ಕೃಷಿಕರನ್ನೂ ಕಾಡಿದ ಕಿಕಿ ಡ್ಯಾನ್ಸ್​, ಭತ್ತದ ಗದ್ದೆಯಲ್ಲಿ ಸಖತ್​ ಸ್ಟೆಪ್ಸ್

ಬೆಂಗಳೂರು: ನಗರವಾಸಿಗಳಿಂದ ಆರಂಭವಾಗಿ ಎಲ್ಲರನ್ನೂ ತನ್ನೆಡೆಗೆ ಸೆಳೆಯುತ್ತಿರುವ ವಿವಾದಿತ ಕಿಕಿ ಡಾನ್ಸ್​ ಸವಾಲು ಈಗ ಗ್ರಾಮೀಣ ಪ್ರದೇಶಕ್ಕೂ ಕಾಲಿಟ್ಟಿದೆ. ಆದರೆ, ಇಲ್ಲಿ ಮಾತ್ರ ಸಂಚಾರ ನಿಯಮ ಉಲ್ಲಂಘನೆಗೆ ಅವಕಾಶವಿಲ್ಲ. ಗ್ರಾಮೀಣರ ಬದುಕಿಗೆ ಕನ್ನಡಿಯಿಡಿದಂತಿದ್ದು, ಅಭಿಮಾನ ಮೂಡಿಸುವಂತಿದೆ.

ಕಾರುಗಳನ್ನ ಚಲಾಯಿಸುತ್ತಾ ಒಂದು ಕಾರಿನ ಒಂದು ಬಾಗಿಲನ್ನು ತೆರೆದಿಟ್ಟುಕೊಂಡು ಡಾನ್ಸ್ ಮಾಡಿ ಮತ್ತೆ ಕಾರಿನೊಳಕ್ಕೆ ಜಿಗಿಯುವ ಕಿಕಿ ಡ್ಯಾನ್ಸ್​ ಜಗತ್ತಿನಾದ್ಯಂತ ಫೇಮಸ್ ಆಗಿದೆ. ಜತೆಗೆ ಹಲವರನ್ನು ಅಪಾಯಕ್ಕೂ ತಳ್ಳಿದೆ.

ವಿಶೇಷವೆಂದರೆ ಇದೀಗ ಈ ಡ್ಯಾನ್ಸ್​ ರಾಜ್ಯದಲ್ಲೂ ಸಿಕ್ಕಾಪಟ್ಟೆ ಫೇಮಸ್ ಆಗುತ್ತಿದ್ದು, ಗದ್ದೆಯಲ್ಲಿ ಕೃಷಿ ಮಾಡುತ್ತಾ ಎತ್ತುಗಳನ್ನು ಓಡಿಸುತ್ತಾ ಕಿಕಿ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ.