ನವದೆಹಲಿ: ಟೆನಿಸ್ ದಿಗ್ಗಜ ಆಟಗಾರ ಲಿಯಾಂಡರ್ ಪೇಸ್ ಇದೀಗ ಬಾಲಿವುಡ್ ನಟಿ ಕಿಮ್ ಶರ್ಮ ಜತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿದೆ. ಗೋವಾ ರೆಸ್ಟೋರೆಂಟ್‌ನಲ್ಲಿ ಇಬ್ಬರೂ ಜತೆಯಾಗಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಇದಕ್ಕೆ ಪುಷ್ಠಿಯಾಗಿದೆ.
ಬೀಚ್ ಹಿನ್ನೆಲೆಯಲ್ಲಿ ಇಬ್ಬರೂ ಆಪ್ತತೆಯಿಂದ ಇರುವ ರೀತಿಯಲ್ಲಿ ಪೋಸ್‌ಗಳನ್ನು ನೀಡಿದ್ದಾರೆ. ಇವರಿಬ್ಬರು ಈ ಹಿಂದೆ ಮುಂಬೈನಲ್ಲೂ ಕೆಲ ಬಾರಿ ಜತೆಯಾಗಿ ಕಾಣಿಸಿಕೊಂಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಆಂಗ್ಲರ ಚೊಚ್ಚಲ ವಿಶ್ವಕಪ್ ಗೆಲುವಿಗೆ 2ನೇ ವರ್ಷದ ಸಂಭ್ರಮ, ಫೈನಲ್ ಸೋತರೂ ಹೃದಯ ಗೆದ್ದಿತ್ತು ನ್ಯೂಜಿಲೆಂಡ್
8 ಡಬಲ್ಸ್ ಮತ್ತು 10 ಮಿಶ್ರ ಡಬಲ್ಸ್ ಸಹಿತ 18 ಗ್ರಾಂಡ್ ಸ್ಲಾಂ ಪ್ರಶಸ್ತಿ ಮತ್ತು 1996ರ ಅಟ್ಲಾಂಟ ಒಲಿಂಪಿಕ್ಸ್ ಕಂಚಿನ ಪದಕ ವಿಜೇತರಾಗಿರುವ 48 ವರ್ಷದ ಲಿಯಾಂಡರ್ ಪೇಸ್ ಈ ಮುನ್ನ ರೂಪದರ್ಶಿ ರಿಯಾ ಪಿಳ್ಳೆ ಅವರೊಂದಿಗೆ 2005ರಿಂದ 2014ರವರೆಗೆ ಸಹ-ಜೀವನ ಸಂಬಂಧ ಹೊಂದಿದ್ದರು ಮತ್ತು ಅವರಿಗೆ ಒಬ್ಬಳು ಪುತ್ರಿ ಇದ್ದಾಳೆ.
ಕ್ರಿಕೆಟ್ ತಾರೆ ಯುವರಾಜ್ ಸಿಂಗ್ ಅವರ ಮಾಜಿ ಗೆಳತಿಯಾಗಿ ಗುರುತಿಸಲ್ಪಡುವ 41 ವರ್ಷದ ಕಿಮ್ ಶರ್ಮ, 2010ರಲ್ಲಿ ಉದ್ಯಮಿ ಅಲಿ ಪುಂಜಾನಿ ಅವರನ್ನು ವಿವಾಹವಾಗಿ ಕೆಲ ವರ್ಷಗಳ ಬಳಿಕ ವಿಚ್ಛೇದನ ಪಡೆದಿದ್ದರು.
VIDEO: ಟೋಕಿಯೊ ಒಲಿಂಪಿಕ್ಸ್ ಕ್ರೀಡಾಪಟುಗಳ ಉತ್ತೇಜನಕ್ಕೆ ಸಿದ್ಧವಾಗಿದೆ ರೆಹಮಾನ್ ಹಾಡು
ಒಲಿಂಪಿಕ್ಸ್ಗೆ ಮೂಡುಬಿದಿರೆ ಆಳ್ವಾಸ್ನ ಇಬ್ಬರು ಕ್ರೀಡಾಪಟುಗಳು ಆಯ್ಕೆ