ಬಾವಿಗೆ ಬಿದ್ದ ಕಾಳಿಂಗ ಸರ್ಪ ರಕ್ಷಣೆ

ಕುಂದಾಪುರ: ಸಿದ್ದಾಪುರ ಗ್ರಾಮದ ಅತ್ಮಿಜೆಡ್ಡು ಎಂಬಲ್ಲಿ ಚಂದ್ರ ಕೊಠಾರಿ ಅವರ ಮನೆಯ ಬಾವಿಗೆ ಶುಕ್ರವಾರ ಬೆಳಗ್ಗೆ ಬಿದ್ದಿದ್ದ ಕಾಳಿಂಗ ಸರ್ಪವನ್ನು ಶಂಕರನಾರಾಯಣ ಅರಣ್ಯ ಇಲಾಖೆ ಸಿಬ್ಬಂದಿ ಕೃಷ್ಣಮೂರ್ತಿ ಹೆಬ್ಬಾರ್ ಸುಮಾರು ಒಂದು ಗಂಟೆ ಕಾರ್ಯಾಚರಣೆ ನಡೆಸಿ ಸೆರೆಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟರು. ಕಾಳಿಂಗ ಸರ್ಪ 13 ಅಡಿ ಉದ್ದವಿದ್ದು, 15 ಕೆ.ಜಿ ತೂಕವಿತ್ತು. ಈ ಮೂಲಕ ಕೃಷ್ಣಮೂರ್ತಿ 77 ಕಾಳಿಂಗ ಸರ್ಪವನ್ನು ಸೆರೆ ಹಿಡಿದಿದ್ದಾರೆ.