ಮುಂಬೈ: ಭಾರತದ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಮತ್ತೊಮ್ಮೆ ಬಾಲಿವುಡ್ ನಟಿ ಕಿಮ್ ಶರ್ಮ ಜತೆಗೆ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.
ಈ ಮುನ್ನ ಗೋವಾದಲ್ಲಿ ಕಿಮ್ ಶರ್ಮ ಜತೆಗೆ ಡೇಟಿಂಗ್‌ಗೆ ತೆರಳಿದ್ದ ಲಿಯಾಂಡರ್ ಪೇಸ್ ಇದೀಗ ಮುಂಬೈನಲ್ಲಿ ನಾಯಿ ಜತೆಗೆ ವಾಕಿಂಗ್‌ಗೆ ಹೋದ ಸಮಯದಲ್ಲಿ ಮಾಧ್ಯಮ ಛಾಯಾಗ್ರಾಹಕರ ಕಣ್ಣಿಗೆ ಬಿದ್ದಿದ್ದಾರೆ.
ಇದನ್ನೂ ಓದಿ: VIDEO | ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬಿದ್ದು ಎದ್ದು ಓಡಿ ಗೆದ್ದಳು ಡಚ್ ಓಟಗಾರ್ತಿ!
ಕಿಮ್ ಶರ್ಮ ಪಿಂಕ್ ಮ್ಯಾಕ್ಸಿ ಡ್ರೆಸ್‌ನಲ್ಲಿ ಮಿಂಚಿದ್ದರೆ, 48 ವರ್ಷದ ಪೇಸ್ ಶಾರ್ಟ್ಸ್‌ನಲ್ಲಿದ್ದರು. ಇವರಿಬ್ಬರು ತಮ್ಮಿಬ್ಬರ ರಿಲೇಷನ್‌ಷಿಪ್ ಬಗ್ಗೆ ಇದುವರೆಗೆ ಮೌನವಾಗಿಯೇ ಉಳಿದಿದ್ದಾರೆ. 8 ಡಬಲ್ಸ್ ಮತ್ತು 10 ಮಿಶ್ರ ಡಬಲ್ಸ್ ಸಹಿತ 18 ಗ್ರಾಂಡ್ ಸ್ಲಾಂ ಪ್ರಶಸ್ತಿ ಮತ್ತು 1996ರ ಅಟ್ಲಾಂಟ ಒಲಿಂಪಿಕ್ಸ್ ಕಂಚಿನ ಪದಕ ವಿಜೇತರಾಗಿರುವ ಲಿಯಾಂಡರ್ ಪೇಸ್ ಈ ಮುನ್ನ ರೂಪದರ್ಶಿ ರಿಯಾ ಪಿಳ್ಳೆ ಅವರೊಂದಿಗೆ 2005ರಿಂದ 2014ರವರೆಗೆ ಸಹ-ಜೀವನ ಸಂಬಂಧ ಹೊಂದಿದ್ದರು ಮತ್ತು ಅವರಿಗೆ ಒಬ್ಬಳು ಪುತ್ರಿ ಇದ್ದಾಳೆ.
ಕ್ರಿಕೆಟ್ ತಾರೆ ಯುವರಾಜ್ ಸಿಂಗ್ ಅವರ ಮಾಜಿ ಗೆಳತಿಯಾಗಿ ಗುರುತಿಸಲ್ಪಡುವ 41 ವರ್ಷದ ಕಿಮ್ ಶರ್ಮ, 2010ರಲ್ಲಿ ಉದ್ಯಮಿ ಅಲಿ ಪುಂಜಾನಿ ಅವರನ್ನು ವಿವಾಹವಾಗಿ ಕೆಲ ವರ್ಷಗಳ ಬಳಿಕ ವಿಚ್ಛೇದನ ಪಡೆದಿದ್ದರು.
ಅಭ್ಯಾಸದ ವೇಳೆ ತಲೆಗೆ ಚೆಂಡೇಟು, ಮೊದಲ ಟೆಸ್ಟ್‌ನಿಂದ ಮಯಾಂಕ್ ಅಗರ್ವಾಲ್ ಔಟ್