ನನಗೆ ಅಂಬಾನಿ ಕುಟುಂಬದ ಪರಿಚಯವಿರಲಿಲ್ಲ; ಅನಂತ್​ ಅಂಬಾನಿ ವಿವಾಹದಲ್ಲಿ ಭಾಗಿಯಾಗಿದ್ದ ಕಿಮ್ ಕಾರ್ಡಶಿಯಾನ್ ಹೀಗೇಳಿದ್ದೇಕೆ? | Kim Kardashian

ಮುಂಬೈ: ಮುಕೇಶ್​ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ 2024ರಲ್ಲಿ ನೆರವೇರಿತು. ಈ ವಿವಾಹ ಮಹೋತ್ಸವದಲ್ಲಿ ಹಾಲಿವುಡ್ ತಾರೆ ಕಿಮ್ ಕಾರ್ಡಶಿಯಾನ್(Kim Kardashian) ಮತ್ತು ಕ್ಲೋಯ್ ಕಾರ್ಡಶಿಯಾನ್ ಭಾಗವಹಿಸಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ ಕಿಮ್ ಕಾರ್ಡಶಿಯಾನ್ ಅವರು ಅಂಬಾನಿ ಕುಟುಂಬವನ್ನು ತಿಳಿದಿಲ್ಲ ಎಂದು ಬಹಿರಂಗಪಡಿಸಿದ್ದಾರೆ.

ಇದನ್ನು ಓದಿ: ಅಭಿಮಾನಿಯೊಂದಿಗಿನ ವಿಚಿತ್ರ ಪರಿಸ್ಥಿತಿ ನಿಭಾಯಿಸಿದ ನಟಿ; ಕಾಜೋಲ್ ತಾಳ್ಮೆಗೆ ಫ್ಯಾನ್ಸ್​​ ಬಹುಪರಾಕ್​ | Kajol

ಅಲ್ಲದೆ ಕಿಮ್ ಕಾರ್ಡಶಿಯಾನ್ ಅವರು ನೀತಾ ಅಂಬಾನಿ ಅವರನ್ನು ಕಾರ್ಯಕ್ರಮದಲ್ಲಿ ಭೇಟಿಯಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಅನಂತ್ ಅಂಬಾನಿಯ ತಾಯಿ ನೀತಾ ಅವರನ್ನು ತನ್ನ ಸ್ವಂತ ತಾಯಿಗೆ ಹೋಲಿಸಿದರು. ನೀತಾ ಅಂಬಾನಿ ಕುಟುಂಬದ ‘ಕ್ರಿಸ್ ಜೆನ್ನರ್’ ಎಂದು ಕಿಮ್ ಹೇಳಿದರು.

ಆ (ಅಂಬಾನಿ) ಕುಟುಂಬವು ಮದುವೆಗೆ ಮೊದಲು ತಮ್ಮ ಜನರಿಗೆ ಎಷ್ಟು ಸಹಾಯ ಮಾಡುತ್ತದೆ ಎಂಬುದನ್ನು ನಾನು ಹೇಳಲು ಬಯಸುತ್ತೇನೆ. ಅವರು ಪ್ರತಿದಿನ ಬೇರೆ ಬೇರೆ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದರು. ಒಂದು ದಿನ ಅವರು 5 ಸಾವಿರ ಜನರಿಗೆ ವರ್ಷದ ಪಡಿತರವನ್ನು ಪಾವತಿಸಿದರು. ಮರುದಿನ ಅವರು 2,500 ಜನರ ಮದುವೆಗೆ ಹಣ ನೀಡಿದರು. ಅವರ ಮದುವೆ ನಿಜಕ್ಕೂ ಅದ್ದೂರಿಯಾಗಿತ್ತು. ಅವರು ಇತರರಿಗೆ ನಿಜವಾಗಿಯೂ ಉತ್ತಮ ರೀತಿಯಲ್ಲಿ ಹಿಂತಿರುಗಿಸುತ್ತಿದ್ದಾರೆ ಎಂದು ತಿಳಿಸಿದರು.

ನಂತರ ಕಿಮ್ ಕಾರ್ಡಶಿಯಾನ್ ನೀತಾ ಅಂಬಾನಿಗೆ ಧನ್ಯವಾದ ಹೇಳಿ, ‘ನೀತಾ ಅಂಬಾನಿ, ವರನ ತಾಯಿ… ಅವರು ಅಂಬಾನಿ ಕುಟುಂಬದ ಕ್ರಿಸ್ ಜೆನ್ನರ್. ನನ್ನ ಜೀವನದಲ್ಲಿ ನಾನು ಭೇಟಿಯಾದ ಎಲ್ಲಾ ಜನರಲ್ಲಿ ಅವರು ಅತ್ಯಂತ ಮೃದುವಾದ ಕೈಗಳನ್ನು ಹೊಂದಿದ್ದರು. ಅಂಬಾನಿ ಕುಟುಂಬ ನನಗೆ ತಿಳಿದಿಲ್ಲ. ನನ್ನ ಕೆಲವು ಸ್ನೇಹಿತರಿಗೆ ಅವರ ಕುರಿತು ತಿಳಿದಿದೆ. ತನ್ನ ಸ್ನೇಹಿತೆ ಮತ್ತು ಆಭರಣ ವ್ಯಾಪಾರಿ ಲೊರೆನ್ ಶ್ವಾರ್ಟ್ಜ್ ಅಂಬಾನಿ ಕುಟುಂಬಕ್ಕಾಗಿ ಆಭರಣಗಳನ್ನು ವಿನ್ಯಾಸಗೊಳಿಸುತ್ತಾರೆ ಎಂದು ಹೇಳಿದರು. ಅಂಬಾನಿ ಕುಟುಂಬವು ಕಿಮ್ ಕಾರ್ಡಶಿಯಾನ್ ಅವರನ್ನು ಮದುವೆಗೆ ಆಹ್ವಾನಿಸಲು ಬಯಸುವುದಾಗಿ ಲೊರೆನ್ ಅವರಿಗೆ ತಿಳಿಸಿದರು. ಬಳಿಕ 22 ಕೆಜಿ ತೂಕದ ಮದುವೆ ಕಾರ್ಡ್ ಸಿಕ್ಕಿತು. ಬಳಿಕ ನಾನು ಆ ವಿವಾಹದಲ್ಲಿ ಭಾಗಿಯಾಗಿದ್ದೆ ಎಂದು ಹೇಳಿದರು.(ಏಜೆನ್ಸೀಸ್​​)

ನಟನೆಯಿಂದ ದೂರಾಗಲು ಬಯಸಿದ್ದೆ ಆದರೆ..; ಅಭಿಷೇಕ್​ ಬಚ್ಚನ್​ ಹೇಳಿದ್ದೇನು? | Abhishek Bachchan

Share This Article

ಸ್ನಾಕ್ಸ್​ ತಿನ್ನುವುದರಿಂದಲೂ ತೂಕ ಇಳಿಸಿಕೊಳ್ಳಬಹುದು!: ಈ ಸಿಂಪಲ್​ ಹೆಲ್ತ್​​ ಟಿಪ್ಸ್​ ಫಾಲೋ ಮಾಡಿ.. | Weight Lose

Weight Lose: ಸರಿಯಾದ ಆಯ್ಕೆಗಳೊಂದಿಗೆ ಸ್ನಾಕ್ಸ್ ತಿನ್ನುವುದರಿಂದಲೂ ಕೂಡ ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ…

ತಂದೆಯಾಗಿ ನಿಮ್ಮ ಮಗನಿಗೆ ಕಲಿಸಲೇ ಬೇಕಾದ ವಿಷಯಗಳಿವು…| Dad

Dad: ಈಗಿನ ದಿನಗಳಲ್ಲಿ ಮಕ್ಕಳನ್ನು ಬೆಳೆಸುವುದು ದೊಡ್ಡ ಸವಾಲಾಗಿದೆ. ತಮ್ಮ ಮಕ್ಕಳಿಗೆ ಶಿಕ್ಷಣ, ಶಿಸ್ತು ಮತ್ತು…

ದೇಹದ ಈ ಭಾಗಗಳ ಮೇಲೆ ಅಪ್ಪಿತಪ್ಪಿಯೂ ಟ್ಯಾಟೂ ಹಾಕಿಸಬೇಡಿ..ಅಪಾಯ ಖಂಡಿತ! Tattoo

Tattoo: ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದು ಫ್ಯಾಷನ್  ಆಗಿದೆ. ಹುಡುಗರಿಂದ ಹಿಡಿದು ಹುಡುಗಿಯರವರೆಗೆ ಎಲ್ಲರೂ ತಮ್ಮ…