ‘ನಾನು ಹುಟ್ಟಿ ಬೆಳೆದ ಗ್ರಾಮದ ಜನರಿಗೆ ಉದ್ಯೋಗ ಅವಕಾಶಗಳು ಸಿಗಬೇಕು. ರೈತರಿಗೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಅದೇ ಊರಿನಲ್ಲಿ ಡೇರಿ ಆರಂಭಿಸುತ್ತಿದ್ದೇನೆ’ಎಂದರು. ಅದಕ್ಕೆ ಕೆಲ ಸಲಹೆಗಳನ್ನು ನೀಡಿ ಪ್ರೋತ್ಸಾಹಿಸಿದೆ. ಗುಣಮಟ್ಟದ ಉತ್ಪನ್ನ ಕೊಟ್ಟರೆ ಯಶಸ್ಸು ಸಾಧ್ಯ ಎಂಬುದನ್ನು ಶಿವಕಾಂತ ಸಿದ್ನಾಳ ಸಾಬೀತುಪಡಿಸಿದರು. ಹಾಲಿನ ಉಪ ಉತ್ಪನ್ನಗಳನ್ನು, ಐಸ್ಕ್ರೀಮ್ ಆರಂಭಿಸಿ ಕಡಿಮೆ ಅವಧಿಯಲ್ಲಿ ಜನಪ್ರಿಯಗೊಳಿಸಿದರು ಎಂದು ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಬಣ್ಣಿಸಿದರು.
ವಿಜಯಕಾಂತ ಡೇರಿ ಆಂಡ್ ಫುಡ್ ಪ್ರೊಡಕ್ಸ್ಟ್ ಲಿಮಿಟೆಡ್ ವತಿಯಿಂದ ಹೊಸದಾಗಿ ಕಿಂಗ್ ಐಸ್ಕ್ರೀಮ್ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. ಅದರಲ್ಲಿ 70 ನಮೂನೆಯ ಐಸ್ಕ್ರೀಮ್ಳು ಮಾರುಕಟ್ಟೆ ಬರಲಿವೆ. ಕಿಂಗ್ ಐಸ್ಕ್ರೀಮ್ ಬ್ರ್ಯಾಂಡ್ ಆಗಿ ಮಾರುಕಟ್ಟೆಯಲ್ಲಿ ಗುರುತಿಸಿಕೊಳ್ಳಬೇಕು. ನಾವು ಇಂಡಿಯಾದಲ್ಲಿಯೇ ಇದ್ದೀವಿ. ಆದರೆ, ನೀವು ಅಂತಾರಾಷ್ಟೀಯ ಮಟ್ಟಕ್ಕೆ ಬೆಳೆಯುವಂತೆ ಮೊಮ್ಮಕ್ಕಳಿಗೆ ಸಲಹೆ ನೀಡಿದ್ದೇವೆ. ಅಲ್ಲದೆ, ವಿಜಯಕಾಂತ ಸಿದ್ನಾಳ ಮತ್ತು ಶಿವಾ ಸಂಕೇಶ್ವರ ಅವರಿಗೆ ಕಿಂಗ್ ಐಸ್ಕ್ರೀಮ್ ಅನ್ನು ದುಬೈನಲ್ಲೂ ಬಿಡುಗಡೆ ಮಾಡುವಂತೆ ಸೂಚಿಸಿದ್ದೇನೆ. ಉತ್ತಮ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿದೆ. ಅದನ್ನು ನಮ್ಮ ವಿಜಯಕಾಂತ ಡೇರಿ ಆಂಡ್ ಫುಡ್ ಪ್ರೊಡಕ್ಸ್ಟ್ ಲಿಮಿಟೆಡ್ ಸದ್ಬಳಕೆ ಮಾಡಿಕೊಂಡು ಬೆಳೆಯಲಿದೆ ಎಂದು ಡಾ. ವಿಜಯ ಸಂಕೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.
ಬೃಹದಾಲದಂತೆ ಬೆಳೆದ ವಿಜಯಕಾಂತ ಡೇರಿ
ಸುಮಾರು 18 ವರ್ಷಗಳ ಹಿಂದೆ ಬೈಲಹೊಂಗಲ ತಾಲೂಕಿನ ಕುರಗುಂದ ಗ್ರಾಮದಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾದ ವಿಜಯಕಾಂತ ಡೇರಿ ಹೆಮ್ಮರವಾಗಿ ಬೆಳೆದುನಿಂತಿದೆ. ದಿ.ಶಿವಕಾಂತ ಎಸ್.ಸಿದ್ನಾಳ ಅವರ ಕನಸಿನ ಕೂಸಾಗಿರುವ ವಿಜಯಕಾಂತ ಡೇರಿ ಹೈನೋದ್ಯಮ ಕ್ಷೇತ್ರ ಹಾಗೂ ಹಾಲಿನ ಉತ್ಪನ್ನಗಳ ಕ್ಷೇತ್ರಕ್ಕೆ ಹೊಸ ಸ್ಪರ್ಶ ನೀಡಿದೆ. ಚನ್ನಮ್ಮನ ಕಿತ್ತೂರು, ಬೈಲಹೊಂಗಲ, ಬೆಳಗಾವಿ, ಖಾನಾಪುರ, ಸವದತ್ತಿ ತಾಲೂಕಿನ ಸಾವಿರಾರು ಜನರಿಗೆ ಉದ್ಯೋಗ ಅವಕಾಶ ಒದಗಿಸಿದೆ. ನೂರಾರು ಹಳ್ಳಿಗಳಲ್ಲಿ ವಿಜಯಕಾಂತ ಡೇರಿ ಮೇಲೆ ಸಾವಿರಾರು ಕುಟುಂಬಗಳು ಅವಲಂಬಿತವಾಗಿವೆ. ಬೆಳಗಾವಿ, ಧಾರವಾಡ, ಬಾಗಲಕೋಟೆ ಜಿಲ್ಲೆಗಳಿಂದ ನಿತ್ಯ ಸುಮಾರು 1.70 ಲಕ್ಷ ಹಾಲು ಶೇಖರಣೆ ಆಗುತ್ತಿದೆ. ಅಲ್ಲದೆ, ಕರ್ನಾಟಕ, ಮಹಾರಾಷ್ಟ್ರ, ಗೋವಾ ಸೇರಿ ವಿವಿಧ ರಾಜ್ಯಗಳಿಗೆ ನಿತ್ಯ ಲಕ್ಷಾಂತರ ಲೀಟರ್ ಹಾಲು ಮಾರಾಟ ಮಾಡುತ್ತಿದೆ. 300 ಮಾದರಿಯ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಹೈನುಗಾರಿಕೆ ಕ್ಷೇತ್ರದಲ್ಲಿ ಹೊಸ ಸಾಧನೆ ಮಾಡಿದೆ. ಇದೀಗ ಶಿವಕಾಂತ ಸಿದ್ನಾಳ ಅವರು ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಅವರ ಧರ್ಮಪತ್ನಿ ಶ್ರೀಮತಿ ದೀಪಾ ಸಿದ್ನಾಳ, ಪುತ್ರ ವಿಜಯಕಾಂತ ಸಿದ್ನಾಳ, ಪುತ್ರಿ ನಿವೇದಿತಾ ಸಿದ್ನಾಳ ಅವರು ಮುನ್ನಡೆಸುತ್ತಿದ್ದಾರೆ. ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ, ವ್ಯವಸ್ಥಾಪಕ ನಿರ್ದೇಶಕರಾದ ಡಾ.ಆನಂದ ಸಂಕೇಶ್ವರ ಬೆನ್ನೆಲುಬಾಗಿ ನಿಂತಿರುವುದು ವಿಜಯಕಾಂತ ಡೇರಿ ಮತ್ತು ಫುಡ್ ಪ್ರೊಡಕ್ಟ್ಸ್ ಲಿಮಿಟೆಡ್ಗೆ ಆನೆ ಬಲ ಬಂದಂತಾಗಿದೆ.
ಬೇರೆ ರಾಜ್ಯಗಳಲ್ಲೂ ವಿಜಯಕಾಂತ ಡೇರಿ: ವಿಜಯಕಾಂತ ಡೇರಿ ಆಂಡ್ ಫುಡ್ ಪ್ರೊಡಕ್ಸ್ಟ್ ಲಿಮಿಟೆಡ್ನಲ್ಲಿ ಸಾವಿರಕ್ಕೂ ಅಧಿಕ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಸಾವಿರಾರು ವಿತರಕರು, ಲಕ್ಷಾಂತರ ಗ್ರಾಹಕರು ಇದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯಕಾಂತ ಡೇರಿ ಆಂಡ್ ಫುಡ್ ಪ್ರೊಡಕ್ಸ್ಟ್ ಲಿಮಿಟೆಡ್ ವತಿಯಿಂದ ಬೇರೆ ರಾಜ್ಯಗಳಲ್ಲೂ ಡೇರಿ ಸ್ಥಾಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಡಾ.ವಿಜಯ ಸಂಕೇಶ್ವರ ಪ್ರಕಟಿಸಿದರು.
ತಂದೆ ಕನಸು ನನಸು ಮಾಡಲು ಸಂಕಲ್ಪ
ನನ್ನ ಅಜ್ಜ ಡಾ.ವಿಜಯ ಸಂಕೇಶ್ವರ, ಸಹೋದರ ವಿಜಯಕಾಂತ ಸಿದ್ನಾಳ ಅವರ ಜನ್ಮದಿನದಂದು ವಿಜಯಕಾಂತ ಡೇರಿ ಆಂಡ್ ಫುಡ್ ಪ್ರೊಡಕ್ಸ್ಟ್ ಲಿಮಿಟೆಡ್ನ ಹೊಸ ಉತ್ಪನ್ನ ‘ಕಿಂಗ್’ ಐಸ್ಕ್ರೀಮ್ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದೇವೆ. ಕಿಂಗ್ ಐಸ್ಕ್ರೀಮ್ ಗುಣಮಟ್ಟದಲ್ಲಿ ರಾಜಿ ಇಲ್ಲವೇ ಇಲ್ಲ. ಶೇ.100 ಹಾಲಿನಲ್ಲಿಯೇ ಐಸ್ಕ್ರೀಮ್ ತಯಾರಿಸಲಾಗುತ್ತಿದೆ. 70 ನಮೂನೆಯ ಐಸ್ಕ್ರೀಮ್ಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಅಂತಾರಾಷ್ಟ್ರೀಯ ಮಟ್ಟದ ವಿಜಯಕಾಂತ ಡೇರಿ ಬ್ರ್ಯಾಂಡ್ ಮಾಡುವುದು, ಎಂಎನ್ಸಿ ಕಂಪನಿಯಾಗಿ ಬೆಳೆಸಲು ನಾವು ಸಂಕಲ್ಪ ಮಾಡಿದ್ದೇವೆ. ತಂದೆಯ ಕನಸು ನನಸು ಮಾಡಲು ನಾವೆಲ್ಲ ಒಗ್ಗಟ್ಟಿನಿಂದ ಕೆಲಸ ಮಾಡಲಿದ್ದೇವೆ ಎಂದು ಉಪಾಧ್ಯಕ್ಷರಾದ ನಿವೇದಿತಾ ಸಿದ್ನಾಳ ಹೇಳಿದರು.
ವಿತರಕರು, ಸಿಬ್ಬಂದಿ ನಮ್ಮ ಪರಿವಾರ
ಸ್ಪರ್ಧಾತ್ಮಕ ಯುಗದಲ್ಲಿ ವಿಜಯಕಾಂತ ಡೇರಿ ಆಂಡ್ ಫುಡ್ ಪ್ರೊಡಕ್ಸ್ಟ್ ಲಿಮಿಟೆಡ್ಗೆ ವಿತರಕರು, ಸಿಬ್ಬಂದಿ ಬೆನ್ನೆಲುಬಾಗಿ ನಿಂತಿದ್ದಾರೆ. ಅವರ ನಿರಂತರ ಶ್ರಮ, ಶ್ರದ್ಧೆಯಿಂದಲೇ ವಿಜಯಕಾಂತ ಡೇರಿ ಯಶಸ್ವಿಯಾಗಿ ಬೆಳೆದು ನಿಂತಿದೆ. ಅವರೆಲ್ಲ ನಮ್ಮ ಪರಿವಾರ. 2008ರಲ್ಲಿ ಆರಂಭವಾದ ವಿಜಯಕಾಂತ ಡೇರಿ ಐಸ್ಕ್ರೀಮ್ ಉತ್ಪನ್ನಗಳು ಕಡಿಮೆ ಅವಧಿಯಲ್ಲಿ ಐದು ರಾಜ್ಯಗಳಲ್ಲಿ ಜನಪ್ರಿಯಗೊಂಡವು. ಗ್ರಾಹಕರ ಅಭಿರುಚಿಗೆ ತಕ್ಕಂತೆ ನಮ್ಮ ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತಿದೆ. ನಮ್ಮದು ಗುಣಮಟ್ಟಕ್ಕೆ ಮೊದಲ ಆದ್ಯತೆ. ಇದೀಗ ನಮ್ಮ ತಾತ ಡಾ. ವಿಜಯಸಂಕೇಶ್ವರ ಅವರ ಜನ್ಮದಿನದ ಅಂಗವಾಗಿ ವಿಜಯಕಾಂತ ಡೇರಿ ಆಂಡ್ ಫುಡ್ ಪ್ರೊಡಕ್ಸ್ಟ್ ಲಿಮಿಟೆಡ್ನಿಂದ ಹೊಸದಾಗಿ ‘ಕಿಂಗ್’ ಐಸ್ಕ್ರೀಮ್ ಮಾರುಕಟ್ಟೆಗೆ ಪರಿಚಯಿಸುತ್ತಿದ್ದೇವೆ. ಆರಂಭದಲ್ಲಿ ಐದು ವಿವಿಧ ನಮೂನೆಯ ಐಸ್ಕ್ರೀಮ್ಳನ್ನು ಬಿಡುಗಡೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸುಮಾರು 70 ನಮೂನೆಯ ಐಸ್ಕ್ರೀಮ್ಳನ್ನು ಮಾರುಕಟ್ಟೆಗೆ ಪರಿಚಯಿಸಲಾಗುವುದು. ವಿಜಯಕಾಂತ ಡೇರಿ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡ್ ಮಾಡಲು ಡಾ.ವಿಜಯ ಸಂಕೇಶ್ವರ ಮತ್ತು ಡಾ.ಆನಂದ ಸಂಕೇಶ್ವರ ಅವರ ಪ್ರೋತ್ಸಾಹ, ಸಹಕಾರವೇ ಕಾರಣ ಎಂದು ವಿಜಯಕಾಂತ ಡೇರಿ ಮತ್ತು ಆಹಾರ ಉತ್ಪನ್ನಗಳ ಲಿಮಿಟೆಡ್ ಚೇರ್ಮನ್ ವಿಜಯಕಾಂತ ಸಿದ್ನಾಳ ಸ್ಮರಿಸಿದರು.
ಶುದ್ಧತೆಯೇ ಕಿಂಗ್ ಐಸ್ಕ್ರೀಮ್ ಜೀವಾಳ
ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಮನೆಮಾತಾಗಿರುವ ವಿಜಯಕಾಂತ ಡೇರಿ ಆಂಡ್ ಪ್ರೊಡಕ್ಟ್ಸ್ ಕಂಪನಿ ಈಗ ಹೊಸ ‘ಕಿಂಗ್ ಐಸ್ಕ್ರೀಮ್ ಮೂಲಕ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಶುದ್ಧತೆಯನ್ನೇ ಜೀವಾಳ ಮಾಡಿಕೊಂಡಿರುವ ‘ಕಿಂಗ್ ಐಸ್ಕ್ರೀಮ್ ರುಚಿ ಮತ್ತು ಗುಣಮಟ್ಟಕ್ಕೆ ಸರಿಸಾಟಿ ಇಲ್ಲ. 70ಕ್ಕೂ ಅಧಿಕ ಐಸ್ಕ್ರೀಮ್ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದ್ದು, ವಿಶಿಷ್ಟ ರುಚಿ ಮೂಲಕ ಗ್ರಾಹಕರನ್ನು ಹಿಡಿದಿಡಲಿದೆ. ಸ್ವಾದಿಷ್ಟ, ಸುವಾಸನೆ, ನಯವಾದ ಕೆನೆಭರಿತ ಪ್ರೀಮಿಯಂ ಪದಾರ್ಥಗಳನ್ನು ಹೊಂದಿರುವ ಕಿಂಗ್ ಐಸ್ಕ್ರೀಮ್ ಪ್ರತಿ ಸ್ಕೂಪ್ನಲ್ಲೂ ಅಸಾಧಾರಣ ರುಚಿಯ ಅನುಭವ ನೀಡುವಂತೆ ಕಾಳಜಿಯಿಂದ ಸಿದ್ಧಪಡಿಸಲಾಗಿದೆ. ವಿಜಯಕಾಂತ ಡೇರಿ ಆಂಡ್ ಫುಡ್ ಪ್ರೊಡಕ್ಸ್ಟ್ ಕಂಪನಿ ಸ್ವತಃ ಹಾಲು ಸಂಗ್ರಹಣೆ ಮತ್ತು ಸಂಸ್ಕರಣಾ ಘಟಕ ಹೊಂದಿರುವುದರಿಂದ ಐಸ್ಕ್ರೀಮ್ ತಯಾರಿಕೆಯಲ್ಲಿ ಪ್ರೀಮಿಯಂ ಕ್ವಾಲಿಟಿ ಹಾಲು ಮತ್ತು ಕ್ರೀಮ್ ಬಳಕೆ ಮಾಡುತ್ತಿರುವುದು ವಿಶೇಷ.
ತರಹೇವಾರಿ ಉತ್ಪನ್ನಗಳು: ಐಸ್ಕ್ರೀಮ್ ಸ್ಟಿಕ್, ಐಸ್ಕ್ರೀಮ್ ಕೋನ್, ಐಸ್ಕ್ರೀಮ್ ಕಪ್, ಪ್ರೀಮಿಯಂ ಐಸ್ಕ್ರೀಮ್ ಕಪ್, ನಾವೆಲ್ಟಿ, ಟ್ವಿಸ್ಟ್ ಐಸ್ಕ್ರೀಮ್ ಕಪ್, ಪ್ರೀಮಿಯಂ ಐಸ್ಕ್ರೀಮ್ ಟಬ್, ಸಿಪ್ಅಪ್, ಫ್ಯಾಮಿಲಿ ಪ್ಯಾಕ್, ಬಲ್ಕ್ ಪ್ಯಾಕ್ ಸೇರಿ ವಿವಿಧ ರುಚಿಗಳಲ್ಲಿ ಐಸ್ಕ್ರೀಮ್ಳು ಲಭ್ಯವಾಗಲಿವೆ.
ಡಾ.ವಿಜಯ ಸಂಕೇಶ್ವರ ಅಪಾರ ಶ್ರಮಜೀವಿ
ಲಾಜಿಸ್ಟಿಕ್, ಪತ್ರಿಕೋದ್ಯಮ ಕ್ಷೇತ್ರದಲ್ಲಿ ದೊಡ್ಡ ಸಾಧನೆಗೈದಿರುವ ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಬಹಳ ರಿಸ್ಕ್ ತೆಗೆದುಕೊಂಡು ಉದ್ಯಮವನ್ನು ಕಟ್ಟಿ ಬೆಳೆಸಿದ್ದಾರೆ. ಅವರಲ್ಲಿರುವ ಶ್ರದ್ಧೆ, ಶಿಸ್ತು, ಪ್ರಾಮಾಣಿಕತೆಯಿಂದಾಗಿ ಇವತ್ತು ಯಶಸ್ವಿ ಉದ್ಯಮಿಯಾಗಿ ಬೆಳೆದು ನಿಂತಿದ್ದಾರೆ. ಕರ್ನಾಟಕದ ಪತ್ರಿಕೋದ್ಯಮ ಕ್ಷೇತ್ರಕ್ಕೆ ಹೊಸ ಪರಿಕಲ್ಪನೆ ನೀಡಿದ ವ್ಯಕ್ತಿ ಅವರು. ಅಪಮಾನ, ಅಪಹಾಸ್ಯ ಮಾಡಿದವರಿಗೆ ತಮ್ಮಸಾಧನೆಯ ಮೂಲಕವೇ ಉತ್ತರಿಸಿದ್ದಾರೆ. ಇವತ್ತು ವಿಜಯವಾಣಿ ದಿನಪತ್ರಿಕೆ ರಾಜ್ಯದ ನಂ.1 ಸ್ಥಾನದಲ್ಲಿದೆ. ಅವರಂತೆಯೇ ಮೊಮ್ಮಕ್ಕಳಾದ ವಿಜಯಕಾಂತ ಸಿದ್ನಾಳ್, ನಿವೇದಿತಾ ಸಿದ್ನಾಳ ಬೆಳೆಯಬೇಕು ಎಂದು ಸಂಸದ ಜಗದೀಶ ಶೆಟ್ಟರ್ ಆಶಿಸಿದರು. ದಿ. ಶಿವಕಾಂತ ಸಿದ್ನಾಳ ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡಿದ್ದಾರೆ. ವಿಜಯಕಾಂತ ಡೇರಿ ಆಂಡ್ ಫುಡ್ ಪ್ರೊಡಕ್ಸ್ಟ್ ಲಿಮಿಟೆಡ್ ಅನ್ನು ಕಷ್ಟಪಟ್ಟು ಬೆಳೆಸಿದ್ದಾರೆ. ಕಡಿಮೆ ಅವಧಿಯಲ್ಲಿ ಜನಪ್ರಿಯಗೊಳಿಸಿದ್ದಾರೆ. ಕಿಂಗ್ ಐಸ್ಕ್ರೀಮ್ ದೊಡ್ಡ ಮಟ್ಟಕ್ಕೆ ಬೆಳೆಯಲಿ. ಆಹಾರ ಕ್ಷೇತ್ರದ ಉತ್ಪನ್ನಗಳಿಗೆ ಸರ್ಕಾರಗಳು ಸಾಕಷ್ಟು ಪ್ರೋತ್ಸಾಹ ನೀಡುತ್ತಿವೆ. ವಿಜಯಕಾಂತ ಡೇರಿ ಅಂತಾರಾಷ್ಟ್ರೀಯ ಬ್ರ್ಯಾಂಡ್ ಆಗಿ ಗುರುತಿಸಿಕೊಳ್ಳಬೇಕು. ವಿಜಯಕಾಂತ ಡೇರಿ ಕೇವಲ ಸಿದ್ನಾಳ ಕುಟುಂಬಕ್ಕೆ ಸೀಮಿತವಲ್ಲ. ನೂರಾರು ಕುಟುಂಬಗಳಿಗೆ ಆಶ್ರಯವಾಗಿದೆ. ಸಾವಿರಾರು ಜನರಿಗೆ ಉದ್ಯೋಗ ಅವಕಾಶಗಳನ್ನು ನೀಡಿದೆ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಮಹಿಳೆಯರಿಗೆ ದೀಪಾ ಸಿದ್ನಾಳ ಮಾದರಿ
ಉತ್ತರ ಕರ್ನಾಟಕ ಭಾಗದಲ್ಲಿ ಹೈನೋದ್ಯಮ ಕ್ಷೇತ್ರಕ್ಕೆ ಹೊಸ ಸ್ಪರ್ಶ ನೀಡಿರುವ ವಿಜಯಕಾಂತ ಡೇರಿ ಆಂಡ್ ಫುಡ್ ಪ್ರೊಡಕ್ಸ್ಟ್ ಲಿಮಿಟೆಡ್ ಇವತ್ತು ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿರುವುದು ಹೆಮ್ಮೆಯ ವಿಷಯ. ಉದ್ಯಮಿ ಡಾ. ವಿಜಯ ಸಂಕೇಶ್ವರ ಅವರು ತಮ್ಮ ಲಾಜಿಸ್ಟಿಕ್ ಮೂಲಕ ದೇಶದಲ್ಲಿಯೇ ದೊಡ್ಡ ಹೆಸರು ಮಾಡಿದ್ದಾರೆ. ಇದೀಗ ಅವರ ಮೊಮ್ಮಕ್ಕಳಾದ ವಿಜಯಕಾಂತ ಸಿದ್ನಾಳ, ನಿವೇದಿತಾ ಸಿದ್ನಾಳ ಅವರು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಬೇಕು. ಶಿವಕಾಂತ ಸಿದ್ನಾಳ ಅವರ ಅಕಾಲಿಕ ನಿಧನದಿಂದ ಪತ್ನಿ ದೀಪಾ ಸಿದ್ನಾಳ ಅವರು ಕುಟುಂಬದ ಜವಾಬ್ದಾರಿ ಜತೆಗೆ ವಿಜಯಕಾಂತ ಡೇರಿ ಆಂಡ್ ಫುಡ್ ಪ್ರೊಡಕ್ಸ್ಟ್ ಲಿಮಿಟೆಡ್ನ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ದೀಪಾ ಸಿದ್ನಾಳ ಅವರು ಮಹಿಳೆಯರಿಗೆ ಪ್ರೇರಣೆ ಹಾಗೂ ಮಾದರಿಯಾಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಣ್ಣಿಸಿದರು.
ಸ್ಪರ್ಧಾತ್ಮಕ ಯುಗದಲ್ಲಿ ಶಿಸ್ತು, ಶ್ರದ್ಧೆ, ಪ್ರಾಮಾಣಿಕತೆ ಇದ್ದರೆ ಮಾತ್ರ ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಒಬ್ಬ ಪ್ರಾಮಾಣಿಕ ವ್ಯಕ್ತಿ ಕಷ್ಟಪಟ್ಟು ದುಡಿದರೆ ದೊಡ್ಡ ಪ್ರಮಾಣದಲ್ಲಿ ಬೆಳೆಯಬಹುದು ಎಂಬುದಕ್ಕೆ ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರೇ ಸಾಕ್ಷಿ. ಅವರಲ್ಲಿನ ಶಿಸ್ತು, ಸಮಯಪ್ರಜ್ಞೆ, ಪ್ರಾಮಾಣಿಕತೆಯಿಂದಲೇ ಇವತ್ತು ದೊಡ್ಡ ಸಾಮ್ರಾಜ್ಯ ಕಟ್ಟಿದ್ದಾರೆ. ನಮ್ಮ ಭಾಗದ ಡಾ. ವಿಜಯ ಸಂಕೇಶ್ವರ ಅವರು ಜಮ್ಮು-ಕಾಶ್ಮೀರದಲ್ಲಿ ಲಾಜಿಸ್ಟಿಕ್ ಸೇವೆ ಆರಂಭಿಸಿದ್ದಾರೆ ಎಂಬುದನ್ನು ತಿಳಿದು ಹೆಮ್ಮೆಯಾಯಿತು. ವಿಜಯಕಾಂತ ಡೇರಿ ಸ್ಥಾಪಿಸಿ ಸಾವಿರಾರು ಕುಟುಂಬಗಳಿಗೆ ಆಶ್ರಯವಾಗಿದ್ದ ಶಿವಕಾಂತ ಸಿದ್ನಾಳ ಅವರ ಅಕಾಲಿಕ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಇದೀಗ ಅವರ ಪುತ್ರ ವಿಜಯಕಾಂತ ಸಿದ್ನಾಳ ಧೈರ್ಯವಂತ ಯುವಕ. ತಂದೆಯ ಕನಸುಗಳನ್ನು ನನಸು ಮಾಡಲು ಹೊರಟಿದ್ದಾರೆ. ಅವರಿಗೆ ಎಲ್ಲ ರೀತಿ ಸಹಕಾರ ನೀಡಲಾಗುವುದು. ದೀಪಾ ಸಿದ್ನಾಳ ಅವರು ಸಂಸ್ಕಾರದಿಂದ ಮಕ್ಕಳನ್ನು ಬೆಳೆಸಿದ್ದಾರೆ. ಆ ಇಬ್ಬರು ಮಕ್ಕಳು ತಾಯಿಗೆ ಬೆನ್ನೆಲುಬಾಗಿ ನಿಲ್ಲಬೇಕು. ಶಿಸ್ತು, ಬದ್ಧತೆ, ಶ್ರಮದಿಂದ ನಿಮ್ಮ ಕುಟುಂಬ ಬೆಳೆದು ಬಂದಿದೆ. ಆ ತಾಯಿಯ ಹೆಮ್ಮೆಯ ಮಕ್ಕಳಾಗಿ ಜೀವನ ಮಾಡಬೇಕು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಮನವಿ ಮಾಡಿದರು.
ಬಡವರಿಗೆ ಬೆಳಕಾಗಿ ನಿಂತಿರುವ ವಿಜಯಕಾಂತ ಡೇರಿ ಆಂಡ್ ಫುಡ್ ಪ್ರೊಡಕ್ಸ್ಟ್ ಲಿಮಿಟೆಡ್ನ ಕಾರ್ಯಸಾಧನೆ ದೊಡ್ಡದು. ಗ್ರಾಮೀಣ ಭಾಗದಲ್ಲಿ ನೂರಾರು ಯುವಕರಿಗೆ ಉದ್ಯೋಗ ಅವಕಾಶ ಕಲ್ಪಿಸಿಕೊಟ್ಟಿದೆ. ಇದೀಗ ಹೊಸದಾಗಿ ಕಿಂಗ್ ಐಸ್ಕ್ರೀಮ್ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತದೆ. ವಿಜಯಕಾಂತ ಡೇರಿ ಆಂಡ್ ಫುಡ್ ಪ್ರೊಡಕ್ಸ್ಟ್ ಲಿಮಿಟೆಡ್ನ ಎಲ್ಲ ರೀತಿ ಸಹಕಾರ ನೀಡುತ್ತೇವೆ.
| ರೋಹಿಣಿ ಪಾಟೀಲ ಕೆಪಿಸಿಸಿ ಸದಸ್ಯೆ